ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋದ 2ನೇ ಹಂತದ ನೀಲಿ ಮಾರ್ಗಕ್ಕೆ ರೈಲು ವಿದ್ಯುದೀಕರಣ ಆರಂಭವಾಗಿದ್ದು, ಸೀಮೆನ್ಸ್ ಲಿಮಿಟೆಡ್‌ ಒಕ್ಕೂಟ ನಡೆಸಲಿದೆ.

ಬೆಂಗಳೂರು (ಜು.12): ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋದ 2ನೇ ಹಂತದ ನೀಲಿ ಮಾರ್ಗಕ್ಕೆ ರೈಲು ವಿದ್ಯುದೀಕರಣ ತಂತ್ರಜ್ಞಾನ ಒದಗಿಸುವ ಆದೇಶವನ್ನು ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮುಂಬೈ ಮೂಲದ ಸೀಮೆನ್ಸ್ ಲಿಮಿಟೆಡ್‌ ಒಕ್ಕೂಟಕ್ಕೆ ನೀಡಿದೆ.

ಅರ್ಪಣಾ ಮಜಾಟಾಕೀಸ್‌ಗೆ ಬರಬೇಕು ಅನ್ನೋದು ನನ್ನ ಯೋಚನೆಯಲ್ಲ, ಅನಾರೋಗ್ಯವನ್ನು ಗೌಪ್ಯವಾಗಿಟ್ಟಿದ್ದರು:ಸೃಜನ್

ಕಾಮಗಾರಿ ಒಟ್ಟು ₹766 ಕೋಟಿ ಅಂದಾಜು ವೆಚ್ಚದಲ್ಲಿ ನಡೆಯಲಿದೆ. ಸೀಮೆನ್ಸ್ ಲಿಮಿಟೆಟ್‌ ಅಂದಾಜು ₹558 ಕೋಟಿಯ ಕಾಮಗಾರಿ ನಿರ್ವಹಿಸಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ.ಆರ್.ಪುರ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಕಾರಿಡಾರ್‌ 58.19ಕಿ.ಮೀ. ಮಾರ್ಗ ಇದಾಗಿದೆ. ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯಲ್ಲಿ 30 ನಿಲ್ದಾಣಗಳಿವೆ.

ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಸಂವಿಧಾನ ಹತ್ಯಾ ದಿನ ಘೋಷಿಸಿದ ಮೋದಿ ಸರ್ಕಾರ

ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮೆಟ್ರೋ ಮಾರ್ಗ ಕಾಮಗಾರಿ ಬಹಳ ವೇಗವಾಗಿ ನಡೆಯುತ್ತಿದ್ದು, ಇದೀಗ ವಿದ್ಯುದೀಕರಣ ಹಂತಕ್ಕೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ಇದರ ಗುತ್ತಿಗೆಯನ್ನು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVLN -Rail Vikas Nigam Limited) ಸಹಭಾಗಿತ್ವದ ಜರ್ಮನಿಯ ಬಹುರಾಷ್ಟ್ರೀಯ ಸೀಮೆನ್ಸ್ ಲಿಮಿಟೆಡ್ ಕಂಪನಿಗೆ ವಹಿಸಿಕೊಂಡಿದೆ. 

ನಮ್ಮ ಮೆಟ್ರೋ ಹಂತ 2ಎ, 2ಬಿ ಅಡಿಯಲ್ಲಿ ನೀಲಿ ಮಾರ್ಗದ ವಿದ್ಯುದ್ದೀಕರಣಕ್ಕೆ ಸೀಮೆನ್ಸ್ ಒಪ್ಪಂದ ಮಾಡಿಕೊಂಡಿದ್ದು, 2026ರ ಜೂನ್‌ನಲ್ಲಿ 58.19ಕಿ.ಮೀ ಉದ್ದದ ಈ ಮೆಟ್ರೋ ಮಾರ್ಗ ಓಪನ್ ಆಗುವ ಸಾಧ್ಯತೆ ಇದೆ.