Asianet Suvarna News Asianet Suvarna News

Meledatu Politics: ತಮಿಳ್ನಾಡಲ್ಲಿ ಬಿಜೆಪಿ ಬೆಳೆಸಲು ಮೇಕೆದಾಟಿಗೆ ಅಡ್ಡಿ: ಸಿದ್ದರಾಮಯ್ಯ

*  ರಾಜ್ಯ, ಕೇಂದ್ರದ ವಿರುದ್ಧ ಸಿದ್ದು ಆರೋಪ
*  ಕನ್ನಡಿಗರಿಗೆ ಬೊಮ್ಮಾಯಿ, ಕಾರಜೋಳ ದ್ರೋಹ
*  ಪಾದಯಾತ್ರೆ ಹತ್ತಿಕ್ಕಲು ರಾಜ್ಯ ಸರ್ಕಾರ ತೀವ್ರ ಪ್ರಯತ್ನ 
 

Siddaramaiah Slams on BJP Government grg
Author
Bengaluru, First Published Jan 10, 2022, 5:05 AM IST

ಸಂಗಮ(ಜ.10):  ತಮಿಳುನಾಡಿನಲ್ಲಿ(Tamil Nadu) ತಮ್ಮ ನೆಲೆ ವಿಸ್ತರಿಸಿಕೊಳ್ಳಲು ಬಿಜೆಪಿಯ(BJP) ಡಬಲ್‌ ಎಂಜಿನ್‌ ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧವಾಗಿ ನಿಂತಿದೆ. ಇದಕ್ಕಾಗಿಯೇ ಬೆಂಗಳೂರು ಸೇರಿದಂತೆ ಕಾವೇರಿ ತಟದ 2.5 ಕೋಟಿ ಜನರ ದಾಹ ಇಂಗಿಸುವ ಈ ಮಹಾತ್ವಾಕಾಂಕ್ಷಿ ಯೋಜನೆ ಬಗ್ಗೆ ವಿಳಂಬ ದ್ರೋಹ ತೋರುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆರೋಪ ಮಾಡಿದ್ದಾರೆ. ತಮಿಳುನಾಡಿನಲ್ಲಿ ಪಕ್ಷವನ್ನು ವಿಸ್ತರಿಸಲು ಯೋಜನೆ ತಡೆಯುತ್ತಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಕನ್ನಡಿಗರಿಗೆ(Kannadigas) ಮಾಡುತ್ತಿರುವ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು.

ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ(Mekedatu Project) ಹಿಂದಿನ ಸರ್ಕಾರವೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಎರಡೂವರೆ ವರ್ಷದಿಂದ ಅಂಗೀಕಾರ ಪಡೆಯುವ ಪ್ರಯತ್ನ ಮಾಡಿಲ್ಲ. ಇದನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಜ.9ರಿಂದ 19ರ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಇದನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ. ತಮ್ಮ ತಪ್ಪುಗಳು ಹೊರಗೆ ಬಾರದಂತೆ ನೋಡಿಕೊಳ್ಳಲು ಜನರ ಧ್ವನಿ ಅಡಗಿಸಲು ಮುಂದಾಗಿದೆ ಎಂದು ಕಿಡಿಕಾರಿದರು.

Mekedatu Padayatre ಪಾದಯಾತ್ರೆಯಲ್ಲಿದ್ದ ಸಿದ್ದರಾಮಯ್ಯಗೆ ಜ್ವರ, ಕಳವಳ ವ್ಯಕ್ತಪಡಿಸಿದ ಸಚಿವ

ಸಿದ್ದರಾಮಯ್ಯ 2008-2013ರ ಅವಧಿಯಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ದೂರಿದ್ದಾರೆ. 2013ರಲ್ಲೇ ಕೇಂದ್ರ ಜಲ ಆಯೋಗಕ್ಕೆ ವರದಿ ನೀಡಿದ್ದೆವು. ಬಳಿಕ ವಿವಿಧ ಹಂತದ ಪ್ರಕ್ರಿಯೆ ಮುಗಿಸಿ 2019ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ವಿಸ್ತೃತ ಡಿಪಿಆರ್‌(DPR) ಸಲ್ಲಿಸಿದ್ದೇವೆ. ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರೂ ನ್ಯಾಯಾಲಯ ಡಿಪಿಆರ್‌ಗೆ ತಡೆ ನೀಡಿಲ್ಲ. ಹೀಗಾಗಿ ಯೋಜನೆ ಪ್ರಾರಂಭಿಸಲು ಪರಿಸರ ಇಲಾಖೆ ಅನುಮತಿ ಹೊರತುಪಡಸಿ ಬೇರೆ ಯಾವುದೇ ಅಡ್ಡಿ ಇಲ್ಲ. ಅದನ್ನು ನೀಡಬೇಕಿರುವುದು ಕೇಂದ್ರ ಸರ್ಕಾರ(Central Government) ಎಂದು ಹೇಳಿದರು.

25 ಸಂಸದರಿಗೆ ನಾಚಿಕೆಯಾಗಬೇಕು:

ಜನರ ಮುಂದೆ ವಾಸ್ತವ ಇಡದೆ ಸುಳ್ಳು ಮಾಹಿತಿ ನೀಡುವಿರಿ. ಮಿಸ್ಟರ್‌ ಗೋವಿಂದ ಕಾರಜೋಳ ಪರಿಸರ ಇಲಾಖೆ ಅನುಮತಿ ಪಡೆಯಲು ಯೋಗ್ಯತೆ ಇಲ್ಲ. ನಿಮಗೆ, 25 ಮಂದಿ ಸಂಸದರಿಗೆ ನಾಚಿಕೆಯಾಗಬೇಕು. ಬಿಜೆಪಿಯಲ್ಲಿ ನೆಲೆ ವಿಸ್ತರಿಸಲು ಅಣ್ಣಾ ಮಲೈ ಅವರಿಂದ ಅಲ್ಲಿನ ಉಸ್ತುವಾರಿಯಾಗಿರುವ ಸಿ.ಟಿ. ರವಿ ಧರಣಿ ಮಾಡಿಸುತ್ತಾರೆ. ಬಿಜೆಪಿಯವರು ತಮಿಳುನಾಡಿಗೆ ಬೆಂಬಲ ನೀಡಿದರೆ ರಾಜ್ಯಕ್ಕೆ ಮಾಡಿದ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು.

Mekedatu padayatra ಪಾದಯಾತ್ರೆ ಮಾಡದಂತೆ ಸಿದ್ದರಾಮಯ್ಯಗೆ ಹೇಳಿದ್ಯಾಕೆ? ಸ್ಪಷ್ಟನೆ ಕೊಟ್ಟ ಡಿಕೆಶಿ

ಕನ್ನಡಿಗರಿಗೆ ಬೊಮ್ಮಾಯಿ, ಕಾರಜೋಳ ದ್ರೋಹ

2019ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಕೇಂದ್ರಕ್ಕೆ ವಿಸ್ತೃತ ಡಿಪಿಆರ್‌ ಸಲ್ಲಿಸಿದ್ದೇವೆ. ಅದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗಿದೆ. ಆದರೂ ನ್ಯಾಯಾಲಯ ಡಿಪಿಆರ್‌ಗೆ ತಡೆ ನೀಡಿಲ್ಲ. ಹೀಗಾಗಿ ಯೋಜನೆ ಪ್ರಾರಂಭಿಸಲು ಪರಿಸರ ಇಲಾಖೆ ಅನುಮತಿ ಹೊರತುಪಡಿಸಿ ಬೇರೆ ಯಾವುದೇ ಅಡ್ಡಿ ಇಲ್ಲ ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.  

ಪಾದಯಾತ್ರೆ ವೇಳೆ ಸುಸ್ತು, ಕಾರನ್ನೇರಿದ ಸಿದ್ದರಾಮಯ್ಯ

ನಮ್ಮ ನೀರು, ನಮ್ಮ ಹಕ್ಕು' ಘೋಷವಾಕ್ಯದೊಂದಿದೆ ಬೆಂಗಳೂರು (Bengaluru) ಸೇರಿ ಕಾವೇರಿ ಜಲಾನಯನ ಪ್ರದೇಶದ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮೇಕೆದಾಟು ಯೋಜನೆಗೆ (Mekedatu Project) ಕಾಂಗ್ರೆಸ್ ಚಾಲನೆ ನೀಡಿದೆ. ಸ್ವಲ್ಪ ದೂರ ನಡೆಯುತ್ತಿದ್ದಂತೆ ಬಿಸಿಲಿನ ಝಳಕ್ಕೆ ಸಿದ್ದರಾಮಯ್ಯ (Siddaramaiah) ಸುಸ್ತಾಗಿ ಬಿಟ್ಟರು. ಪಾದಯಾತ್ರೆ ಕೈ ಬಿಟ್ಟು, ಕಾರನ್ನೇರಿ ಹೊರಟು ಹೋದರು. ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಇವರಿಗಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
 

Follow Us:
Download App:
  • android
  • ios