Mekedatu project ಮೇಕೆದಾಟು ವಿರೋಧಿಸಲು ತಮಿಳನಾಡಿಗೆ ಹಕ್ಕಿಲ್ಲ, ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದು ಕಿಡಿ!

  • ಮೇಕೆದಾಟು ಯೋಜನೆ ಜಾರಿಗೆ ಯಾವುದೇ ತೊಡಕಿಲ್ಲ
  • ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಡಿಪಿಆರ್‌ ಮಾಡಲಾಗಿದೆ
  • ರಾಜ್ಯ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
siddaramaiah slams Double Engine BJP government on Mekedatu project delay ckm

ಧಾರವಾಡ(ಜ.24): ಮೇಕೆದಾಟು ಯೋಜನೆ(Mekedatu project) ಜಾರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡುತ್ತಿಲ್ಲ. ರಾಜ್ಯ ಸರ್ಕಾರ ಕೇಳುತ್ತಿಲ್ಲ. ಆದರೆ, ಬಿಜೆ​ಪಿ​ಯ​ವರು(BJP) ಡಬಲ್‌ ಇಂಜಿನ್‌ ಸರ್ಕಾರ ನಮ್ಮದು ಎನ್ನುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ(Tamilnadu) ಬಿಜೆಪಿ ಸರ್ಕಾರ ಬೆಳೆಸಲು ಈ ರೀತಿ ರಾಜ್ಯದಲ್ಲಿ ರಾಜಕಾರಣ(Politics) ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಮೆಲ್ನೋಟಕ್ಕೆ ಮೊಸಳೆ ಕಣ್ಣೀರು ಹಾಕುತ್ತಿದೆ. ಮೇಕೆದಾಟು ಯೋಜನೆಗೆ ವಿರೋಧ ಮಾಡಲು ತಮಿಳುನಾಡಿನವರಿಗೂ ಹಕ್ಕಿಲ್ಲ. ಯೋಜನೆ ಜಾರಿಗೆ ಯಾವುದೇ ತೊಡಕಿಲ್ಲ. ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಡಿಪಿಆರ್‌ ಮಾಡಲಾಗಿದೆ. ಎಲ್ಲವೂ ಸರಿ ಇದ್ದಾಗ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿದರು.

Karnataka Politics ಸರ್ವ ಪಕ್ಷಗಳ ಸಭೆ ಕರೆದ ಸಿಎಂ, ಕಾಂಗ್ರೆಸ್ ತಂತ್ರಕ್ಕೆ ಇದು ಪ್ರತಿತಂತ್ರನಾ?

ಸಿದ್ದರಾಮಯ್ಯ ಸಂವಿಧಾನ ಓದಿದ್ದಾನೆ. ಆದರೆ, ಕುಮಾರಸ್ವಾಮಿ(HD Kumaraswamy) ಓದಿದ್ದಾನಾ ಎಂದು ಪ್ರಶ್ನಿಸಿದ ಅವರು, ಜೆಡಿಎಸ್‌ ಪಕ್ಷವನ್ನು ದೇವೇಗೌಡರು ಮತ್ತು ನಾನು ಕಟ್ಟಿದ್ದೇವೆ. 1999ರಲ್ಲಿ ಜೆಡಿಯು ಜೆಡಿಎಸ್‌ ಆದಾಗ ನಾನು ರಾಜ್ಯಾಧ್ಯಕ್ಷ. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರು. ಆಗ 2004ರಲ್ಲಿ 59 ಸ್ಥಾನ ಗೆದ್ದಿದ್ದೇವು. ನಂತರ ಪಕ್ಷದಿಂದ ತೆಗೆದು ಹಾಕಿದಾಗ ಕಾಂಗ್ರೆಸ್ಸಿಗೆ ಹೋದೆ. ಕುಮಾರಸ್ವಾಮಿ 2008ರಲ್ಲಿ 28 ಸ್ಥಾನ ಗೆದ್ದರು. ನಾನು ಜೆಡಿಎಸ್‌ ಬಿಟ್ಟನಂತರ ಜೆಡಿಎಸ್‌ ಜಾತ್ಯಾತೀತ ಪಕ್ಷವಾಗಿ ಉಳಿಯಲಿಲ್ಲ. ನಾನು ಹೋದ ನಂತರ ಸತೀಶ್‌ ಜಾರಕಿಹೊಳಿ, ಇಬ್ರಾಹಿಂ, ಮಹಾದೇವಪ್ಪ, ವೆಂಕಟೇಶ್‌, ಬಿ.ಆರ್‌. ಪಾಟೀಲ ಹೀಗೆ ಪ್ರಮುಖರು ಬಿಟ್ಟು ಹೋದರು. ಸದ್ಯ ಜೆಡಿಎಸ್‌ ಫ್ಯಾಮಲಿ ಪಾರ್ಟಿಯಾಗಿ ಮಾತ್ರ ಉಳಿದಿದೆ ಎಂದು ಹಾಸ್ಯ ಮಾಡಿದರು.

Siddu VS HDK ಸಿದ್ದರಾಮಯ್ಯನವರನ್ನ ಸ್ವಯಂಘೋಷಿತ ಸಂವಿಧಾನ ಪಂಡಿತ ಎಂದು ಕರೆದ ಕುಮಾರಸ್ವಾಮಿ

ರಾಜ್ಯದಲ್ಲಿ ಕೋವಿಡ್‌ ಹೆಚ್ಚಳವಾದ(Coronavirus) ಕಾರಣ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಂತಿದೆ. ಕೋವಿಡ್‌ ಕಡಿಮೆಯಾದ ನಂತರ ಮತ್ತೆ ಪಾದಯಾತ್ರೆ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿದ್ದು ಈ ಪಾದಯಾತ್ರೆ ಮಾಡಬಾರದು ಎಂದು ಬಿಜೆಪಿ ನಡೆ ವಿರೋಧಿಸಿದರು.

ಅಲ್ಲದೇ, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಯಾವುದೇ ಕೆಲಸಗಳು ಆಗುತ್ತಿಲ್ಲ. ಸರ್ಕಾರದ ಬಳಿ ಹಣವಿಲ್ಲ. ಹೀಗೆ ಎಷ್ಟುದಿನ ಸರ್ಕಾರ ನಡೆಸುತ್ತಾರೆ? ಸಾಲ ಮಾಡಿ ಹೋಳಿಗೆ ತಿನ್ನಲು ಸಾಧ್ಯವಿಲ್ಲ. ಮೂರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಈಗಾಗಲೇ ಬಿಜೆಪಿ ಸರ್ಕಾರ ಶೇ. 40 ಸರ್ಕಾರ ಎಂದು ಮೋದಿ ಅವರಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಇದಕ್ಕೆ ಮೋದಿ ಅವರು ಉತ್ತರ ಕೊಡಬೇಕಿದೆ. ನಾ ಕಾವುಂಗಾ, ಮೈ ಕಾನೆದುಂಗಾ ಎಂದು ಮೋದಿ ಹೇಳುತ್ತಾರೆ ಎಂದು ಪ್ರಧಾನಿ ಅವರನ್ನು ಸಿದ್ದರಾಮಯ್ಯ ಹಂಗಿಸಿದರು.

ಪಾದಯಾತ್ರೆ ತಡೆಯಲು ವೀಕೆಂಡ್‌ ಕರ್ಫ್ಯೂ: ಸತೀಶ್‌
ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸುವ ಸಲುವಾಗಿಯೇ ರಾಜ್ಯ ಸರ್ಕಾರ ವೀಕೆಂಡ್‌  ಕರ್ಫ್ಯೂ (Weekend Curfew)ಜಾರಿ ಮಾಡಿತ್ತು. ಮೇಕೆದಾಟು ಪಾದಯಾತ್ರೆ ಯಶಸ್ವಿ ಆಗಬಾರದು, ಪಾದಯಾತ್ರೆ ಬೆಂಗಳೂರು ತಲುಪಬಾರದು ಎಂಬ ಉದ್ದೇಶ ಸರ್ಕಾರದ್ದಾಗಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ವೀಕೆಂಡ್‌ ಕರ್ಫ್ಯೂ ವಾಪಸ್‌ ಪಡೆಯುವ ಮೂಲಕ ಅದನ್ನು ಬಿಜೆಪಿ ಸರ್ಕಾರವೇ ಸಾಬೀತು ಮಾಡಿದೆ. ಸರ್ಕಾರಕ್ಕೆ ಕಾಂಗ್ರೆಸ್‌ ಬಗ್ಗೆ ಭಯ ಹುಟ್ಟಿದ್ದು, ಇಂತಹ ಹೋರಾಟಗಳನ್ನು ತಡೆಗಟ್ಟಲು ಕುತಂತ್ರ ರೂಪಿಸುತ್ತಿದೆ. ಬಿಜೆಪಿ ಸರ್ಕಾರ ಪಾದಯಾತ್ರೆ ಹತ್ತಿಕ್ಕಲು ಪ್ರಯತ್ನಿಸಿದರೂ ಜನರ ಮನಸಿನಲ್ಲಿ ಕಾಂಗ್ರೆಸ್‌ ಪಾದಯಾತ್ರೆ ಶಾಶ್ವತವಾಗಿ ಉಳಿದಿದೆ ಎಂದರು. ಮತ್ತೆ ಪಾದಯಾತ್ರೆ ಆರಂಭಿಸುವುದಾಗಿ ಸುಳಿವು ನೀಡಿದರು.
 

Latest Videos
Follow Us:
Download App:
  • android
  • ios