ಅಡುಗೆ ಮಾಡುವ ವೇಳೆ ಸಿಲಿಂಡರ್‌ ಸ್ಫೋಟಗೊಂಡು 6 ಜನರು ಗಾಯಗೊಂಡ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದೆ. ಗಾಯಾಳುಗಳೆಲ್ಲ ರಾಯಚೂರು ಮೂಲದವರೆಂದು ಗುರುತಿಸಲಾಗಿದೆ.

ಬೆಂಗಳೂರು (ಅ.3): ಅಡುಗೆ ಮಾಡುವ ವೇಳೆ ಸಿಲಿಂಡರ್‌ ಸ್ಫೋಟಗೊಂಡು 6 ಜನರು ಗಾಯಗೊಂಡ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದೆ.

ಕರಿಲಿಂಗಪ್ಪ(40), ಲಕ್ಷ್ಮಮ್ಮ(42), ಚೈತ್ರಾ (11) ಬಸವ(9) ಗೀತಾ ಮತ್ತು ಗಿರಿಜಾ 3 ವರ್ಷದ ಮಕ್ಕಳು ಗಾಯಗೊಂಡವರು. ಗಾಯಾಳು ಪೈಕಿ ತಾಯಿ ಲಕ್ಷಮ್ಮ ಮತ್ತು ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಯಚೂರು ಮೂಲದ ಕುಟುಂಬ

ಗಾಯಾಳುಗಳೆಲ್ಲ ಒಂದೇ ಕುಟುಂಬದವರಾಗಿದ್ದು ರಾಯಚೂರಿನಿಂದ ಬೆಂಗಳೂರಿಗೆ ಬಂದು ನಾಯಂಡಹಳ್ಳಿ ಸಮೀಪದ ವಿನಾಯಕ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಆದರೆ ನಿನ್ನೆ ಗ್ಯಾಸ್ ಲೀಕ್ ಆದ ಪರಿಣಾವೋ ಏನೋ ಏಕಾಏಕಿ ಭೀಕರವಾಗಿ ಸ್ಫೋಟಗೊಂಡ ಪರಿಣಾಮ ಮಕ್ಕಳು ಸೇರಿ ಕುಟುಂಬದ ಆರು ಜನರು ಗಂಭೀರ ಗಾಯಗೊಂಡಿದ್ದಾರೆ.