Asianet Suvarna News Asianet Suvarna News

ಸಿಡಿ ಕೇಸ್: ಯುವತಿಗೆ ರಕ್ಷಣೆ ಕೊಡಿ ಎಂದೇ ದೂರಿನಲ್ಲಿ ನಾನು ಹೇಳಿದ್ದೆ, ಕಲ್ಲಹಳ್ಳಿ

ಸಾಮಾಜಿಕ ಬದ್ಧತೆಯಿಂದ ಮತ್ತು ನನಗೆ ಬಂದ ಮಾಹಿತಿ ಮೇರೆಗೆ ಆಧಾರದ ಮೇಲೆ ದೂರು| ಯುವತಿಯ ಬಗ್ಗೆ ನನಗೆ ಎಳ್ಳಷ್ಟು ಚಿತ್ರಣ ಇರಲಿಲ್ಲ| ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿತ್ತು: ದಿನೇಶ್‌ ಕಲ್ಲಹಳ್ಳಿ| 

Social worker Dinesh Kallahalli Talks Over CD Case Victim grg
Author
Bengaluru, First Published Mar 14, 2021, 9:25 AM IST

ಬೆಂಗಳೂರು(ಮಾ.14): ಸಿಡಿ ಪ್ರಕರಣ ಸಂಬಂಧ ನನಗೆ ಬಂದ ಮಾಹಿತಿ ಮೇರೆಗೆ ಸತ್ಯಾಸತ್ಯತೆ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ನನ್ನ ಹೋರಾಟವನ್ನೇ ತೇಜೋವಧೆ ಮಾಡುವ ಪ್ರಯತ್ನ ನಡೆಸಲಾಯಿತು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ತಿಳಿಸಿದ್ದಾರೆ. 

ಯುವತಿಗೆ ರಕ್ಷಣೆ ನೀಡಬೇಕು, ಆಕೆ ಭಯದ ವಾತಾವರಣದಲ್ಲಿದ್ದಾರೆ ಎಂದೇ ದೂರಿನಲ್ಲಿ ಪ್ರಸ್ತಾಪಿಸಿದ್ದೆ. ದೂರು ನೀಡಿದ ಬಳಿಕ ಹಲವು ಬೆಳವಣಿಗೆಗಳು ನಡೆದಿದ್ದು, ಹೋರಾಟದ ಬಗ್ಗೆ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದವು. ಅಲ್ಲದೇ, ನನ್ನ ಹೋರಾಟವನ್ನೇ ತೇಜೋವಧೆ ಮಾಡುವ ಪ್ರಯತ್ನ ನಡೆದ ಕಾರಣ ದೂರನ್ನು ಹಿಂಪಡೆಯಬೇಕಾಯಿತು ಎಂದರು. 

ರಾಸಲೀಲೆ ಸಿಡಿ ಕೇಸ್‌: ಪೊಲೀಸ್‌ ಠಾಣೆಗೆ ದಿನೇಶ್‌ ದಿಢೀರ್‌ ಹಾಜರ್‌..!

ಸಾಮಾಜಿಕ ಬದ್ಧತೆಯಿಂದ ಮತ್ತು ನನಗೆ ಬಂದ ಮಾಹಿತಿ ಮೇರೆಗೆ ಆಧಾರದ ಮೇಲೆ ದೂರು ನೀಡಿದೆ. ಯುವತಿಯ ಬಗ್ಗೆ ನನಗೆ ಎಳ್ಳಷ್ಟು ಚಿತ್ರಣ ಇರಲಿಲ್ಲ. ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.
 

Follow Us:
Download App:
  • android
  • ios