12 ವರ್ಷವಲ್ಲ, 12 ದಿನದಲ್ಲೇ ಸೇಡು ತೀರಿಸಿಕೊಂಡ ನಾಗಪ್ಪ: ಕಿರುಕುಳ ನೀಡಿದ ಯುವಕನ ಕಚ್ಚಿದ ಹಾವು
ತಾಲೂಕಿನ ದೇವರಗುಡ್ಡೇನಹಳ್ಳಿಯಲ್ಲಿ ಹಾವಿನ ದ್ವೇಷ 12 ವರ್ಷ ಎಂಬ ಪೂರ್ವಿಕರ ಮಾತಿಗೆ ಪುಷ್ಠಿ ನೀಡುವಂತೆ 12 ದಿನದಲ್ಲೇ ಹಾವು ಕಚ್ಚಿ ಓರ್ವ ಯುವಕ ಮೃತಪಟ್ಟಿದ್ದಾರೆ.
ಹೊಳೆನರಸೀಪುರ (ನ.03): ತಾಲೂಕಿನ ದೇವರಗುಡ್ಡೇನಹಳ್ಳಿಯಲ್ಲಿ ಹಾವಿನ ದ್ವೇಷ 12 ವರ್ಷ ಎಂಬ ಪೂರ್ವಿಕರ ಮಾತಿಗೆ ಪುಷ್ಠಿ ನೀಡುವಂತೆ 12 ದಿನದಲ್ಲೇ ಹಾವು ಕಚ್ಚಿ ಓರ್ವ ಯುವಕ ಮೃತಪಟ್ಟಿದ್ದಾರೆ. ತಾಲೂಕಿನ ದೇವರಗುಡ್ಡೇನಹಳ್ಳಿ ಗ್ರಾಮದ ಅಭಿಲಾಷ್(28) ಎಂಬ ಯುವಕ ಅಕ್ಟೋಬರ್ 29ರಂದು ಹಾವು ಕಡಿದು ಮೃತಪಟ್ಟಿದ್ದರು.ಅಭಿಲಾಷ್ ಮೃತಪಟ್ಟ ನಂತರ ಆತನ ಮೊಬೈಲನ್ನು ಸ್ನೇಹಿತರು ಪರಿಶೀಲನೆ ನಡೆಸಿದಾಗ ಬೆಚ್ಚಿ ಬೀಳಿಸುವ ದೃಶ್ಯ ಪತ್ತೆಯಾಗಿದೆ. ಜತೆಗೆ ವಿಡಿಯೋ ವೈರಲ್ ಆಗಿದೆ.
1.5 ತಿಂಗಳ ತಿಂಗಳ ಹಿಂದೆ ಅಭಿಲಾಷ್ ಜಮೀನಿನಲ್ಲಿ ನೀರು ಹಾಯಿಸುವ ನಾಲ್ಕಿಂಚು ಪೈಪಿನಲ್ಲಿ ನಾಗರಹಾವು ಒಂದಕ್ಕೆ ಕೀಟಲೆ ಮಾಡುತ್ತಿರುವುದು ಮತ್ತು ಹಾವು ಹೆಡೆ ಎತ್ತಿ ಬುಸುಗುಡುತ್ತಿರುವುದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿರುವ ದೃಶ್ಯ ಪತ್ತೆಯಾಗಿದೆ. ಹಾವು ತಾನು ಅನುಭವಿಸಿದ ಹಿಂಸೆಗೆ ಸೇಡು ತೀರಿಸಿಕೊಂಡಿರಬಹುದು ಎಂದು ಗ್ರಾಮಸ್ಥರ ಮಾತು. ಹಾವಿನ ದ್ವೇಷ 12 ವರ್ಷ ಎಂಬ ಪೂರ್ವಿಕರ ಮಾತಿಗೆ ಪುಷ್ಠಿ ನೀಡುವಂತೆ ಇಂದು ಕುಟುಂಬ ಸದಸ್ಯರು ಅಭಿಲಾಷ್‌ನನ್ನು ಕಳೆದುಕೊಂಡಿದ್ದಾರೆ.
ದರ್ಶನ್ ಮನೆ ನಾಯಿ ಕಚ್ಚಿದ ಪ್ರಕರಣ: ಹೀಗೇ ಆದರೆ ಕೋರ್ಟಿಗೆ ಹೋಗುವೆ ಎಂದ ದೂರುದಾರೆ!
ಕಳಸದಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಪರ್ ಹಾವು ಪತ್ತೆ: ಕಳಸದಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಪರ್ ಎಂಬ ಹಾವು ಪ್ರತ್ಯಕ್ಷವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ, ಅಳಿವಿನಂಚಿನಲ್ಲಿರುವ ಪ್ರಭೇದದ ಹಾವು ಇದಾಗಿದೆ. ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ದೇವಸ್ಥಾನದ ಪಕ್ಕದ ಚಂದ್ರು ಭಟ್ ಅವರ ಮನೆಯ ಅಂಗಳದಲ್ಲಿ ಬ್ಯಾಂಬೋ ಪಿಟ್ ವೈಪರ್ ಹಾವು ಕಂಡುಬಂದಿದೆ. ಹೆಚ್ಚಾಗಿ ಬಿದಿರಿನ ಬೊಂಬುಗಳಲ್ಲಿ ವಾಸವಿರುವ ಕಾರಣ ಇದಕ್ಕೆ ಬ್ಯಾಂಬೋ ಪಿಟ್ ವೈಪರ್ ಎಂದು ಕರೆಯಲಾಗುತ್ತದೆ. ಈ ಹಾವು ಕಡಿದರೆ ಸಾಯುವುದಿಲ್ಲ. ಆದರೆ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಉರಗ ತಜ್ಞ ರಿಜ್ವಾನ್ ಅವರು ಈ ಅಪರೂಪದ ಹಾವನ್ನು ಸೆರೆ ಹಿಡಿದು, ಅರಣ್ಯದೊಳಕ್ಕೆ ಬಿಟ್ಟು ಬಂದಿದ್ದಾರೆ.
ಕಾಂಗ್ರೆಸ್ ಜಾತಿ ಗಣತಿ ಅಸ್ತ್ರಕ್ಕೆ ಬಿಜೆಪಿಯಿಂದ ಒಬಿಸಿ ಪ್ರತ್ಯಸ್ತ್ರ?: ಶಾ, ನಡ್ಡಾರಿಂದ ಸೂಚನೆ
ಮನೆಯೊಳಗೆ ನಾಗರಹಾವು ಬರದಂತೆ ತಡೆದ ಸಾಕುನಾಯಿ: ಮನೆಯೊಳಗೆ ಪ್ರವೇಶ ಮಾಡುತ್ತಿದ್ದ ನಾಗರಹಾವನ್ನು ನಾಯಿಯೊಂದು ಸುಮಾರು ಅರ್ಧಗಂಟೆ ಕಾಲ ತಡೆದು ನಿಲ್ಲಿಸಿದ ಘಟನೆ ಸಿರುಗುಪ್ಪ ಪಟ್ಟಣದಲ್ಲಿ ಜರುಗಿದೆ. ಸಿರುಗುಪ್ಪ ಪಟ್ಟಣದ ವಿ.ಎಸ್.ಕಾಲನಿ ನಿವಾಸಿ ಮಂಜುನಾಥ ಎಂಬವರ ಮನೆಗೆ ನಾಗರಹಾವು ನುಸುಳಲು ಮುಂದಾಗುತ್ತಿರುವುದನ್ನು ಕಂಡ ಮನೆಯ ಸಾಕು ನಾಯಿ, ಮನೆಯೊಳಗೆ ಹಾವು ಪ್ರವೇಶ ಮಾಡ ದಂತೆ ತಡೆದಿದೆ. ನಾಯಿಯ ಕಿರುಚಾಟ ಕಂಡ ಮನೆಯ ಮಾಲೀಕ ಮಂಜುನಾಥ ಹಾಗೂ ಕುಟುಂಬ ಸದಸ್ಯರು ಹೊರಬಂದು ನೋಡಿದಾಗ ನಾಯಿಯು ಹಾವು ಮನೆಯೊಳಗೆ ಪ್ರವೇಶದಂತೆ ಕಾಯ್ದುಕೊಂಡಿರುವುದು ಕಂಡುಬಂದಿದೆ. ಬಳಿಕ ಉರಗತಜ್ಞರನ್ನು ಕರೆಸಿ ನಾಗರಹಾವನ್ನು ಸೆರೆ ಹಿಡಿಯಲಾಗಿದೆ.