Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಅವರಿಗೆ ಇದು 6 , ಉಸ್ತುವಾರಿ ಮಂತ್ರಿಯಾಗಿ ಎಚ್‌ಸಿ ಮಹದೇವಪ್ಪ ಅವರಿಗೆ 3ನೇ ದಸರಾ

ಸಿದ್ದರಾಮಯ್ಯ ಅವರು ಆರನೇ ದಸರೆಯಲ್ಲಿ ಪಾಲ್ಗೊಳ್ಳುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ದಸರೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ.

Siddaramaiah participated in Mysore dasara for the 6th time as Chief Minister rav
Author
First Published Oct 10, 2023, 12:03 AM IST

ಮೈಸೂರು (ಅ.9): ಕಳೆದ ನಾಲ್ಕು ದಶಕಗಳಿಂದಲೂ ರಾಜಕಾರಣದಲ್ಲಿರುವ ಸಿದ್ದರಾಮಯ್ಯ ಮೊದಲ ಬಾರಿ ಗೆದ್ದಾಗ ರೇಷ್ಮೆ, ಎರಡನೇ ಬಾರಿ ಗೆದ್ದಾಗ ಪಶುಸಂಗೋಪನೆ ಹಾಗೂ ಸಾರಿಗೆ ಸಚಿವರಾಗಿದ್ದರು. ಆದರೆ ಅವರು 1994 ರಲ್ಲಿ ಮೂರನೇ ಬಾರಿ ಗೆದ್ದಾಗ ಹಣಕಾಸು ಖಾತೆಯ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆದರು. ನಂತರ ಉಪ ಮುಖ್ಯಮಂತ್ರಿಯೂ ಆದರು. ಹೀಗಾಗಿ ಉಸ್ತುವಾರಿ ಸಚಿವರಾಗಿ, ಜೊತೆಗೆ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಮುನ್ನಡೆಸಿದ್ದಾರೆ. 

2013- 2018ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಸತತ ಐದು ದಸರೆಗಳಲ್ಲಿ ಪಾಲ್ಗೊಂಡಿದ್ದರು. ಯಡಿಯೂರಪ್ಪ ಅವರು ಮೊದಲ ಬಾರಿ ಸಿಎಂ ಆಗಿದ್ದಾಗ 2008, 2009, 2010- ಸತತ ಮೂರು ಬಾರಿ, ಎರಡನೇ ಬಾರಿ ಸಿಎಂ ಆಗಿದ್ದಾಗ 2019, 2020- ಸತತ ಎರಡು ಬಾರಿ ಒಟ್ಟು ಐದು ಬಾರಿ ಪಾಲ್ಗೊಂಡು, ಸಿದ್ದರಾಮಯ್ಯ(Siddaramaiah) ಅವರ ದಾಖಲೆಯನ್ನು ಸರಿಗಟ್ಟಿದ್ದರು.

ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ವಂಚನೆ

ಇದೀಗ ಸಿದ್ದರಾಮಯ್ಯ ಅವರು ಆರನೇ ದಸರೆಯಲ್ಲಿ ಪಾಲ್ಗೊಳ್ಳುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ದಸರೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ.

ಎನ್. ಧರಂಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ತಲಾ ಎರಡು, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ತಲಾ ಒಂದು ದಸರೆಯಲ್ಲಿ ಸಿಎಂ ಆಗಿ ಭಾಗವಹಿಸಿದ್ದಾರೆ.

ಡಾ.ಎಚ್.ಸಿ. ಮಹದೇವಪ್ಪ ಅವರು ಆರು ಬಾರಿ ಶಾಸಕರಾಗಿ, ಐದು ಬಾರಿ ಸಚಿವರಾಗಿದ್ದರೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಲು 22 ವರ್ಷಗಳ ಕಾಲ ಕಾಯಬೇಕಾಯಿತು. ಅವರು ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೊನೆಯ ಎರಡು ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎರಡು ದಸರೆಯನ್ನು ನಿರ್ವಹಿಸಿದ್ದರು. ಇದು ಮೂರನೇ ದಸರಾ.

ರಾಜೇಶ್ವರಿ ಸೋಮು ನಂತರ ಶಿವಕುಮಾರ್‌ಗೆ ಎರಡನೇ ಅವಕಾಶ!

ಸಾಮಾನ್ಯವಾಗಿ ಮೇಯರ್ ಅವಧಿ ಒಂದು ವರ್ಷ. ದಸರೆಯ ಉದ್ಘಾಟನೆ, ಅರಮನೆ ಅಂಗಳದ ವಿಶೇಷ ವೇದಿಕೆಯಲ್ಲಿ ನಿಂತು ಜಂಬೂ ಸವಾರಿ(Jambu savari)ಯಂದು ಚಿನ್ನದ ಅಂಬಾರಿಯಲ್ಲಿರುವ ನಾಡದೇವತೆಗೆ ಪುಷ್ಪಾರ್ಚನೆ ಮಾಡುವ ಅವಕಾಶ ಸಿಗುವುದು ಒಂದೇ ಬಾರಿ. ಮೇಯರ್ ಚುನಾವಣೆ ವಿಳಂಬವಾದಾಗ ಮಾತ್ರ ಸ್ವಲ್ಪ ಏರುಪೇರಾಗುತ್ತದೆ. ಮೈಸೂರು ನಗರಪಾಲಿಕೆಯು ೧೯೮೩ ರಿಂದಲೂ ಅಸ್ವಿತ್ವದಲ್ಲಿದೆ. ಈವರೆಗೆ ಎರಡು ಬಾರಿ ದಸರೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ರಾಜೇಶ್ವರಿ ಸೋಮು ಅವರಿಗೆ ಮಾತ್ರ. ಅವರ ನಂತರ ಇದೀಗ ಶಿವಕುಮಾರ್ ಅವರಿಗೆ ಈ ರೀತಿಯ ಅವಕಾಶ ಲಭ್ಯವಾಗಿದೆ.

ಮೈಸೂರು ಅರಮನೆಯಲ್ಲಿ ಇಂದು ರತ್ನಖಚಿತ ಸಿಂಹಾಸನ ಜೋಡಣೆ

ಶಿವಕುಮಾರ್ ಅವರ ಒಂದು ವರ್ಷದ ಅವಧಿ ಸೆ.5 ರಂದೇ ಮುಕ್ತಾಯವಾಗಿದೆ. ಆದರೆ ಪಾಲಿಕೆಯ ಚುನಾಯಿತ ಸದಸ್ಯರ ಅವಧಿ ನವೆಂಬರ್ ಮೊದಲ ವಾರ ಮುಕ್ತಾಯವಾಗುತ್ತಿರುವುದರಿಂದ ಉಳಿದ ಎರಡು ತಿಂಗಳ ಅವಧಿಗೆ ಮೇಯರ್- ಉಪ ಮೇಯರ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಲಿಲ್ಲ. ಇದರಿಂದ ಶಿವಕುಮಾರ್ ಅಧಿಕಾರದಲ್ಲಿ ಮುಂದುವರೆಯುತ್ತಿದ್ದು, ಎರಡನೇ ಬಾರಿಗೆ ದಸರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Follow Us:
Download App:
  • android
  • ios