ಬೆಂಗ್ಳೂರು-ಕಲಬುರಗಿ ನಡುವೆ ವಾರಕ್ಕೆ ಮೂರು ಬಾರಿ ವಿಶೇಷ ರೈಲು
ಮೇ 27 ರಿಂದ ಜೂನ್ 27ರವರೆಗೆ ಪ್ರತಿ ಸೋಮವಾರ, ಬುಧವಾರ ಮತ್ತು ಗುರುವಾರ ಬೆಂಗಳೂರಿನ ಎಸ್‌ಎಂವಿಟಿಯಿಂದ ರೈಲು (06261) ರಾತ್ರಿ 23:50 ಗಂಟೆಗೆ ಹೊರಟು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮಾರ್ಗದ ಮೂಲಕ ಮರುದಿನ ಮಧ್ಯಾಹ್ನ 12:30 ಗಂಟೆಗೆ ಕಲಬುರಗಿ ನಿಲ್ದಾಣ ತಲುಪಲಿದೆ.
ಬೆಂಗಳೂರು(ಮೇ.26): ಬೇಸಿಗೆ ವೇಳೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತಿಸಲು ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಗರಗಳ ನಡುವೆ ವಾರಕ್ಕೆ ಮೂರು ಸಲ ಬೇಸಿಗೆ ವಿಶೇಷ ರೈಲು ಸಂಚರಿಸಲಾಗುತ್ತಿದೆ.
ಮೇ 27 ರಿಂದ ಜೂನ್ 27ರವರೆಗೆ ಪ್ರತಿ ಸೋಮವಾರ, ಬುಧವಾರ ಮತ್ತು ಗುರುವಾರ ಬೆಂಗಳೂರಿನ ಎಸ್‌ಎಂವಿಟಿಯಿಂದ ರೈಲು (06261) ರಾತ್ರಿ 23:50 ಗಂಟೆಗೆ ಹೊರಟು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮಾರ್ಗದ ಮೂಲಕ ಮರುದಿನ ಮಧ್ಯಾಹ್ನ 12:30 ಗಂಟೆಗೆ ಕಲಬುರಗಿ ನಿಲ್ದಾಣ ತಲುಪಲಿದೆ.
ಬೆಂಗಳೂರು: ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಆಗಸ್ಟ್ ಒಳಗೆ ಮೆಟ್ರೋ ಸಂಚಾರ ಶುರು?
ಮೇ 28ರಿಂದ ಜೂನ್ 28 ರವರೆಗೆ ರೈಲು ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಕಲಬುರಗಿಯಿಂದ ಸಂಜೆ 4:50ಕ್ಕೆ ಹೊರಟು ನಾಗಸಮುದ್ರ ಮಾರ್ಗದ ಮೂಲಕ ಮರುದಿನ ಬೆಳಗ್ಗೆ 4:45 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ದಿಕ್ಕಿನಲ್ಲೂ ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.