ರಾಜ್ಯದಲ್ಲಿ ಮರಳು ನೀತಿ ಕರಡು ಸಿದ್ಧ, ಶೀಘ್ರದಲ್ಲೇ ಜಾರಿ: ಆಚಾರ್
- ರಾಜ್ಯಾದ್ಯಂತ ಮರಳು ಸಮಸ್ಯೆ ಹೋಗಲಾಡಿಸಿ, ಮರಳು ಅಕ್ರಮವನ್ನು ತಡೆಯಲು ಹೊಸ ಮರಳು ನೀತಿ
- ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್
ಕೊಪ್ಪಳ (ಆ.30): ರಾಜ್ಯಾದ್ಯಂತ ಮರಳು ಸಮಸ್ಯೆ ಹೋಗಲಾಡಿಸಿ, ಮರಳು ಅಕ್ರಮವನ್ನು ತಡೆಯಲು ಹೊಸ ಮರಳು ನೀತಿಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 45 ಲಕ್ಷ ಟನ್ ಮರಳಿಗೆ ಬೇಡಿಕೆ ಇದೆ. ಎಂ.ಸ್ಯಾಂಡ್‌ನಿಂದ 30 ಲಕ್ಷ ಟನ್, ನೈಸರ್ಗಿಕವಾಗಿ ನಾಲ್ಕಾರು ಲಕ್ಷ ಟನ್ ಲಭ್ಯವಿದೆ. ಕೊರತೆ ಇರುವ 8-10 ಲಕ್ಷ ಟನ್ ಮರಳನ್ನು ನೀಡುವಲ್ಲಿ ಅಕ್ರಮಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸಲು ನೂತನ ಮರಳು ನೀತಿ ಜಾರಿಗೆ ಕರಡು ಸಿದ್ಧವಾಗಿದೆ. ಅದನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಸೂಕ್ತ ಮಾರ್ಪಾಡುಗಳೊಂದಿಗೆ ಶೀಘ್ರದಲ್ಲಿಯೇ ಜಾರಿ ಮಾಡಲಾಗುವುದು ಎಂದರು.
ಗಣಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬೀಳುವುದೇ ಕಡಿವಾಣ..!
ಮರಳು ಹಂತಗಳನ್ನು ಗುರುತಿಸಿ, ಕೆಲವೊಂದು ಹಂತಗಳನ್ನು ಹಟ್ಟಿಗೋಲ್ಡ್ ಮೈನ್ಸ್ ಕಂಪನಿಗೆ ನೀಡುವ ಪ್ರಸ್ತಾಪ ಇದೆ. ಹೀಗಾಗಿ, ಹೇರಳವಾಗಿ ದೊರೆಯುವ ಮರಳಿನ ಬ್ಲಾಕ್ ನಿರ್ಮಾಣ ಮಾಡಿ, ಹೆಚ್ಚು ಹೆಚ್ಚು ಪೂರೈಕೆಯಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದರು.