Asianet Suvarna News Asianet Suvarna News

ವಿದ್ಯುತ್ 'ಸಾಲ' ಶೀಘ್ರ ವಾಪಸ್‌: ಸಚಿವ ಜಾರ್ಜ್

ವಿದ್ಯುತ್‌ ಖರೀದಿಯಿಂದ ಬೊಕ್ಕಸಕ್ಕೆ ಹೆಚ್ಚು ಹೊರೆಯಾಗದಂತೆ ಫೆಬ್ರುವರಿ, ಮಾರ್ಚ್, ಏಪ್ರಿಲ್‌ನಲ್ಲಿ ಪಂಜಾಬ್‌ನಿಂದ 300 ಮೆ.ವ್ಯಾಟ್ ಹಾಗೂ ಉತ್ತರ ಪ್ರದೇಶದಿಂದ ಬೇಡಿಕೆಗೆ ಅನುಗುಣವಾಗಿ 100 ರಿಂದ 600 ಮೆ.ವ್ಯಾಟ್‌ವರೆಗೆ ವಿನಿಮಯದ ಆಧಾರದ ಮೇಲೆ ವಿದ್ಯುತ್‌ ಪಡೆಯಲಾಗಿತ್ತು. ಇದೀಗ ನಿರ್ದಿಷ್ಟ ಪ್ರಮಾಣದಲ್ಲಿ ಮುಂದಿನ ಮೂರು ತಿಂಗಳಲ್ಲಿ ವಿದ್ಯುತ್ ವಾಪಸು ಕಳುಹಿಸಲಾಗುವುದು: ಇಂಧನ ಸಚಿವ ಕೆ.ಜೆ. ಜಾರ್ಜ್ 

Soon Return of Electricity Loan says Minister KJ George grg
Author
First Published Jun 11, 2024, 12:45 PM IST

ಬೆಂಗಳೂರು(ಜೂ.11):  ತೀವ್ರ ಬರದ ಹೊರತಾಗಿಯೂ ವಿದ್ಯುತ್ ಉತ್ಪಾದನೆ ಹೆಚ್ಚಳ ಹಾಗೂ ಅನ್ಯ ರಾಜ್ಯಗಳಿಂದ ವಿನಿಮಯದ (ಸ್ವಾಪ್) ಆಧಾರದ ಮೇಲೆ ವಿದ್ಯುತ್ ಪಡೆದು ಬೇಸಿಗೆ ಯಲ್ಲಿ ಲೋಡ್‌ಶೆಡ್ಡಿಂಗ್‌ ಆಗದಂತೆ ನಿಭಾಯಿಸಿದ್ದೇವೆ. ಜೂ.16ರಿಂದ ಸೆ. 30ರವರೆಗೆ ಉತ್ತರ ಪ್ರದೇಶ ಹಾಗೂ ಪಂಜಾಬ್‌ನಿಂದ ಪಡೆದಿದ್ದ ವಿದ್ಯುತ್ ಹಿಂತಿರು ಗಿಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿದ್ಯುತ್‌ ಖರೀದಿಯಿಂದ ಬೊಕ್ಕಸಕ್ಕೆ ಹೆಚ್ಚು ಹೊರೆಯಾಗದಂತೆ ಫೆಬ್ರುವರಿ, ಮಾರ್ಚ್, ಏಪ್ರಿಲ್‌ನಲ್ಲಿ ಪಂಜಾಬ್‌ನಿಂದ 300 ಮೆ.ವ್ಯಾಟ್ ಹಾಗೂ ಉತ್ತರ ಪ್ರದೇಶದಿಂದ ಬೇಡಿಕೆಗೆ ಅನುಗುಣವಾಗಿ 100 ರಿಂದ 600 ಮೆ.ವ್ಯಾಟ್‌ವರೆಗೆ ವಿನಿಮಯದ ಆಧಾರದ ಮೇಲೆ ವಿದ್ಯುತ್‌ ಪಡೆಯಲಾಗಿತ್ತು. ಇದೀಗ ನಿರ್ದಿಷ್ಟ ಪ್ರಮಾಣದಲ್ಲಿ ಮುಂದಿನ ಮೂರು ತಿಂಗಳಲ್ಲಿ ವಿದ್ಯುತ್ ವಾಪಸು ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಯಾದಗಿರಿ: ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದುಬಿದ್ದ ವಿದ್ಯುತ್ ವೈರ್, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು..!

ಕಲ್ಲಿದ್ದಲು ಕೊರತೆ ಆಗಿಲ್ಲ:

ಕೇಂದ್ರ ಸರಕಾರದ ಜತೆ ಸಮನ್ವಯ ಸಾಧಿಸಿ ಅಗತ್ಯ ಕಲ್ಲಿದ್ದಲು ಸಂಗ್ರಹ ನೋಡಿಕೊಳ್ಳುವುದರೊಂದಿಗೆ, ವಿದೇಶಿ ಕಲ್ಲಿದ್ದಲು ಮಿಶ್ರಣ ಮಾಡಿ ಹೆಚ್ಚಿನ ಉತ್ಪಾದನೆಗೆ ಗಮನ ಹರಿಸಲಾಗಿತ್ತು. ಮಳೆ ಕೊರತೆ ಇದ್ದುದರಿಂದ ಜಲ ವಿದ್ಯುತ್ ಉತ್ಪಾದನೆ ಕುರಿತು ಎಚ್ಚರಿಕೆಯಿಂದ ನಿರ್ಧರಿ ಸಲಾಗುತ್ತಿತ್ತು. ಜಲ ವಿದ್ಯುತ್ ಘಟಕಗಳಿಂದ 2023-24ನೇ ಸಾಲಿನಲ್ಲಿ ಒಟ್ಟಾರೆ 8,860 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿದರೆ, 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 1,119 ಮಿಲಿಯನ್ ಯೂನಿಟ್ ಉತ್ಪಾದನೆ ಮಾಡಲಾಗಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios