Asianet Suvarna News Asianet Suvarna News

ದಸರಾ ಪ್ರಯುಕ್ತ ಬೆಂಗಳೂರು-ಮೈಸೂರು ನಡುವೆ ವಿಶೇಷ ರೈಲು ಸಂಚಾರ, ದಿನ-ಸಮಯ ಮಾಹಿತಿ ಇಲ್ಲಿದೆ

ದಸರಾ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಮೈಸೂರು-ಬೆಂಗಳೂರು ಮತ್ತು ಮೈಸೂರು-ಚಾಮರಾಜನಗರ ನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ಸಂಚರಿಸುತ್ತಿದೆ. ಇಲ್ಲಿದೆ ಸಂಫೂರ್ಣ ಮಾಹಿತಿ.

Running  Special train service  between Bengaluru and Mysuru on the occasion of Dasara   gow
Author
First Published Oct 14, 2023, 11:06 AM IST

ಬೆಂಗಳೂರು (ಅ.14): ದಸರಾ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಮೈಸೂರು-ಬೆಂಗಳೂರು ಮತ್ತು ಮೈಸೂರು-ಚಾಮರಾಜನಗರ ನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ಸಂಚರಿಸುತ್ತಿದೆ. ‘ಮೈಸೂರು-ಕೆ.ಎಸ್.ಆರ್ ಬೆಂಗಳೂರು-ಮೈಸೂರು’ ಮಧ್ಯದ ಕಾಯ್ದಿರಿಸದ ವಿಶೇಷ ರೈಲು (06279/06280) 5 ಟ್ರಿಪ್ಸ್ ಸಂಚರಿಸಲಿದೆ. ಇದು ಅಕ್ಟೋಬರ್‌ 20ರಿಂದ 24ರ ರಾತ್ರಿ 11.15ಕ್ಕೆ ಮೈಸೂರು ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 2.30ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಅದೇ ರೀತಿ ಕೆ.ಎಸ್.ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅ.21ರಿಂದ 25ರವರೆಗೆ ಬೆಳಗ್ಗೆ 3ಕ್ಕೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಅದೇ ದಿನ ಬೆಳಗ್ಗೆ 6.15ಕ್ಕೆ ಮೈಸೂರು ತಲುಪಲಿದೆ.

ಒಡಿಶಾ ರೈಲು ದುರಂತದ ಬಳಿಕ ಎಚ್ಚೆತ್ತ ಇಲಾಖೆ, ರೈಲು ಚಾಲಕರಿಗೆ ಹೊಸ ನಿಯಮ

ಈ ರೈಲುಗಳು ನಾಗನಹಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಚಂದ್ರಗಿರಿ ಕೊಪ್ಪಲು ಹಾಲ್ಟ್, ಬ್ಯಾಡರಹಳ್ಳಿ, ಯಲಿಯೂರು, ಮಂಡ್ಯ, ಹನಕೆರೆ, ಮದ್ದೂರು, ಶೆಟ್ಟಿಹಳ್ಳಿ, ಚನ್ನಪಟ್ಟಣ, ರಾಮನಗರ, ಬಿಡದಿ, ಹೆಜ್ಜಾಲ, ಕೆಂಗೇರಿ ಮತ್ತು ನಾಯಂಡಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿವೆ.

ಮೈಸೂರು-ಕೆ.ಎಸ್.ಆರ್ ಬೆಂಗಳೂರು-ಮೈಸೂರು (06597/06598) ಕಾಯ್ದಿರಿಸದ ವಿಶೇಷ ರೈಲು 5 ಟ್ರಿಪ್ಸ್ ಸಂಚರಿಸಲಿದೆ. ಇದು ಅ.20ರಿಂದ 24ರವರೆಗೆ ಮಧ್ಯಾಹ್ನ 12.15ಕ್ಕೆ ಮೈಸೂರು ನಿಲ್ದಾಣದಿಂದ ಹೊರಟು ಅದೇ ದಿನ ಮಧ್ಯಾಹ್ನ 3.30ಕ್ಕೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಹಿಂದಿರುಗುವಾಗ ಮಧ್ಯಾಹ್ನ 3.45ಕ್ಕೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಅದೇ ದಿನ ಸಂಜೆ 7.20ಕ್ಕೆ ಮೈಸೂರು ನಿಲ್ದಾಣವನ್ನು ತಲುಪಲಿದೆ.

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗಡಿ ಗುರುತು, ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್‌ 

ಶಾರ್ಟ್ ಸರ್ಕ್ಯೂಟ್: ಮಾರಿಕುಪ್ಪಂ ರೈಲಿಗೆ ಬೆಂಕಿ
ಮಾಲೂರು: ಮಾರಿಕುಪ್ಪಂಗೆ ತೆರಳುತ್ತಿದ್ದ ರೈಲಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಅಂತಕದ ವಾತಾವರಣ ಸೃಷ್ಟಿಯಾದ ಘಟನೆ ಗುರುವಾರ ತಡ ರಾತ್ರಿ ಮಾಲೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರಿನಿಂದ 8.30 ಕ್ಕೆ ಹೊರಟ ಮಾರಿಕುಪ್ಪಂ ಎಕ್ಸ್‌ಪ್ರೆಸ್‌ ರೈಲು ಮಾಲೂರಿಗೆ 9.46 ವೇಳೆಗೆ ಬಂದಾಗ ರೈಲು ಭೋಗಿಯ ಮೇಲ್ಭಾಗದಲ್ಲಿರುವ ವಿದ್ಯುತ್ ಸಂಪರ್ಕದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಿಡಿಗಳು ಕಾಣಿಸಿಕೊಂಡವು. ಬಳಿಕ ಗಾಳಿಗೆ ಬೆಂಕಿ ಕೆನ್ನಾಲಿಗೆ ಹೆಚ್ಚಿದಾಗ ಗಾಬರಿಗೊಂಡ ಪ್ರಯಾಣೀಕರು ದಿಕ್ಕಪಾಲಾಗಿ ಓಡಿದರು.

ಸುಮಾರು ಎರಡು ನಿಮಿಷ ಕಾಲ ಉರಿದ ಬೆಂಕಿ ನಂದಿದ ನಂತರ ರೈಲು ಪ್ರಯಾಣ ಮತ್ತೇ ಪ್ರಾರಂಭಿಸಲಾಯಿತು. ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ರೈಲು ಬೆಂಕಿ ಬಿದ್ದ ಭೋಗಿ ಬಿಟ್ಟು ಇತರೆ ಭೋಗಿಗಳಲ್ಲಿ ಪ್ರಯಾಣಿಕರು ಪ್ರಯಾಣಿಸಿದರು. ಈ ದುರ್ಘಟನೆಯಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

Follow Us:
Download App:
  • android
  • ios