ಸಿಗಂಧೂರು ಕೇಬಲ್ ಸೇತುವೆ ಕಾಮಗಾರಿ ಬಹುತೇಕ ಪೂರ್ಣ: ಮುಂದಿನ 4 ತಿಂಗಳಲ್ಲಿ ಲೋಕಾರ್ಪಣೆ

ಕರ್ನಾಟಕದ ಕೊಲ್ಲೂರು ಮತ್ತು ಸಿಗಂಧೂರು ಪಟ್ಟಣಗಳನ್ನು ಸಂಪರ್ಕಿಸುವ 2.13 ಕಿ.ಮೀ ಉದ್ದದ ಸಿಗಂಧೂರು ಕೇಬಲ್ ಸೇತುವೆ (ತುಮರಿ ಸೇತುವೆ)ಯು ಮುಂದಿನ ನಾಲ್ಕು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಈ ಸೇತುವೆಯು ಭಾರತದ 7ನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಎನಿಸಿಕೊಳ್ಳಲಿದೆ.

Sigandur Cable Bridge work almost complete to be inaugurated at March 2025 sat

ಶಿವಮೊಗ್ಗ (ನ.28): ರಾಜ್ಯದಲ್ಲಿ ಮಲೆನಾಡಿನ ಎರಡು ಪ್ರಮುಖ ದೇವಾಲಯ ಪಟ್ಟಣಗಳಾದ ಕೊಲ್ಲೂರು ಹಾಗೂ ಸಿಗಂಧೂರು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಲಾಗುತ್ತಿರುವ 2.13 ಕಿ.ಮೀ. ಉದ್ದದ ಸಿಗಂಧೂರು ಕೇಬಕ್ ಬ್ರಿಡ್ಸ್ (ತುಮರಿ ಸೇತುವೆ) ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ.

ಈ ಸಿಗಂಧೂರು ಸೇತುವೆಯು ಭಾರತದ ಕೇಬಲ್ ಆಧಾರಿತ ಸೇತುವೆಗಳಲ್ಲಿ 7ನೇ ಅತೊದೊಡ್ಡ ಸೇತುವೆ ಎಂಬ ಖ್ಯಾತಿ ಪಡೆಯಲಿದೆ. ಹಲವು ವರ್ಚಗಳಿಂದ ಈ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಇನ್ನು ಕೆಲವೇ ಗರ್ಡರ್ ಬಾಕ್ಸ್‌ಗಳನ್ನು ಅಳವಡಿಕೆ ಮಾಡುವುದು ಮಾತ್ರ ಬಾಕಿಯಿದ್ದು, ಕೆಲವೇ ಒಂದೆರಡು ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಇದಾದ ನಂತರ ಉಳಿಕೆ ಕೆಲಸಗಳನ್ನು ಮಗಿಸಿಕೊಂಡು, ಸುರಕ್ಷತಾ ತಪಾಸಣೆ ಮಾಡಿದ ನಂತರ ಈ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಇದರಿಂದ ಮಲೆನಾಡಿನ ಜನರ ಬಹುಬೇಡಿಕೆಯ ಸಿಗಂಧೂರು ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಇದನ್ನೂ ಓದಿ: ಮಲೆನಾಡಿನ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಇನ್ನಿಲ್ಲ

ಈ ಸೇತುವೆಯ ಉದ್ಘಾಟನೆ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರು, ಸಿಗಂಧೂರು ಕೇಬಲ್ ಸೇತುವೆಯು ನಮ್ಮ ದೇಶದ 7ನೇ ಅತಿದೊಡ್ಡ ಕೇಬಲ್ ಆಧರಿತ ಹಾಗೂ ಭಾರತದ 2ನೇ ಅತೀ ಉದ್ದದ ಸೇತುವೆ ಎನಿಸಿಕೊಳ್ಳಲಿದೆ. ಈ ಸೇತುವೆಗೆ 17 ಪಿಲ್ಲರ್‌ಗಳಿದ್ದು, ಒಟ್ಟು 2.4 ಕಿಲೋ ಮೀಟರ್ ಉದ್ದವನ್ನು ಹೊಂದಿದೆ. ಇದೀಗ ಸೇತುವೆ ನಿರ್ಮಾಣದ ಅಂತಿಮ ಹಂತದ ಕೆಲಸಗಳು ಬಾಕಿ ಇದ್ದು, 2025ರ ಮಾರ್ಚ್‌ ತಿಂಗಳಲ್ಲಿ ಕೇಂದ್ರ ಹೆದ್ದಾರಿ ಸಚಿವ ಸಚಿವ ನಿತಿನ್ ಗಡ್ಕರಿ ಅವರು ಈ ಸೇತುವೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಮೂಲಕ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ 'ಸಿಗಂದೂರು ಸೇತುವೆ' ಸಿಗಂದೂರು ಚೌಡೇಶ್ವರಿ ದೇವಿಯ ಭಕ್ತರು ಸೇರಿದಂತೆ ಈ ಭಾಗದ ಜನರ ಬಹುದಿನಗಳ ಕನಸು ಈಡೇರಲಿದೆ ಎಂದು ಹೇಳಿದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಮ್ ಭಕ್ತ ಎನ್ನುವ ಖಾತೆದಾರರೊಬ್ಬರು ಸಿಗಂಧೂರು ಸೇತುವೆ ಕಾಮಗಾರಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ '2.13 ಕಿಮೀ ಉದ್ದದ ಸಿಗಂಧೂರು ಕೇಬಲ್ ಸೇತುವೆ (ತುಮರಿ ಸೇತುವೆ)ಯು ಕರ್ನಾಟಕ ದೇವಾಲಯದ ಪಟ್ಟಣಗಳಾದ ಸಿಗಂದೂರು ಮತ್ತು ಕೊಲ್ಲೂರು ಸಂಪರ್ಕಿಸುತ್ತದೆ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಕಾಮಗಾರಿ ನಡೆಯುತ್ತಿರುವ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂಬಂಧಿತ ವಿಡಿಯೋದಲ್ಲಿ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವ ದೃಶ್ಯಾವಳಿಗಳನ್ನು ತೋರಿಸಿದ್ದಾರೆ.

ಇದನ್ನೂ ಓದಿ: ಭಾರತದ ಟಾಪ್-10 ಸುಂದರ ಗ್ರಾಮಗಳು; ಕರ್ನಾಟಕದ ಯಾ ಹಳ್ಳಿ ಇದೆ?

ಈ ವಿಡಿಯೋದಲ್ಲಿ ಎರಡೂ ಬದಿಯಿಂದ ಸೇತುವೆ ಕಾಮಗಾರಿಯನ್ನು ಮಾಡಿಕೊಂಡು ಬಂದಿದ್ದು, ಕೊನೆಯ ಕೇಬಲ್‌ ಪಿಲ್ಲರ್‌ನಿಂದ ಗರ್ಡರ್ ಜೋಡಣೆ ಮಾಡುವುದು ಬಹುತೇಕ ಮುಕ್ತಾಯವಾಗಿದೆ. ಇನ್ನು ನಲ್ಕೈದು ಗರ್ಡರ್‌ಗಳನ್ನು ಅಳವಡಿಕೆ ಮಾಡಿದರೆ ಸೇತುವೆ ಮೇಲೆ ಸುಲಭವಾಗಿ ಸಂಚಾರ ಮಾಡಬಹುದು. ಇನ್ನು ಸೇತುವೆ ಮೇಲೆ ರಸ್ತೆ ನಿರ್ಮಾಣ ಮಾಡಿದ ಆಚೆಯಿಂದ ಈಚಗೆ ಸುಲಭವಾಗಿ ಕೇವಲ 5 ನಿಮಿಷಗಳಕ್ಕಲ್ಲಿ ಸಂಚಾರ ಮಾಡಲು ಅನುಕೂಲ ಆಗಲಿದೆ.

Latest Videos
Follow Us:
Download App:
  • android
  • ios