ನವದೆಹಲಿ (ಅ.11):  ಒಳಮೀಸಲಾತಿ ಜಾರಿಗೆ ತರುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ವಿಫಲವಾಯ್ತು. ಆ ತಪ್ಪು ಕೂಡ ನಡೆದು ಹೋಯ್ತು ಅಂಥ ಕಾಂಗ್ರೆಸ್‌ ಪಕ್ಷದ ರಾಜ್ಯಸಭಾ ಸಂಸದ ಡಾ.ಎಲ್‌.ಹನುಮಂತಯ್ಯ ವಿಷಾದಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಹನುಮಂತಯ್ಯ, ಕಾಂಗ್ರೆಸ್‌ ಸೇರಿ ಎಲ್ಲಾ ಪಕ್ಷಗಳು ಕೂಡ ತಮ್ಮ ಪ್ರಣಾಳಿಕೆಗಳಲ್ಲಿ ಒಳಮೀಸಲಾತಿ ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿ, ಮತ ಪಡೆದು ಅಧಿಕಾರಕ್ಕೆ ಬಂದ ಕೂಡಲೇ ಕೆಲವು ಶಾಸಕರು ವಿರೋಧಿಸುತ್ತಿದ್ದಾರೆ ಅಂಥ ನಿಲ್ಲಿಸೋದು ಸರಿ ಅಲ್ಲ. ಇಂಥ ಸಾಮಾಜಿಕ ವರದಿಯನ್ನು ಕೂಡ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ್ದಾರೆ ಅಂಥ ಆರೋಪಿಸಿದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒಳಮೀಸಲಾತಿ ಕುರಿತು ಚರ್ಚೆಗೆ ಚಾಲನೆ ನೀಡಿದರು. ಆದರೆ ಚುನಾವಣೆ ನೆಪವೊಡ್ಡಿ ಮುಂದೂಡಿದರು ಅಂಥ ಅಸಮಧಾನ ವ್ಯಕ್ತಪಡಿಸಿದರು.

375 ಪ್ರಶ್ನೆಗೆ ಉತ್ತರ ಬಂದಿ​ಲ್ಲ: ಸ್ಪೀಕರ್‌ಗೆ ಪತ್ರ ಬರೆದ ವಿಪಕ್ಷ ನಾಯಕ ಸಿದ್ದರಾಮಯ್ಯ

ಈಗ ಒಳಮೀಸಲಾತಿ ಜಾರಿಯಾಗಬೇಕು ಅಂಥ ಹೇಳುತ್ತಿರುವ ಮಾಜಿ ಸಚಿವ ಆಂಜನೇಯ, ಎ.ನಾರಾಯಣಸ್ವಾಮಿ ಅವರೇ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಅಧಿಕಾರ ಇದ್ದಾಗ ಮಾಡುವ ಧೈರ್ಯ ತೋರಿಸಲಿಲ್ಲ. ಈಗ ಅಧಿಕಾರದಿಂದ ಇಳಿದ ಮೇಲೆ ಮಾಡಬೇಕು ಅಂಥ ಒತ್ತಾಯ ಮಾಡುವುದರಲ್ಲಿ ಅರ್ಥವೂ ಇಲ್ಲ ಎಂದರು.

ಖರ್ಗೆ ವಿರೋಧವಿಲ್ಲ:

ಈ ಕುರಿತು ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ನಡೆದ ಚರ್ಚಿಸಿದ್ದು, ಅವರು ಒಳಮೀಸಲಾತಿ ಜಾರಿ ಕುರಿತು ಅಂಕಿ-ಅಂಶಗಳನ್ನು ಸರಿಯಾಗಿ ತೆಗೆದುಕೊಂಡು ಮಾಡಿದರೆ ನನ್ನ ವಿರೋಧವಿಲ್ಲ ಎಂದು ತಿಳಿಸಿದ್ದಾರೆ. ಅದರೆ ಖರ್ಗೆಯವರಿಗೆ ಅಂಕಿ-ಅಂಶ ಸರಿಯಾಗಿಲ್ಲ ಅನ್ನೋ ಅಭಿಪ್ರಾಯ ಇದ್ದಾಗೆ ಇದೆ. ಅದರೆ ಸರ್ಕಾರದ ಬಳಿ ಅಂಕಿ-ಅಂಶಗಳು ಈಗ ಲಭ್ಯ ಇದೆ. ಅದರೆ ಕಾಂತರಾಜು ನೇತೃತ್ವದಲ್ಲಿ ನೀಡಿದ ವರದಿಯನ್ನು ಸರ್ಕಾರ ಈಗ ಒಪ್ಪಿಕೊಳ್ಳಬೇಕಿದೆ ಎಂದರು.