Asianet Suvarna News Asianet Suvarna News

ರಾಸಲೀಲೆ ಸಿಡಿ ಕೇಸ್‌: ಪೊಲೀಸ್‌ ಠಾಣೆಗೆ ದಿನೇಶ್‌ ದಿಢೀರ್‌ ಹಾಜರ್‌..!

ಮಾಧ್ಯಮಗಳ ಕಣ್ತಪ್ಪಿಸಿ ಠಾಣೆಗೆ ಹಾಜರು| ಪೊಲೀಸರು ದೂರು ವಾಪಸಿಗೆ ಒಪ್ತಾರಾ?| ಎರಡು ದಿನ​ಗಳ ಹಿಂದೆ ತಮ್ಮ ವಕೀ​ಲ​ರ ಮೂಲಕ ದೂರು ವಾಪಸ್‌ ಪಡೆ​ಯುವ ಬಗ್ಗೆ ಖುದ್ದು ಪತ್ರ ಕಳು​ಹಿ​ಸಿದ್ದ ದಿನೇಶ್‌ ಕಲ್ಲ​ಹಳ್ಳಿ| ಸದ್ಯಕ್ಕೆ ದೂರು ಹಿಂಪ​ಡೆ​ಯಲು ಸಾಧ್ಯ​ವಿಲ್ಲ: ಪೊಲೀಸ್‌ ಮೂಲ​ಗಳು| 

Dinesh Kallahalli Given Statement to Police About CD Case grg
Author
Bengaluru, First Published Mar 10, 2021, 8:35 AM IST

ಬೆಂಗಳೂರು(ಮಾ.10): ಮಾಜಿ ಸಚಿವ ರಮೇಶ್‌ ಜಾರ​ಕಿ​ಹೊಳಿ ಇದ್ದಾರೆ ಎನ್ನಲಾದ ಸಿ.ಡಿ. ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಸಾಮಾ​ಜಿ​ಕ ಕಾರ್ಯ​ಕರ್ತ ದಿನೇಶ್‌ ಕಲ್ಲ​ಹಳ್ಳಿ ಮಂಗ​ಳ​ವಾರ ರಾತ್ರಿ ಮಾಧ್ಯಮಗಳ ಕಣ್ಣು ತಪ್ಪಿಸಿ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಗೆ ದಿಢೀರ್‌ ಹಾಜರಾಗಿದ್ದಾರೆ.

ಎರಡು ದಿನ​ಗಳ ಹಿಂದೆ ತಮ್ಮ ವಕೀ​ಲ​ರ ಮೂಲಕ ದೂರು ವಾಪಸ್‌ ಪಡೆ​ಯುವ ಬಗ್ಗೆ ಕಳು​ಹಿ​ಸಿದ್ದ ಪತ್ರ ಖುದ್ದು ನಾನೇ ಕೈಬ​ರ​ಹ​ದಲ್ಲಿ ಬರೆ​ದಿ​ದ್ದೇನೆ. ಹೀಗಾಗಿ ಈ ಹಿಂದೆ ಕೊಟ್ಟಿದ್ದ ದೂರನ್ನು ವಾಪಸ್‌ ಪಡೆ​ಯುತ್ತಿ​ದ್ದೇ​ನೆ ಎಂದು ತನಿ​ಖಾ​ಧಿ​ಕಾ​ರಿ​ಗಳ ಎದುರು ಹೇಳಿಕೆ ನೀಡಿ​ದ್ದಾ​ರೆ ಎಂದು ತಿಳಿದು ಬಂದಿದೆ.

ರಾಸಲೀಲೆ ಕೇಸ್ : ರಮೇಶ್ ಸಿಡಿ ಸಿಕ್ಕ ಬಗ್ಗೆ ದಿನೇಶ್‌ ರಿಯಾಕ್ಷನ್

ಮಾಜಿ ಸಚಿವರ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯ ದೂರಿನ ಸಂಬಂಧ ತಮ್ಮ ವಕೀಲರ ಮೂಲಕ ಕಬ್ಬನ್‌ ಪಾರ್ಕ್ ಠಾಣೆಗೆ ಪತ್ರ ಕಳುಹಿಸಿ ದೂರು ಹಿಂಪಡೆಯುತ್ತಿರುವುದಾಗಿ ದಿನೇಶ್‌ ಕಲ್ಲಹಳ್ಳಿ ಹೇಳಿದ್ದರು. ಈ ವೇಳೆ ಕ್ರಿಮಿನಲ್‌ ಕೇಸ್‌ ಆಗಿರುವ ಕಾರಣ ದೂರುದಾರರೇ ಖುದ್ದು ಠಾಣೆಗೆ ಬರುವಂತೆ ಇನ್‌ಸ್ಪೆಕ್ಟರ್‌ ಬಿ.ಮಾ​ರು​ತಿ ಅವರು ಕಲ್ಲಹಳ್ಳಿ ಪರ ವಕೀಲರಿಗೆ ತಿಳಿಸಿದ್ದರು. ಹೀಗಾಗಿ ದಿನೇಶ್‌ ಕಲ್ಲಹಳ್ಳಿ ಮಂಗಳವಾರ ಖುದ್ದು ಠಾಣೆಗೆ ಬಂದು ದೂರು ವಾಪಸ್‌ ಪಡೆಯುವುದಾಗಿ ಹೇಳಿಕೆ ನೀಡಿ​ದ್ದಾ​ರೆ. ಕಾನೂನು ಪ್ರಕಾರ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಪೊಲೀಸ್‌ ಮೂಲ​ಗ​ಳ​ ಪ್ರ​ಕಾ​ರ, ಏಕಾ​ಏಕಿ ಈ ರೀತಿ ದೂರು ಹಿಂಪ​ಡೆ​ಯಲು ಸಾಧ್ಯ​ವಿ​ಲ್ಲ. ಇದೊಂದು ಸೂಕ್ಷ್ಮ ಪ್ರಕ​ರ​ಣ​ವಾ​ಗಿದೆ. ಅಲ್ಲದೆ, ಈಗಾ​ಗಲೇ ದಿನೇಶ್‌ ಕಲ್ಲ​ಹಳ್ಳಿ ವಿರುದ್ಧ ನಾಲ್ಕು ಪ್ರಕ​ರ​ಣ​ಗಳು ದಾಖ​ಲಾ​ಗಿವೆ. ಈ ಹಿನ್ನೆ​ಲೆ​ಯಲ್ಲಿ ಸದ್ಯಕ್ಕೆ ದೂರು ಹಿಂಪ​ಡೆ​ಯಲು ಸಾಧ್ಯ​ವಿಲ್ಲ ಎಂದು ಪೊಲೀಸ್‌ ಮೂಲ​ಗಳು ತಿಳಿ​ಸಿ​ವೆ.
 

Follow Us:
Download App:
  • android
  • ios