Asianet Suvarna News Asianet Suvarna News

ಯಾದಗಿರಿ: ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದುಬಿದ್ದ ವಿದ್ಯುತ್ ವೈರ್, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು..!

ಬಾಲಕ ಸಮರ್ಥ ಯಾಳಗಿ ಗ್ರಾಮದ ತಮ್ಮ ಮನೆಯ ಮುಂದೆ ಆಟವಾಡುತ್ತಿದ್ದ, ಈ ಸಂದರ್ಭದಲ್ಲಿ ವಿದ್ಯುತ್ ವೈರ್ ದಿಢೀರ್ ಆಗಿ ಬಾಲಕನ ಮೇಲೆ ಹರಿದು ಬಿದ್ದಿದೆ. ಇದರಿಂದಾಗಿ ಬಾಲಕನ ಹೊಟ್ಟೆ, ಮುಖ ಹಾಗೂ ಕಾಲಿಗೆ ಗಂಭೀರವಾದ ಗಾಯಗಳಾಗಿವೆ. 

Electric Wire Fell on Boy who was Playing in Yadgir grg
Author
First Published Jun 8, 2024, 6:24 PM IST

ಯಾದಗಿರಿ(ಜೂ.08):  ಆಟವಾಡುತ್ತಿದ್ದ ಬಾಲಕನ ಮೇಲೆ ವಿದ್ಯುತ್ ವೈರ್ ಹರಿದುಬಿದ್ದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಮರ್ಥ(11) ಗಂಭೀರವಾಗಿ ಗಾಯಗೊಂಡ ಬಾಲಕನಾಗಿದ್ದಾನೆ. 

ಬಾಲಕ ಸಮರ್ಥ ಯಾಳಗಿ ಗ್ರಾಮದ ತಮ್ಮ ಮನೆಯ ಮುಂದೆ ಆಟವಾಡುತ್ತಿದ್ದ, ಈ ಸಂದರ್ಭದಲ್ಲಿ ವಿದ್ಯುತ್ ವೈರ್ ದಿಢೀರ್ ಆಗಿ ಬಾಲಕನ ಮೇಲೆ ಹರಿದು ಬಿದ್ದಿದೆ.  ಇದರಿಂದಾಗಿ ಬಾಲಕನ ಹೊಟ್ಟೆ, ಮುಖ ಹಾಗೂ ಕಾಲಿಗೆ ಗಂಭೀರವಾದ ಗಾಯಗಳಾಗಿವೆ. 

ಯಾದಗಿರಿಯ ಹಳ್ಳಿಗಳಿಗೆ ಕಾಲಿಟ್ಟ ತೆಲಂಗಾಣ, ಆಂಧ್ರದ ನಕಲಿ ಹತ್ತಿ ಬೀಜ

ವಿದ್ಯುತ್ ಅವಘಡದಿಂದ ಬಾಲಕ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಕೆಂಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios