ಏರೋ ಇಂಡಿಯಾದಲ್ಲಿ ಸೂಪರ್ ಸಾನಿಕ್ ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಯುದ್ಧ ಶಸ್ತ್ರಾಸ್ತ್ರಗಳ ನಡುವೆ ಬೆಮಲ್ (ಭಾರತ್ ಅಥ್‌ರ್ ಮೂವರ್ಸ್ ಕಂಪನಿ)ನ ಮಾವನ ರಹಿತ ಮೆಟ್ರೋ ಕಾರ್(ರೈಲು) ಮಾದರಿ ಕಣ್ಮನ ಸೆಳೆಯಿತು.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಫೆ.15) : ಏರೋ ಇಂಡಿಯಾದಲ್ಲಿ ಸೂಪರ್ ಸಾನಿಕ್ ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಯುದ್ಧ ಶಸ್ತ್ರಾಸ್ತ್ರಗಳ ನಡುವೆ ಬೆಮಲ್ (ಭಾರತ್ ಅಥ್‌ರ್ ಮೂವರ್ಸ್ ಕಂಪನಿ)ನ ಮಾವನ ರಹಿತ ಮೆಟ್ರೋ ಕಾರ್(ರೈಲು) ಮಾದರಿ ಕಣ್ಮನ ಸೆಳೆಯಿತು.
ಡ್ರೈವರ್ ಇಲ್ಲದ ಮೆಟ್ರೋ ರೈಲಿ(Metro train)ನ ಮಾದರಿಯು ಮಕ್ಕಳ ಆಟಿಕೆಯಂತೆ ಕಾಣುತ್ತಿತ್ತು. ಹೀಗಾಗಿ, ಹೆಚ್ಚು ಆಕರ್ಷಣೀಯವಾಗಿತ್ತು. ಏರೋ ಇಂಡಿಯಾ(Aero indian)ದಲ್ಲಿ ಪ್ರದರ್ಶದಲ್ಲಿದ್ದ ಚಾಲಕ ರಹಿತ ಮೆಟ್ರೋ ಮಾದರಿಯು ಈಗಾಗಲೇ ಮುಂಬೈನ ಎರಡು ಲೈನ್‌ಗಳಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯಾಚರಣೆ ನಡೆಸುತ್ತಿದೆ.
ದುರಂತ ನಡೆದ್ರೂ ಎಚ್ಚೆತ್ತುಕೊಳ್ಳದ ಮೆಟ್ರೋ ಅಧಿಕಾರಿಗಳು: ಪಿಲ್ಲರ್ ಗುಣಮಟ್ಟದಲ್ಲಿ ಅನುಮಾನ
ವಿಶೇಷ ಎಂದರೆ, ಮುಂಬೈನಲ್ಲಿ ಓಡುವ ಈ ಚಾಲಕ ರಹಿತ ಮೆಟ್ರೋ ರೈಲು ಮತ್ತು ಬೋಗಿ ಸಿದ್ಧವಾಗುತ್ತಿರುವುದು ಬೆಂಗಳೂರಿನಲ್ಲಿರುವ ಬೆಮೆಲ್ ಉತ್ಪಾದನಾ ಘಟಕದಲ್ಲಿ. ಮುಂಬೈ ಮೆಟ್ರೋಗೆ ಒಟ್ಟು 96 ರೈಲು (576 ಬೋಗಿ) ಪೂರೈಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ. 2024ರ ಅಂತ್ಯದೊಳಗೆ ಪೂರೈಕೆ ಮಾಡುವ ಒಪ್ಪಂದವಾಗಿದೆ.
ಈ ಟ್ರೈನ್‌ನ ವಿಶೇಷ ಏನು?
ಇದೊಂದು ಮುಂದಿನ ಪೀಳಿಗೆಯ ರೈಲಾಗಿದೆ. ಮೆಟ್ರೋ ರೈಲಿನಲ್ಲಿ ಚಾಲಕ ಇರದಿದ್ದರೂ ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ರೈಲು ಸಂಚಾರ ನಡೆಸಲಿದೆ. ರೈಲಿನ ಸಂಚಾರವನ್ನು ಅಪರೇಷನ್ ಕಂಟ್ರೋಲ್ ಸೆಂಟರ್‌ನಲ್ಲಿ (ಓಸಿಸಿ) ನಿಗಾ ವಹಿಸಲಾಗುತ್ತದೆ. ನಿಯಮಿತವಾಗಿ ರೈಲು ಓಡಾಟ ನಡೆಸಲಿದೆ. ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗಲಿದೆ. ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಬಹುದು. ಜತೆಗೆ ರೈಲಿನಲ್ಲಿ ಚಾಲಕ ಕುಳಿತು ಕೊಳ್ಳುವ ಸ್ಥಳ ಉಳಿತಾಯವಾಗಲಿದೆ. ಅದನ್ನು ಜನರ ಪ್ರಯಾಣಕ್ಕೆ ಬಳಕೆ ಮಾಡಬಹುದು.
380 ಮಂದಿ ಪ್ರಯಾಣ
ಚಾಲಕ ರಹಿತ ಮೆಟ್ರೋದ ಪ್ರತಿ ಬೋಗಿಯಲ್ಲಿ 380 ಮಂದಿ ಪ್ರಯಾಣ ಮಾಡಬಹುದಾಗಿದೆ. ಬೆಮೆಲ್ ಮೂರು ಮತ್ತು ಆರು ಬೋಗಿ ಎರಡು ಮಾದರಿಯಲ್ಲಿ ಮೆಟ್ರೋ ಕಾರ್‌ಗಳನ್ನು ತಯಾರಿಸುತ್ತದೆ. ಮುಂಬೈನ ಮೆಟ್ರೋಗೆ ಆರು ಬೋಗಿ ಇರುವ ಮೆಟ್ರೋ ಪೂರೈಕೆ ಮಾಡುತ್ತಿದೆ.
80 ಕಿ.ಮೀ ವೇಗ
ಬೆಮೆಲ್ ಅಭಿವೃದ್ಧಿ ಪಡಿಸಿದರುವ ಚಾಲಕ ಇಲ್ಲದ ಮೆಟ್ರೋ ರೈಲು ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್ ಸಹಾಯದಿಂದ ಈ ಬೋಗಿಗಳ ರೈಲು ಸಂಚರಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ.
ಹೊಸ ಮಾರ್ಗದಲ್ಲಿ ಮಾತ್ರವೇ ಸಂಚಾರ
ಚಾಲಕ ರಹಿತ ಮೆಟ್ರೋ ರೈಲು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಹಳಿ ಅಥವಾ ಮಾರ್ಗದಲ್ಲಿ ಓಡಾಟ ನಡೆಸುವುದಿಲ್ಲ. ಚಾಲಕ ರಹಿತ ಮೆಟ್ರೋ ರೈಲಿಗೆ ಅಗತ್ಯವಿರುವ ತಂತ್ರಜ್ಞಾನದಲ್ಲಿ ಹಳಿ ಸೇರಿದಂತೆ ಮೊದಲಾದ ವ್ಯವಸ್ಥೆ ಮಾಡಬೇಕಿದೆ. ಈ ಮೆಟ್ರೋ ಬೋಗಿಯು ನಮ್ಮ ಮೆಟ್ರೋ ಬೋಗಿಗಿಂತ ದೊಡ್ಡಗಾಗಿದೆ.
ನಮ್ಮ ಮೆಟ್ರೋದಿಂದ 318 ಕಾರ್‌ಗೆ ಟೆಂಡರ್
ಸಿಲಿಕಾನ್ ಸಿಟಿ(Silicon City) ಬೆಂಗಳೂರಿನ ಚಾಲಕ ರಹಿತ ಮೆಟ್ರೋ ಸಂಚಾರ ಬಹುತೇಕ ಖಚಿತವಾಗಿದೆ. ಎರಡನೇ ಹಂತದ ಮೆಟ್ರೋದ ಹಳದಿ ಮತ್ತು ಗುಲಾಬಿ ಬಣ್ಣದ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಟ್ರೈನ್ ಓಡಾಟ ನಡೆಸಲಿದೆ ಎಂದು ಈಗಾಗಲೇ ಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎರಡನೇ ಹಂತದ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ. ಈ ನಡುವೆ ನಮ್ಮ ಮೆಟ್ರೋ ಒಟ್ಟು 318 ಚಾಲಕ ರಹಿತ ಮೆಟ್ರೋ ಬೋಗಿ ಪೂರೈಕೆಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಿದೆ. ಬೆಮೆಲ್ ಸೇರಿದಂತೆ ಅಂತಾರಾಷ್ಟ್ರೀಯ ಕಂಪನಿಗಳು ಭಾಗಹಿಸುವ ನಿರೀಕ್ಷೆ ಇದೆ.
Bengaluru: ಮೈಸೂರು ರಸ್ತೆಯ ಮೆಟ್ರೋ ಟ್ರ್ಯಾಕ್‌ನಲ್ಲಿ ಬಿರುಕು: ತಪ್ಪಿದ ಭಾರೀ ಅನಾಹುತ
3ನೇ ಚಾಲಕ ರಹಿತ ನಗರ
ದೇಶದ ದೆಹಲಿ ಮತ್ತು ಮುಂಬೈ ನಗರದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ನಡೆಸುತ್ತಿವೆ. ಇದೀಗ ಬೆಂಗಳೂರಿನಲ್ಲಿ ಪೈಲೆಟ್ ಲೆಸ್ ಟ್ರೈನ್ ಓಡಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ಬೆಂಗಳೂರು ದೇಶದಲ್ಲಿ ಮೂರನೇ ಚಾಲಕ ರಹಿತ ರೈಲು ಸಂಚಾರ ಹೊಂದಿರುವ ನಗರವಾಗಲಿದೆ.
