ಆನೆಗಳು ಕಾಡಿನಿಂದ ಶಿಬಿರಕ್ಕೆ ಮರಳಿದ ನಂತರ ಕಾವಾಡಿಗರು ಆಹಾರ ನೀಡಿದ್ದರು. ಈ ವೇಳೆ ಮದ ಏರಿದ ಧನಂಜಯ ಏಕಾಏಕಿ ಕಂಜನ್ ಮೇಲೆ ದಾಳಿ ಮಾಡಿದ್ದು, ಧನಂಜಯ್ ಮಾವುತ ಮತ್ತು ಕಂಜನ್ ಆನೆಯ ಸಿಬ್ಬಂದಿ ಧನಂಜಯ್‌ನನ್ನು ಸಮಾಧಾನ ಪಡಿಸಲು ಶತ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 

ಕುಶಾಲನಗರ(ಅ.24): ಇತ್ತೀಚೆಗೆ ಮೈಸೂರು ಅರಮನೆಯ ಮುಂದೆಯೇ ಕಾದಾಟ ನಡೆಸಿದ್ದ ದಸರಾ ಗಜಪಡೆಯ ಧನಂಜಯ ಮತ್ತು ಕಂಜನ್ ಆನೆಗಳು ಮತ್ತೊಮ್ಮೆ ಜಗಳವಾಡಿದ್ದು, ಕಾದಾಟದ ವಿಡಿಯೋ ವೈರಲ್ ಆಗಿದೆ.
ತಾಲೂಕಿನ ನಂಜರಾಯಪಟ್ಟಣ ಗ್ರಾಮ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಬುಧವಾರ 2 ಆನೆಗಳ ನಡುವೆ ಭೀಕರ ಕಾದಾಟ ನಡೆದ ಪರಿಣಾಮ ಕಂಜನ್ ಆನೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಆನೆಗಳು ಕಾಡಿನಿಂದ ಶಿಬಿರಕ್ಕೆ ಮರಳಿದ ನಂತರ ಕಾವಾಡಿಗರು ಆಹಾರ ನೀಡಿದ್ದರು. ಈ ವೇಳೆ ಮದ ಏರಿದ ಧನಂಜಯ ಏಕಾಏಕಿ ಕಂಜನ್ ಮೇಲೆ ದಾಳಿ ಮಾಡಿದ್ದು, ಧನಂಜಯ್ ಮಾವುತ ಮತ್ತು ಕಂಜನ್ ಆನೆಯ ಸಿಬ್ಬಂದಿ ಧನಂಜಯ್‌ನನ್ನು ಸಮಾಧಾನ ಪಡಿಸಲು ಶತ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 

YouTube video player

ಮೈಸೂರು ದಸರಾ: 435 ಕೆ.ಜಿ. ತೂಕ ಹೆಚ್ಚಿಸಿಕೊಂಡ ಬಲಭೀಮ!

ಧನಂಜಯ್ ಆನೆ ಸೊಂಡಿಲಿನಿಂದ ಸತತವಾಗಿ ದಾಳಿ ನಡೆಸಿದೆ ಎಂದು ಶಿಬಿರದ ಉಸ್ತುವಾರಿ ಅಧಿಕಾರಿ ಉಮಾಶಂಕ‌ರ್ ತಿಳಿಸಿದ್ದಾರೆ. ಶಿಬಿರದಲ್ಲಿ ಹೆಣ್ಣಾನೆಗಳ ಕೊರತೆ ಇರುವುದು ಕೂಡ ಗಂಡಾನೆಗಳ ಇಂಥ ವರ್ತನೆಗೆ ಕಾರಣ ಎಂದು ವಲಯ ಅರಣ್ಯಾಧಿಕಾರಿ ರತನ್ ಕುಮಾರ್‌ ತಿಳಿಸಿದ್ದಾರೆ.