Asianet Suvarna News Asianet Suvarna News

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು; ಸನಾತನ ಧರ್ಮ ಅವಹೇಳನ ಮಾಡಿದ್ದಕ್ಕೆ ತಕ್ಕ ಪಾಠ: ಆರ್ ಅಶೋಕ್

ಸನಾತನ ಧರ್ಮವನ್ನು ಅವಹೇಳನ ಮಾಡಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಹಿಂದುಗಳು ಸರಿಯಾಗಿ ಪಾಠ ಕಲಿಸಿದ್ದಾರೆ. ಹೀಗಾಗಿ ಮೂರು ರಾಜ್ಯಗಳಲ್ಲೂ ಕಾಂಗ್ರೆಸ್ ಸೋತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.

2023 Assembly election results issue R Ashok reaction about bjp victroy at bengaluru rav
Author
First Published Dec 4, 2023, 1:08 PM IST

ಬೆಂಗಳೂರು (ಡಿ.4): ಸನಾತನ ಧರ್ಮವನ್ನು ಅವಹೇಳನ ಮಾಡಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಹಿಂದುಗಳು ಸರಿಯಾಗಿ ಪಾಠ ಕಲಿಸಿದ್ದಾರೆ. ಹೀಗಾಗಿ ಮೂರು ರಾಜ್ಯಗಳಲ್ಲೂ ಕಾಂಗ್ರೆಸ್ ಸೋತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಸೆಮಿಫೈನಲ್ ಅಂತಲೇ ಹೇಳಲಾಗ್ತಿದೆ. ಈ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲೂ ಬಿಜೆಪಿ ಭರ್ಜರಿ ಜಯಗಳಿಸಿದೆ ಅದೇ ಲೋಕಸಭಾ ಚುನಾವಣೆಯಲ್ಲಿ ದೇಶ ಗೆಲ್ಲುತ್ತೇವೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

3 ರಾಜ್ಯಗಳಲ್ಲಿ ಕಮಲ ಕಿಲಕಿಲ: ಷೇರುಪೇಟೆಯಲ್ಲಿ ಭರ್ಜರಿ ಜಿಗಿತ; 15 ನಿಮಿಷದಲ್ಲಿ ಹರಿದುಬಂತು 4 ಲಕ್ಷ ಕೋಟಿ!

ಮುಸ್ಲಿಂ ಸಮುದಾಯ ಒಲೈಕೆಗೆ ಕಾಂಗ್ರೆಸ್ ಸರ್ಕಾರ ಸನಾತನ ಧರ್ಮವನ್ನು ಅವಹೇಳನ ಮಾಡುತ್ತಲೇ ಬಂದಿತ್ತು. ಅದಕ್ಕಾಗಿಯೇ ಪಂಚರಾಜ್ಯ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದ್ದಾರೆ. ಇದನ್ನ ಅವರದೇ ನಾಯಕರು ಹೇಳುತ್ತಿದ್ದಾರೆ. ಅದು ನಿಜವೇ ಆಗಿದೆ. ರಾಜ್ಯದಲ್ಲಿ ಗ್ಯಾರಂಟಿ ಆಸೆ ಆಮಿಷೆ ತೋರಿಸಿ ಗೆದ್ದಂತೆ ತೆಲಂಗಾಣದಲ್ಲೂ ಇದೇ ಮಾದರಿ ಅನುಸಿರಿಸಿ ಗೆದ್ದಿದ್ದಾರೆ. ಉಳಿದ ಮೂರು ರಾಜ್ಯಗಳಲ್ಲಿ ಹೀನಾಯವಾಗಿ ಸೋತಿರುವುದಕ್ಕೆ ಕಾರಣ ಹಿಂದುಗಳ ಅವಹೇಳನ ಮಾಡುತ್ತ ಬಂದಿದ್ದಕ್ಕೆ ತಕ್ಕ ಪಾಠವಾಗಿದೆ ಎಂದರು.

ನಾಲ್ಕು ರಾಜ್ಯಗಳ ಫಲಿತಾಂಶದಿಂದ ಕರ್ನಾಟಕಕ್ಕೆ ಸಂದೇಶ ಏನು..? ವಿಧಾನಸಭೆ ಸೋತ ಬಿಜೆಪಿ ಲೋಕಸಭೆ ಗೆಲ್ಲುತ್ತಾ..?

ತೆಲಂಗಾಣದಲ್ಲಿ ಗೆದ್ದ ಬಗ್ಗೆ ಮಾತ್ರ ಮಾತಾಡ್ತಾ ಇದ್ದಾರೆ. ಆದರೆ ಅಲ್ಲಿನ ಸಿಎಂ ರೆಸಾರ್ಟ್‌ನಲ್ಲಿ ಕುಳಿತು ರಾಜ್ಯ ಆಳಿದ್ದರಿಂದ ಜನರು ಅವರ ವಿರುದ್ಧ ಮತ ಹಾಕಿದ್ದಾರೆ. ಮೋದಿ ಜೊತೆ ಇದ್ದರೆ ಅಭಿವೃದ್ಧಿ ಸಾಧ್ಯ ಎಂಬುದುನ್ನು ಮೂರು ರಾಜ್ಯಗಳ ಜನರು ದೇಶಕ್ಕೆ ಸಂದೇಶ ನೀಡಿದ್ದಾರೆ. ಬಿಜೆಪಿ ಈಗ ಮೂರು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೂವತ್ತು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

Latest Videos
Follow Us:
Download App:
  • android
  • ios