Asianet Suvarna News Asianet Suvarna News

ಸ್ಪೀಕರ್ ಸ್ಥಾನ ಧರ್ಮಾಧಾರಿತವಾಗಿ ನೋಡುವಂಥದಲ್ಲ: ಖಾದರ್‌

ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ ರಾಜಕೀಯ ನೆಲೆಗಟ್ಟಿನಿಂದ ನೋಡುವಂಥದ್ದಲ್ಲ. ಅದೇ ರೀತಿ ಜಾತಿ, ಧರ್ಮಾಧಾರಿತವಾಗಿ ನೋಡುವುದಲ್ಲ. ಸಂವಿಧಾನಬದ್ಧವಾಗಿ ನೋಡುವ ಸ್ಥಾನ ಅದು. ಎಲ್ಲರೂ ನನಗೆ ಗೌರವ ಕೊಡುವುದಿದ್ದರೆ ಅದು ಯು.ಟಿ.ಖಾದರ್‌ಗೆ ಅಲ್ಲ, ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ. ನಾವು ಯಾರು ಆ ಸ್ಥಾನದಲ್ಲಿ ಕೂರುತ್ತೇವೊ ಅದರ ಗೌರವ ಉಳಿಸಿಕೊಳ್ಳಬೇಕು ಎಂದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್

Speaker UT Khader React to Minister Zameer Ahmed Khan Statement grg
Author
First Published Nov 19, 2023, 9:17 PM IST

ಮಂಗಳೂರು(ನ.19):  ಸ್ಪೀಕರ್ ಹುದ್ದೆಯ ಕುರಿತು ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿರುವ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸ್ಪೀಕರ್ ಸ್ಥಾನವನ್ನು ಜಾತಿ, ಧರ್ಮ ಮೀರಿ ನೋಡಬೇಕು. ಜಮೀರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ ರಾಜಕೀಯ ನೆಲೆಗಟ್ಟಿನಿಂದ ನೋಡುವಂಥದ್ದಲ್ಲ. ಅದೇ ರೀತಿ ಜಾತಿ, ಧರ್ಮಾಧಾರಿತವಾಗಿ ನೋಡುವುದಲ್ಲ. ಸಂವಿಧಾನಬದ್ಧವಾಗಿ ನೋಡುವ ಸ್ಥಾನ ಅದು. ಎಲ್ಲರೂ ನನಗೆ ಗೌರವ ಕೊಡುವುದಿದ್ದರೆ ಅದು ಯು.ಟಿ.ಖಾದರ್‌ಗೆ ಅಲ್ಲ, ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ. ನಾವು ಯಾರು ಆ ಸ್ಥಾನದಲ್ಲಿ ಕೂರುತ್ತೇವೊ ಅದರ ಗೌರವ ಉಳಿಸಿಕೊಳ್ಳಬೇಕು ಎಂದರು.

ಮಂಗಳೂರು: ಸಚಿವ ಜಮೀರ್‌ ಹೇಳಿಕೆಗೆ ಶಾಸಕ ಭರತ್ ಶೆಟ್ಟಿ ಆಕ್ಷೇಪ

ನನ್ನನ್ನು ಜಾತಿ‌, ಧರ್ಮದ ಆಧಾರದಲ್ಲಿ ಯಾರೂ ಆ ಪೀಠದಲ್ಲಿ ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನಬದ್ದವಾಗಿ ಕೆಲಸ ನಿರ್ವಹಿಸುವ ಭರವಸೆಯಿಂದ ಕೂರಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ. ಎಲ್ಲರಿಗೂ ಗೌರವ ಕೊಡುತ್ತಾ, ಅವರೂ ಗೌರವ ಕೊಡುವ ಹಾಗೆ ನಾನು ಸರ್ವರ ಸ್ಪೀಕರ್ ಆಗಿ ಕೆಲಸ ಮಾಡ್ತೇನೆ ಎಂದು ಪ್ರತಿಕ್ರಿಯಿಸಿದರು.

ಜಮೀರ್‌ ರಾಜೀನಾಮೆಗೆ ನಳಿನ್‌ ಆಗ್ರಹ

ವಿಧಾನಸಭಾ ಅಧ್ಯಕ್ಷ ಸ್ಥಾನ ಎಂಬುದು ಜಾತಿ, ಧರ್ಮ ಹೊರತಾಗಿ ಇರುವ ಹುದ್ದೆ. ಆದರೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಆ ಸ್ಥಾನಕ್ಕೆ ಅಗೌರವ ತೋರಿದ್ದು, ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್‌ ಅಹ್ಮದ್‌ ಖಾನ್‌ ಸ್ಪೀಕರ್‌ ಸ್ಥಾನವನ್ನು ಮತೀಯ ದೃಷ್ಟಿಯಿಂದ ನೋಡಿದ್ದಾರೆ. ಆ ಸ್ಥಾನದ ಗೌರವ ಕಡಿಮೆಯಾಗುವಂತೆ ಮಾತನಾಡಿದ್ದಾರೆ. ಅದು ಅವರ ಮಾನಸಿಕತೆಯನ್ನು ತೋರಿಸುತ್ತದೆ. ಇಂತವರು ಸಚಿವ ಸ್ಥಾನದಲ್ಲಿ ಮುಂದುವರಿಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್‌ ಖಾನ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಬೇಕು ಎಂದು ನಳಿನ್‌ ಒತ್ತಾಯಿಸಿದರು.

Follow Us:
Download App:
  • android
  • ios