ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಮುಸ್ಲಿಂ ಸ್ಪೀಕರ್ ಬಗ್ಗೆ ಮಾತನಾಡಿ ವಿವಾದದಲ್ಲಿ ಸಿಲುಕಿದ ಜಮೀರ್ ಖಾನ್
ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ಭಾಷಣದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನೀಡಿರುವ ಹೇಳಿಕೆ ಈಗ ವಿವಾದದ ಕೇಂದ್ರಬಿಂದುವಾಗಿದೆ.
ಬೆಂಗಳೂರು (ನ.17): ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ಭಾಷಣದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನೀಡಿರುವ ಹೇಳಿಕೆ ಈಗ ವಿವಾದದ ಕೇಂದ್ರಬಿಂದುವಾಗಿದೆ. ಮುಸ್ಲಿಂ ಸ್ಪೀಕರ್ ಯು.ಟಿ.ಖಾದರ್ ಅವರಿಗೂ ಬಿಜೆಪಿ ತಲೆಬಾಗುತ್ತದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ನನ್ನ ಪಕ್ಷಾಂತರ ಪ್ರಭಾವ ಪಂಚರಾಜ್ಯ ಚುನಾವಣೆ ಮೇಲೂ ಆಗಿದೆ: ಜಗದೀಶ್ ಶೆಟ್ಟರ್
ಚಾಮರಾಜಪೇಟೆ ಶಾಸಕ, ತೆಲಂಗಾಣ ವಿಧಾನ ಸಭೆ ಚುನಾವಣೆಯ ಕ್ಲಸ್ಟರ್ ಉಸ್ತುವಾರಿ ಹಾಗೂ ಸ್ಟಾರ್ ಪ್ರಚಾರಕರಾಗಿ ನೇಮಕಗೊಂಡಿರುವ ಜಮೀರ್ ಹೈದರಾಬಾದ್ನಲ್ಲಿ ನಡೆದ ಚುನಾವಣಾ ಪ್ರಚಾರದ ಭಾಷಣದ ವೇಳೆ 17 ಮಂದಿ ಮುಸ್ಲಿಮರಿಗೆ ಟಿಕೆಟ್ ನೀಡಲಾಗಿದೆ. ಈ ಪೈಕಿ 7 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಕಾಂಗ್ರೆಸ್ 5 ಮಂದಿಗೆ ಅಧಿಕಾರ ನೀಡಿದೆ. ನನಗೆ 3 ಖಾತೆಗಳನ್ನು ನೀಡಿ ಸಚಿವನನ್ನಾಗಿ ಮಾಡಿದ್ದಾರೆ. ರಹೀಮ್ ಖಾನ್ ಸಚಿವರಾಗಿದ್ದಾರೆ. ಸಲೀಂ ಅಹಮದ್ ವಿಪ್. ನಸೀರ್ ಅಹಮದ್ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯ ಇತಿಹಾಸದಲ್ಲಿ ಯಾವತ್ತೂ ಮುಸ್ಲಿಮರನ್ನು ಸ್ಪೀಕರ್ ಮಾಡಿಲ್ಲ. ಈಗ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಮುಸ್ಲಿಂ ಭಾಷಣಕಾರರನ್ನಾಗಿ ಮಾಡಿದೆ. ಈಗ ಬಿಜೆಪಿಯ ದೊಡ್ಡ ನಾಯಕರು ಕೂಡ ಸ್ಪೀಕರ್ ಯುಟಿ ಖಾದರ್ ಅವರಿಗೆ ಸಲಾಂ ಹೊಡೆಯುತ್ತಾರೆ. ಯಾರು ಇದನ್ನು ಮಾಡಿದರು? ಅದು ಕಾಂಗ್ರೆಸ್ ಪಕ್ಷ ಹೀಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆಲ್ಲುವ ಅಪೇಕ್ಷೆ: ಶಾಸಕ ಲಕ್ಷ್ಮಣ ಸವದಿ
ಕೆಲ ದಿನಗಳ ಹಿಂದೆ ಜಮೀರ್ ರಾಜಸ್ಥಾನದಲ್ಲಿ ಮಾತನಾಡುತ್ತಾ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಮುಸ್ಲಿಂ ಮತಗಳಿಂದ ಎಂದು ಹೇಳಿದ್ದರು. ಇದು ಕೂಡ ವಿವಾದ ಸೃಷ್ಟಿಸಿತ್ತು. ನಾವು ಕರ್ನಾಟಕದ ಮಸೀದಿಗಳಲ್ಲಿ ಸಭೆ ನಡೆಸಿ ಒಗ್ಗಟ್ಟಿನ ಶಕ್ತಿಗಾಗಿ ಮನವಿ ಮಾಡಿದ್ದೇವೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇದೇ ಸೂತ್ರವನ್ನು ರಾಜಸ್ಥಾನದಲ್ಲೂ ಅನುಸರಿಸುವಂತೆ ಕರೆ ನೀಡಿದ್ದರು.
ಇನ್ನು ಈ ಬಗ್ಗೆ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ, ಸ್ಪೀಕರ್ ಬಗ್ಗೆ ಸಚಿವ ಜಮೀರ್ ಅಹಮದ್ ಹೇಳಿಕೆ ವಿಚಾರವಾಗಿ ಸಚಿವರು ಕ್ಷಮೆಯಾಚಿಸಬೇಕು. ಸ್ಪೀಕರ್ ಯಾವುದೇ ಪಕ್ಷಕ್ಕೆ ಸಂಬಂಧ ಪಟ್ಟವರಲ್ಲ. ಚೈಲ್ಡಿಸ್ ಆಗಿ ಹೇಳಿಕೆ ಕೊಡೋದಕ್ಕೆ ಬಿಟ್ಟಿದ್ದು ಸರಿಯಲ್ಲ. ಸಚಿವರು ಕ್ಷಮೆಯಾಚಿಸಬೇಕು. 66 ಶಾಸಕರು ಸ್ಪೀಕರ್ ಬಂದಾಗ ಗೌರವ ಕೊಡಲು ಎದ್ದು ನಿಲ್ಲದಿದ್ದರೆ ಸಂವಿಧಾನದ ಪರಿಸ್ಥಿತಿ ಎನಾಗಬೇಡ? ಎಂದು ವಾಗ್ದಾಳಿ ನಡೆಸಿದ್ದಾರೆ.