Bengaluru: ಮೈಸೂರು ರಸ್ತೆಯ ಮೆಟ್ರೋ ಟ್ರ್ಯಾಕ್‌ನಲ್ಲಿ ಬಿರುಕು: ತಪ್ಪಿದ ಭಾರೀ ಅನಾಹುತ

ಸಿಲಿಕಾನ್‌ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ ಸಂಚಾರದಲ್ಲಿ ಸ್ವಲ್ಪವೇ ಅಂತರದಲ್ಲಿ ಬೃಹತ್‌ ಅನಾಹುತ ನಡೆಯುವುದು ತಪ್ಪಿದಂತಾಗಿದೆ. ಸ್ವಲ್ಪ ಯಾಮಾರಿದ್ದರೂ ದೊಡ್ಡ ಗಂಡಾಂತರ ಸಂಭವಿಸುತ್ತಿತ್ತು.

Bengaluru Namma metro track Crack in Mysore Road Major disaster missed sat

ಬೆಂಗಳೂರು (ಫೆ.07): ಸಿಲಿಕಾನ್‌ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ ಸಂಚಾರದಲ್ಲಿ ಸ್ವಲ್ಪವೇ ಅಂತರದಲ್ಲಿ ಬೃಹತ್‌ ಅನಾಹುತ ನಡೆಯುವುದು ತಪ್ಪಿದಂತಾಗಿದೆ. ಸ್ವಲ್ಪ ಯಾಮಾರಿದ್ದರೂ ದೊಡ್ಡ ಗಂಡಾಂತರ ಸಂಭವಿಸುತ್ತಿತ್ತು. ಮೆಟ್ರೋ ಲೈನ್‌ನಲ್ಲಿ ಬುರುಕುಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್‌ ಮುಕ್ತ ಸಂಚಾರಕ್ಕೆ ಅನುಕೂಲಕರ ಆಗಿರುವ ನಮ್ಮ ಮೆಟ್ರೋದಲ್ಲಿ ಬ್ಯಾಕ್ ಟು ಬ್ಯಾಕ್ ಅನಾಹುತ ಸಂಭವಿಸುತ್ತಿವೆ. ಇತ್ತೀಚೆಗೆ ಮೆಟ್ರೋ ಪಿಲ್ಲರ್‌ (Metro Piller) ನಿರ್ಮಾಣಕ್ಕೆ ಅಳವಡಿಸಿದ್ದ ಕಬ್ಬಿಣದ ಸರಳುಗಳು ಬಿದ್ದು, ತಾಯಿ, ಮಗಳ (Mother and doughter) ಜೀವಹಾನಿಯಾಗಿತ್ತು. ಈಗ ಮೆಟ್ರೋ ಲೈನ್‌ನ ಟ್ರ್ಯಾಕ್‌ನಲ್ಲಿ ಬಿರುಕು (Metro Line track Crack) ಬಿಟ್ಟುಕೊಂಡಿದ್ದು, ಅದನ್ನು ಸಾರ್ವಜನಿಕರ ಗಮನಕ್ಕೆ ತರದೇ ಬೆಂಗಳೂರು ಮೆಟ್ರೋ ರೇಲ್‌ ಕಾರ್ಪೋರೇಷನ್‌ ಲಿ. (ಬಿಎಂಆರ್‌ಸಿಎಲ್‌) ದುರಸ್ತಿ ಮಾಡಿದೆ. ಇನ್ನು ಇದೇ ಟ್ರ್ಯಾಕ್‌ಲ್ಲಿ ಮೆಟ್ರೋ ರೈಲು ಸಂಚಾರ ಮಾಡಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ನಿಗಮದ ಸಿಬ್ಬಂದಿ ತಿಳಿಸಿದ್ದಾರೆ.

ನಮ್ಮ ಮೆಟ್ರೋ: ಕೇವಲ 12 ನಿಮಿಷದಲ್ಲಿ ಕೆ.ಆರ್‌.ಪುರಂನಿಂದ ವೈಟ್‌ಫೀಲ್ಡ್‌ಗೆ ಪ್ರಯಾಣ..!

ತಡವಾಗಿ ಬೆಳಕಿಗೆ ಬಂದ ಟ್ರ್ಯಾಕ್ ಬಿರುಕಿನ ವಿಷಯ: ಮೆಜೆಸ್ಟಿಕ್‌ನಿಂದ ಕೆಂಗೇರಿ ಕಡೆಗೆ ಸಾಗುವ ನೇರಳೆ ಮಾರ್ಗದ ಮೈಸೂರು ರಸ್ತೆಯಲ್ಲಿ (Purple Lane Mysore road track)  ಟ್ರ್ಯಾಕ್‌ ಬಿರುಕು ಕಾಣಿಸಿಕೊಂಡಿದೆ. ಪಟ್ಟಣಗೆರೆ ಮೆಟ್ರೋ ಸ್ಟೇಷನ್ (Pattanagere Metro Station) ಕೂಗಳತೆ ದೂರದ ಹಳಿಯಲ್ಲಿ ಕಂಡ ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ. ಟ್ರ್ಯಾಕ್ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇನ್ನು ಹಳಿ ಬಿರುಕು ಕಾಣಿಸಿಕೊಂಡಿದ್ದನ್ನು ಮೆಟ್ರೋ ಪೈಲೆಟ್ (Metro Pilot) ಹಾಗೂ ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದಾರೆ. ಹಳಿ ಬಿರುಕು ಹಿನ್ನೆಲೆ ಟ್ರ್ಯಾಕ್ ಸೌಂಡ್, ಸ್ಪೀಡ್ ನಲ್ಲಿ ಬದಲಾವಣೆ ಆಗಿದೆ. 

ಎಚ್ಚೆತ್ತು ದುರಸ್ಥಿ ಮಾಡಿದ ಮೆಟ್ರೋ ಸಿಬ್ಬಂದಿ: ಮೆಟ್ರೋ ಹಳಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್‌ ಸಿಬ್ಬಂದಿ ಟ್ರ್ಯಾಕ್‌ ಅನ್ನು ದುರಸ್ತಿ ಮಾಡಿದ್ದಾರೆ. ಈ ವೇಳೆ ಇಡೀ ದಿನ ಮತ್ತೊಂದು ಟ್ರ್ಯಾಕ್ ನಲ್ಲಿ ಮೆಟ್ರೋ ಓಡಾಟ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು. ಟ್ರ್ಯಾಕ್ ಸರಿಪಡಿಸಿದ ನಂತರ ಎರಡು ಹಳಿಯಲ್ಲಿ‌ ಎಂದಿನಂತೆ ಮೆಟ್ರೋ ರೈಲು ಆಪರೇಷನ್‌ (Metro rail operation) ಮುಂದುವರೆಸಲಾಗಿದೆ. ಆದರೆ, ಅಲ್ಲಿ ಯಾವ ಲೋಪವಾಗಿದೆ, ಯಾರು ಲೋಪವಾಗಲು ಕಾರಣವಾಗಿದ್ದಾರೆ ಎಂಬುದು ಎಲ್ಲಿಯೂ ಬಹಿರಂಗವಾಗಿಲ್ಲ.

100 ಕಿ.ಮೀ. ದೂರದ ನಗರಗಳ ಮಧ್ಯೆ ವಂದೇ ಮೆಟ್ರೋ ರೈಲು: ಬೆಂಗಳೂರು, ತುಮಕೂರು, ರಾಮನಗರಕ್ಕೆ ಲಭ್ಯ..?

ಕಳಪೆ ಕಾಮಗಾರಿ ಮಾಡಲಾಗಿದೆಯೇ ಎಂಬ ಅನುಮಾನ: 
ನಾಯಂಡಹಳ್ಳಿಯಿಂದ ಕೆಂಗೇರಿ ಮೆಟ್ರೋ ಕಾಮಗಾರಿಯನ್ನು ಮಾಡುವಾಗ ಕಳಪೆ ಕಾಮಗಾರಿ ಮಾಡಲಾಗಿದೆಯೇ.? ಕಾಮಗಾರಿ ಮಾಡಿದ ಟ್ರ್ಯಾಕ್‌ನ ಯಾವುದೇ ವಸ್ತುಗಳು ದೀರ್ಘಕಾಲ (Long period) ಬಾಳಿಕೆ ಬರಬೇಕು. ಆದರೆ, ಕೇವಲ ಮೂರು ವರ್ಷಗಳಲ್ಲಿ ಟ್ರ್ಯಾಕ್‌ನಲ್ಲಿ ಬಿರುಕು ಬಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ಏನಾದರೂ  ಲೋಪವಾಗಿದೆಯೇ.? ಎಂಬ ಅನುಮಾನವೂ ಕಾಡುತ್ತಿದೆ. ಹೊಸದಾಗಿ ನಿರ್ಮಿಸಿದ ಟ್ರ್ಯಾಕ್ ಬಿರುಕು ಬೀಳಲು ಕಾರಣವೇನು? ಎಂಬುದು ತಿಳಿದುಬಂದಿಲ್ಲ. ಇನ್ನು ಸಾರ್ವಜನಿಕರ ಗಮನಕ್ಕೂ ತರದೇ ತಾಂತ್ರಿಕ ತೊಂದರೆ (Technical Problem) ಎಂಬ ಅಸ್ತ್ರವನ್ನು ಬಳಸಿಕೊಂಡು BMRCL ಸಿಬ್ಬಂದಿ ನಿಗೂಢವಾಗಿ ಹಳಿ ಬಿರುಕನ್ನು ದುರಸ್ಥಿ ಮಾಡಿದ್ದಾರೆ. ಆದರೆ, ಕಾಮಗಾರಿಯ ಲೋಪದ ಬಗ್ಗೆ ಬಹಿರಂಗಪಡಿಸದೇ ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯವಹಿಸಿದೆಯೇ ಎಂಬ ಅನುಮಾನವೂ ಶುರುವಾಗಿದೆ. ಈ ಮೂಲಕ ಗುತ್ತಿಗೆದಾರರನ್ನು ಬಚಾವ್‌ ಮಾಡಲಾಗುತ್ತಿದೆ ಎಂಬ ಗುಮಾನಿಯೂ ಕಂಡುಬರುತ್ತಿದೆ. 

Latest Videos
Follow Us:
Download App:
  • android
  • ios