ದರ್ಶನ್‌ ಮನೆ ನಾಯಿ ಕಚ್ಚಿದ ಪ್ರಕರಣ: ಹೀಗೇ ಆದರೆ ಕೋರ್ಟಿಗೆ ಹೋಗುವೆ ಎಂದ ದೂರುದಾರೆ!

ನಟ ದರ್ಶನ್‌ ದೊಡ್ಡ ವ್ಯಕ್ತಿಯಾಗಿದ್ದು, ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಟ ದರ್ಶನ್‌ ಅವರ ಸಾಕು ನಾಯಿಗಳಿಂದ ದಾಳಿಗೊಳಾಗಿದ್ದ ಸಂತ್ರಸ್ತೆ ಅಮಿತಾ ಜಿಂದಾಲ್ ಆರೋಪಿಸಿದ್ದಾರೆ. 

Notice from the police to the woman who filed a complaint against actor darshan gvd

ಬೆಂಗಳೂರು (ನ.03): ನಟ ದರ್ಶನ್‌ ದೊಡ್ಡ ವ್ಯಕ್ತಿಯಾಗಿದ್ದು, ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಟ ದರ್ಶನ್‌ ಅವರ ಸಾಕು ನಾಯಿಗಳಿಂದ ದಾಳಿಗೊಳಾಗಿದ್ದ ಸಂತ್ರಸ್ತೆ ಅಮಿತಾ ಜಿಂದಾಲ್ ಆರೋಪಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತಾ ಅವರು, ನಾಯಿ ದಾಳಿ ಪ್ರಕರಣ ಸಂಬಂಧ ಇದುವರೆಗೆ ದರ್ಶನ್‌ ಹಾಗೂ ಅವರ ಮನೆಯ ಸಹಾಯಕರನ್ನು ಪೊಲೀಸರು ವಿಚಾರಣೆ ನಡೆಸಿಲ್ಲ ಎಂದು ದೂರಿದರು.

ದರ್ಶನ್‌ ದೊಡ್ಡ ವ್ಯಕ್ತಿಯಾಗಿದ್ದಾರೆ. ಹೀಗಾಗಿ ತನಿಖೆ ನಡೆಸದಂತೆ ಪೊಲೀಸರ ಮೇಲೆ ಅವರು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಅವರನ್ನು ಪೊಲೀಸರು ವಿಚಾರಣೆ ನಡೆಸಿಲ್ಲ. ಆದರೆ ನನಗೆ ಮಾತ್ರ ಹೇಳಿಕೆ ಪಡೆಯಲು ನೋಟಿಸ್ ಕೊಟ್ಟಿದ್ದಾರೆ ಎಂದು ಅಮಿತಾ ಆಪಾದಿಸಿದರು. ನನ್ನ ಮೇಲೆ ಬೇಕು ಅಂತಲೇ ನಾಯಿಗಳಿಂದ ದರ್ಶನ್ ಮನೆಯ ಸಹಾಯಕರು ದಾಳಿ ಮಾಡಿಸಿದ್ದಾರೆ. ನಾನು ವಿಚಾರಣೆಗೆ ಹೋಗಲು ಎರಡು ದಿನಗಳ ಸಮಯ ಕೇಳಿದ್ದೇನೆ. ಇನ್ನು ಘಟನೆ ಸಂಬಂಧ ಐಪಿಸಿ 307 (ಕೊಲೆ ಯತ್ನ) ಆರೋಪದಡಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೆ. ಆದರೆ ಅವರು ಪುರಸ್ಕರಿಸಿಲ್ಲ ಎಂದು ಕಿಡಿಕಾರಿದರು.

ನಿಮ್ಮನ್ನ ಈ ಲುಕ್‌ನಲ್ಲಿ ನೋಡುತ್ತಿದ್ರೆ... ಪಡ್ಡೆಹೈಕ್ಳ ಎದೆಯಲ್ಲಿ ಪ್ರೀತಿಯ ಕಿಚ್ಚು ಹಚ್ಚಿದ ರಚ್ಚು!

ಈ ವಿಚಾರವನ್ನು ನ್ಯಾಯಾಲಯದಲ್ಲಿ ನಾನು ಪ್ರಶ್ನಿಸುತ್ತೇನೆ. ಪೊಲೀಸರು ನ್ಯಾಯ ಕೊಡಿಸದೆ ಹೋದರೆ ನನಗೆ ಕಾನೂನು ಹೋರಾಟ ಅನಿರ್ವಾಯವಾಗಲಿದೆ. ನನಗೆ ನ್ಯಾಯಬೇಕಿದೆ ಎಂದು ಅಮಿತಾ ಹೇಳಿದರು. ಕೆಲ ದಿನಗಳ ಹಿಂದೆ ದರ್ಶನ್‌ರ ರಾಜರಾಜೇಶ್ವರಿ ನಗರದ ಮನೆ ಮುಂದಿನ ಖಾಲಿ ಪ್ರದೇಶದಲ್ಲಿ ಕಾರು ನಿಲುಗಡೆ ವಿಚಾರವಾಗಿ ಅಮಿತಾ ಹಾಗೂ ದರ್ಶನ್ ಮನೆ ಸಹಾಯಕರ ಮಧ್ಯೆ ಜಗಳ‍ವಾಗಿತ್ತು. ಆ ವೇಳೆ ಅಮಿತಾ ಅವರಿಗೆ ದರ್ಶನ್‌ ಮನೆಯ ಸಾಕು ನಾಯಿಗಳು ಕಚ್ಚಿದ್ದವು. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios