Asianet Suvarna News Asianet Suvarna News

375 ಪ್ರಶ್ನೆಗೆ ಉತ್ತರ ಬಂದಿ​ಲ್ಲ: ಸ್ಪೀಕರ್‌ಗೆ ಪತ್ರ ಬರೆದ ವಿಪಕ್ಷ ನಾಯಕ ಸಿದ್ದರಾಮಯ್ಯ

ಸೆ.21 ರಿಂದ 26ರವರೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ 969 ಪ್ರಶ್ನೆ ಕೇಳಿದ್ದ ಕಾಂಗ್ರೆಸ್‌ ಪಕ್ಷದ ಶಾಸಕರು|   ಈ ಪೈಕಿ 594 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದು ಅಧಿವೇಶನ ಕಳೆದು ಮೂರು ವಾರವಾದರೂ ಸರ್ಕಾರ ಉತ್ತರ ನೀಡಿಲ್ಲ| ಕೊಟ್ಟಿರುವ ಉತ್ತರಗಳೂ ಸರಿಯಿಲ್ಲ. ಇದು ಸರ್ಕಾರದ ಬೇಜವಾಬ್ದಾರಿತನ ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ| 

Siddaramaiah Letter To Speaker Vishweshwar Hegde Kageri grg
Author
Bengaluru, First Published Oct 10, 2020, 1:57 PM IST
  • Facebook
  • Twitter
  • Whatsapp

ಬೆಂಗಳೂರು(ಅ.10): ವಿಧಾನಸಭೆ ಅಧಿವೇಶನದ ವೇಳೆ ಕಾಂಗ್ರೆಸ್‌ ಪಕ್ಷದ ಶಾಸಕರು ಕೇಳಿದ್ದ 969 ಪ್ರಶ್ನೆಗಳಿಗೆ ಇದುವರೆಗೆ 594 ಪ್ರಶ್ನೆಗಳಿಗೆ ಮಾತ್ರ ಉತ್ತರ ಬಂದಿದೆ. ಉಳಿದ 375 ಪ್ರಶ್ನೆ​ಗ​ಳಿಗೆ ಅಧಿವೇಶನ ಕಳೆದ 3 ವಾರ ಕಳೆದರೂ ಉತ್ತರ ನೀಡಿಲ್ಲ’ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅವರಿಗೆ ಪತ್ರ ಬರೆದಿದ್ದಾರೆ.

ಸೆ.21 ರಿಂದ 26ರವರೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರು 969 ಪ್ರಶ್ನೆ ಕೇಳಿದ್ದರು. ಈ ಪೈಕಿ 594 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದು ಅಧಿವೇಶನ ಕಳೆದು ಮೂರು ವಾರವಾದರೂ ಸರ್ಕಾರ ಉತ್ತರ ನೀಡಿಲ್ಲ. ಕೊಟ್ಟಿರುವ ಉತ್ತರಗಳೂ ಸರಿಯಿಲ್ಲ. ಇದು ಸರ್ಕಾರದ ಬೇಜವಾಬ್ದಾರಿತನ ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸಿದ್ದರಾಮಯ್ಯಗೆ ದೋಖಾ, ಹಳ್ಳ ಹತ್ತಿತು ಸಾಲಮನ್ನಾ ಯೋಜನೆ; ಕೋಟಿ ಕೋಟಿ ಗುಳುಂ

ಈ ಪ್ರಶ್ನೆಗಳೆಲ್ಲವೂ ಸಾರ್ವಜನಿಕವಾಗಿ ಮಹತ್ವದವು. ಹೀಗಾಗಿ ತುರ್ತಾಗಿ ಹಾಗೂ ಸಮರ್ಪಕವಾಗಿ ಉತ್ತರಗಳನ್ನು ಸಂಬಂಧಿಸಿದ ಶಾಸಕರಿಗೆ ಒದಗಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿ ಎಂದು ಕಾಗೇರಿ ಅವರಿಗೆ ಕೋರಿದ್ದಾರೆ.
 

Follow Us:
Download App:
  • android
  • ios