Asianet Suvarna News Asianet Suvarna News

ಮಾಜಿ ಸಿಎಂ ಕುಮಾರಸ್ವಾಮಿ ಜೆಪಿ ನಗರದ ಮನೆ ಖರೀದಿಯಲ್ಲಿ ಅಕ್ರಮ? ಲೋಕಾಯುಕ್ತದಲ್ಲಿ ದೂರು ದಾಖಲು

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೇಲೆ ಅಕ್ರಮ ಆಸ್ತಿ ಖರೀದಿಸಿದ್ದಾರೆಂದು ಲೋಕಾಯುಕ್ತ ಇಲಾಖೆಯಲ್ಲಿ ದೂರು ದಾಖಲಾಗಿದೆ. 

Social worker complaint at lokayukta about HD Kumaraswamy illegal property purchase case sat
Author
First Published Dec 4, 2023, 2:01 PM IST

ಬೆಂಗಳೂರು (ಡಿ.04): ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಖರೀದಿಯ ಬಗ್ಗೆ ತಪ್ಪು ಮಾಹಿತಿ ಸಲ್ಲಿಕೆ ಮಾಡಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ದಾಖಲಾಗಿದೆ. ಆಡಳಿತಾರೂಢ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅವರು ಸದ್ದು ಮಾಡುತ್ತಿರುವ ಬೆನ್ನಲ್ಲಿಯೇ ಒಂದೊಂದೇ ಸಂಕಷ್ಟ ಎದುರಾಗುವ ಸಾದ್ಯತೆ ಕಂಡುಬರುತ್ತಿದೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು 2004ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೇತಗಾನಹಳ್ಳಿ ಗ್ರಾಮದಲ್ಲಿ 24 ಎಕರೆ ಜಮೀನು ಇದೆ ಎಂದು ಹೇಳಿಕೊಂಡಿದ್ದಾರೆ. ಅವರು ಈಗ್ಗೆ ಕೆಲವು ದಿನಗಳ ಹಿಂದೆ ಮಾಧ್ಯಮದಲ್ಲಿ ಮಾತನಾಡುತ್ತಾ, ವಿವಿಧ ಸರ್ವೆ ನಂ.ಗಳಲ್ಲಿ 1,2,3,4 ಎಕರೆ ಯಂತೆ ವಿವಿಧ ಮೊತ್ತಕ್ಕೆ ಜಮೀನು ಖರೀದಿ ಮಾಡಿದ್ದಾಗಿ ತಿಳಿಸಿದ್ದಾರೆ. ಇದರಲ್ಲಿ ತನ್ನ ತಾಯಿಯ ಸಹೋದರಿ ಶ್ರೀಮತಿ ಸಾವಿತ್ರಮ್ಮರವರಿಂದ ಪಡೆದಿರುವುದಾಗಿಯೂ ಹೇಳಿಕೊಂಡಿದ್ದಾರೆ. ಆದ್ದರಿಂದ ಮಾನ್ಯ ಕುಮಾರಸ್ವಾಮಿಯವರು ಸಾಮಿತ್ರಮ್ಮರವರಿಗೆ ಬೇನಾಮಿಯಾಗಿದ್ದಾರೆಯೇ? ಅಥವಾ ತಾಯಿಯ ಸಹೋದರಿಯ ಆದಾಯದ ಮೂಲ ಯಾವುದು? ಎಂದು ಪ್ರಶ್ನೆ ಮಾಡಿದ್ದಾರೆ.

ಹೆಂಡ್ತಿ ಸರಿಯಾಗಿ ಆರೈಕೆ ಮಾಡ್ತಿಲ್ಲವೆಂದು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ ಗಂಡ

ಬೆಂಗಳೂರಿನ ಜೆ.ಪಿ.ನಗರ ಮನೆ ಖರೀದಿಯನ್ನು ಅನಿತಾ ಕುಮಾರಸ್ವಾಮಿಯವರು 2018ರ ಚುನಾವಣೆ ಅಫಿಡೆವಿಟ್‌ನಲ್ಲಿ 2008ರಲ್ಲಿ ಖರೀದಿ ಮಾಡಿದ್ದೇವೆ ಎಂದು 2023 ಚುನಾವಣೆಯಲ್ಲಿ ಹೆಚ್‌.ಡಿ. ಕುಮಾರಸ್ವಾಮಿಯವರು ಸಲ್ಲಿಸಿರುವ ಅಫೀಡೆವಿಟ್ ನಲ್ಲಿ 1995ಎಂದು ತೋರಿಸಿದ್ದಾರೆ. ಅದರ ಪಿ.ಐ.ಡಿ ನಂ. 57139286 ಒಟ್ಟು 5400 ಸ್ಕ್ವೇರ್‌ ಫೀಟ್ ಬಿಲ್ಟ್ ಅಪ್ 5186 ಸ್ಕ್ವೇರ್ ಫೀಟ್‌ ಇದೆ ಎಮದು ತೋರಿಸಲಾಗಿದೆ. ಜೊತೆಗೆ, ಶ್ರೀಮತಿ ಅನಿತಾ ಕುಮಾರಸ್ವಾಮಿಯವರು ಕುಪೇಂದ್ರ ರೆಡ್ಡಿಯವರಿಂದ 9 ಕೋಟಿ ಮತ್ತೊಮ್ಮೆ 50 ಲಕ್ಷ ಸಾಲ ಪಡೆದ ಬಗ್ಗೆ ಮಾಹಿತಿ ನೀಡಿದ್ದಾರೆ. ಮತ್ತು 2018ರಲ್ಲಿ ರಾಮನಗರ ಉಪ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಅನಿತಾ ಕುಮಾರಸ್ವಾಮಿಯವರು ಕುಪೇಂದ್ರ ರೆಡ್ಡಿಯವರಿಂದ 50 ಲಕ್ಷ ಹಣ ಹಾಗೂ 4 ಕೋಟಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. 2022ರಲ್ಲಿ ಕುಪೇಂದ್ರ ರೆಡ್ಡಿಯವರು ರಾಜ್ಯ ಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಚನ್ನಾಂಬಿಕಾ ಫೀಲ್ಮ ಸಂಸ್ಥೆಗೆ 4 ಕೋಟಿ ಸಾಲ ಕೊಟ್ಟಿರುವುದಾಗಿ ಘೋಷಿಸಿದ್ದಾರೆ.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು; ಸನಾತನ ಧರ್ಮ ಅವಹೇಳನ ಮಾಡಿದ್ದಕ್ಕೆ ತಕ್ಕ ಪಾಠ: ಆರ್ ಅಶೋಕ್

ಹೀಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು ನೀಡದೇ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ದಯಾಪರರಾದ ತಾವುಗಳು ಸೂಕ್ತ ತನಿಖೆಯನ್ನು ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ ಎಂದು ಸಿದ್ದರಾಜು ಅವರು ದೂರು ಸಲ್ಲಿಕೆ ಮಾಡಿದ್ದಾರೆ.

Follow Us:
Download App:
  • android
  • ios