ಇದು ನನ್ನ ಕಾಲಾವಧಿಯಲ್ಲಿ ಆಗಿಲ್ಲ. ಬೇರೆಯವರ ಕಾಲಘಟ್ಟದಲ್ಲಿ ಆಗಿದ್ದು ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡು ನಿರ್ಧಾರ, ಕಾನೂನು ಬದ್ದವಾಗಿ ಇರುತ್ತೆ. ಹೀಗಾಗಿ ಇದರ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎನ್ನುವ ಮೂಲಕ ಸಚಿವ ಸಂಪುಟದ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಅನುಮತಿ ವಾಪಾಸ್ ವಿಚಾರ ಸಂಬಂಧ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬೆಂಗಳೂರು (ನ.25): ಇದು ನನ್ನ ಕಾಲಾವಧಿಯಲ್ಲಿ ಆಗಿಲ್ಲ. ಬೇರೆಯವರ ಕಾಲಘಟ್ಟದಲ್ಲಿ ಆಗಿದ್ದು ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡು ನಿರ್ಧಾರ, ಕಾನೂನು ಬದ್ದವಾಗಿ ಇರುತ್ತೆ. ಹೀಗಾಗಿ ಇದರ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎನ್ನುವ ಮೂಲಕ ಸಚಿವ ಸಂಪುಟದ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಅನುಮತಿ ವಾಪಾಸ್ ವಿಚಾರ ಸಂಬಂಧ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಯೊಂದಿಗೆ ಮಾತನಾಡಿದ ಅವರು, ಹಿಂದಿನ ಅವಧಿಯಲ್ಲಿ ಸ್ಪೀಕರ್ ಗಳು ತೆಗೆದುಕೊಂಡ ನಿರ್ಧಾರ, ಕ್ಯಾಬಿನೆಟ್ ಸಭೆ ತೆಗೆದುಕೊಂಡ ನಿರ್ಧಾರ ಕಾನೂನು ಬದ್ದವಾಗಿವೆ ಅನ್ನೋದು ನನ್ನ ಅಭಿಪ್ರಾಯ. ಕಾನೂನು ತಜ್ಞರ ಸಲಹೆ ಪಡೆದು ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಸ್ಪೀಕರ್ ಸ್ಥಾನ ಧರ್ಮಾಧಾರಿತವಾಗಿ ನೋಡುವಂಥದಲ್ಲ: ಖಾದರ್‌

ಇನ್ನು ಬೆಳಗಾವಿ ಅಧಿವೇಶನದ ವೇಳೆ ಸಚಿವ ಜಮೀರ್‌ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ವಿಚರಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಈಗಾಗಲೇ ಎಲ್ಲರೂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಲ್ಲದೇ ಸ್ವತಃ ಜಮೀರ್ ಸಹ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಹೀಗಿರುವಾಗ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸುವ ಅಗತ್ಯವೇ ಬರುವುದಿಲ್ಲ. ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ, ರೈತರು, ಇಡೀ ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚಿಸುವಂತಾಗಲಿ ಎಂದರು. 

ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಮುಸ್ಲಿಂ ಸ್ಪೀಕರ್‌ ಬಗ್ಗೆ ಮಾತನಾಡಿ ವಿವಾದದಲ್ಲಿ ಸಿಲುಕಿದ ಜಮೀರ್‌ ಖಾನ್

ಬೆಳಗಾವಿ ಅಧಿವೇಶನದಲ್ಲಿ ಸಂವಿಧಾನ ಬದ್ಧವಾದ ಚರ್ಚೆಗಳು ನಡೆಯಲಿ. ಅಧಿವೇಶನದಲ್ಲಿ ಸಮಸ್ಯೆಗಳ ಬಗ್ಗೆ ಇರುವ ಕಾಲಾವಕಾಶವನ್ನ ಶಾಸಕರು ಸದುಪಯೋಗ ಪಡೆಸಿಕೊಳ್ಳಬೇಕು. ಎಲ್ಲರೂ ಒಗ್ಗಟಾಗಿದ್ದುಕೊಂಡು ಗಡಿ ಭಾಗ, ರೈತರು, ಜನರ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಆಡಳಿತ, ಪ್ರತಿಪಕ್ಷ ಎಲ್ಲರೂ ಒಟ್ಟಾಗಿದ್ದುಕೊಂಡು ರಾಜ್ಯದ ಅಭಿವೃದ್ಧಿ ಪರ ಚರ್ಚೆಗೆ ಈ ಅಧಿವೇಶನ ಸದುಪಯೋಗಬೇಕು. ಪ್ರತಿಭಟನೆಗಳಿಂದ ಪರಿಹಾರ ಸಿಗುವುದಿಲ್ಲ. ಸಮಸ್ಯೆಗಳ ಪರಿಹಾರಕ್ಕೆ ಚರ್ಚೆಗಳು ಆಗಬೇಕು ಎಂದು ಅಭಿಪ್ರಾಯಪಟ್ಟರು.