ಹುಬ್ಬಳ್ಳಿ ಮಂಗಳೂರು ನಡುವೆ ದಸರಾ ಸ್ಪೆಷಲ್‌ ಟ್ರೇನ್‌, Via ಬೆಂಗಳೂರು!

ದಸರಾ ಹಬ್ಬದ ನಿಮಿತ್ತ, ನೈಋತ್ಯ ರೈಲ್ವೆಯು ಹುಬ್ಬಳ್ಳಿ-ಮಂಗಳೂರು ನಡುವೆ ದಸರಾ ವಿಶೇಷ ರೈಲನ್ನು ಓಡಿಸಲಿದ್ದು, ಇದು ಬೆಂಗಳೂರು ಮಾರ್ಗವಾಗಿ ಸಂಚಾರ ಮಾಡಲಿದೆ.

South western railways Dasara Special train between Hubballi Mangaluru via Bengaluru san

ಬೆಂಗಳೂರು (ಅ.19): ದಸರಾ ಹಬ್ಬದ ನಿಮಿತ್ತ ನೈಋತ್ಯ ರೈಲ್ವೆಯು ವಿಶೇಷ ರೈಲನ್ನು ಬಿಡುಗಡೆ ಮಾಡಿದೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಸೌತ್‌ ವೆಸ್ಟರ್ನ್‌ ರೈಲ್ವೆ ವಿಶೇಷ ರೈಲನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ 20 ರಂದು ಮೊದಲ ಪ್ರಯಾಣ ನಡೆಯಲಿದೆ. ದಸರಾ ಸಮಯದಲ್ಲಿ ಹೆಚ್ಚಿದ ಪ್ರಯಾಣಿಕರ ಬೇಡಿಕೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆ (SWR) ದಸರಾ ವಿಶೇಷ ರೈಲು ಸೇವೆಗಳನ್ನು 07303/07304 ಎಸ್‌ಎಸ್‌ಎಸ್‌ ಹುಬ್ಬಳ್ಳಿ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚಾರ ನಡೆಯಲಿದೆ. ಬೆಂಗಳೂರು ಮಾರ್ಗವಾಗಿ ಇದು ತೆರಳಲಿದೆ ಎಂದು ಮಾಹಿತಿ ನೀಡಿದೆ. ದಸರಾ ನಿಮಿತ್ತ 07303 ನಂಬರ್‌ನ ರೈಲು ಅಕ್ಟೋಬರ್‌ 20 ಮತ್ತು 23 ರಂದು ಹುಬ್ಬಳ್ಳಿಯಿಂದ ಈ ರೈಲು ಹೊರಡಲದ್ದು, ಮರುದಿನ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ. ಅದೇ ರೀತಿ 07304 ನಂಬರ್‌ನ ರೈಲು ಅಕ್ಟೋಬರ್‌ 21 ಮತ್ತು 24 ರಂದು ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಎಸ್‌ಎಸ್‌ಎಸ್‌ ಹುಬ್ಬಳ್ಳಿ ನಿಲ್ದಾಣಕ್ಕೆ ತಲುಪಲಿದೆ. ರೈಲು ಒಟ್ಟು 19 ಕೋಚ್‌ಗಳನ್ನು ಹೊಂದಿರಲಿದೆ ಎಂದು ಎಸ್‌ಡಬ್ಲ್ಯುಆರ್‌ ತಿಳಿಸಿದೆ. ರೈಲಿನ ದರ, ನಿಲುಗಡೆ ಮತ್ತು ಸಮಯಗಳ ಬಗ್ಗೆ ನಿರ್ದಿಷ್ಟ ವಿವರಗಳಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವಿಚಾರಣೆ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ತಿಳಿಸಿದೆ.

ಅಕ್ಟೋಬರ್‌ 20 ರಂದು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯಿಂದ ಹೊರಡಲಿರುವ ಟ್ರೇನ್‌, ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಚಿಕ್ಕ ಬಾಣಾವರ, ನೆಲಮಂಗಲ, ಕುಣಿಗಲ್‌, ಶ್ರವಣಬೆಳಗೊಳ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು, ಬಂಟ್ವಾಳ ಹಾಗೂ ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ಇರಲಿದೆ. ಮಂಗಳೂರಿಗೆ ಬೆಳಗ್ಗೆ 9.40ಕ್ಕೆ ಈ ರೈಲು ತಲುಪಲಿದೆ. ಈ ರೈಲು ಯಶವಂತಪುರಕ್ಕೆ ರಾತ್ರಿ 11.55ಕ್ಕೆ ಬರಲಿದೆ.

ದಸರಾ ಪ್ರಯುಕ್ತ ಬೆಂಗಳೂರು-ಮೈಸೂರು ನಡುವೆ ವಿಶೇಷ ರೈಲು ಸಂಚಾರ, ದಿನ-ಸಮಯ ಮಾಹಿತಿ ಇಲ್ಲಿದೆ

ಇನ್ನು ಮಂಗಳೂರಿನಿಂದ ಬಳಗ್ಗೆ 11.40ಕ್ಕೆ ಹೊರಡಲಿರುವ ರೈಲು, ರಾತ್ರಿ 9.50ಕ್ಕೆ ಬೆಂಗಳೂರಿಗೆ ಬರಲಿದೆ. ಹುಬ್ಬಳ್ಳಿಯ ಎಸ್‌ಎಸ್‌ಎಸ್‌ ನಿಲ್ದಾಣಕ್ಕೆ ಬೆಳಗ್ಗೆ 5.45ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರಾಜ್ಯದ 3 ಎಕ್ಸ್‌ಪ್ರೆಸ್‌ ರೈಲುಗಳ ಸೇವೆ ವಿಸ್ತರಣೆ, ನಿಮ್ಮ ಜಿಲ್ಲೆಯಲ್ಲಿ ಯಾವ ರೈಲುಗಳು ಸಂಚರಿಸಲಿದೆ

South western railways Dasara Special train between Hubballi Mangaluru via Bengaluru san

Latest Videos
Follow Us:
Download App:
  • android
  • ios