Bengaluru crime: ಅತ್ಯಾಚಾರ ದೂರು ಕೊಡಲು ಬಂದವಳಿಗೆ ಕಿರುಕುಳ ಕೊಟ್ಟ ಎಸ್‌ಐ ಅಮಾನತು
ಲೈಂಗಿಕ ದೌರ್ಜನ್ಯ ಸಂಬಂಧ ದೂರು ನೀಡಲು ಬಂದ ಸಂತ್ರಸ್ತೆಗೆ ಕಿರುಕುಳ ನೀಡಿದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ. ಸಂತ್ರಸ್ತೆ ಆರೋಪದ ಬಸವೇಶ್ವರನಗರ ಠಾಣೆ ಸಬ್ ಇನ್‌ಸ್ಪೆಕ್ಟರ್ ಕೆ.ಟಿ.ಸತೀಶ್ ಅವರನ್ನು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ.

ಬೆಂಗಳೂರು (ಆ.19) : ಲೈಂಗಿಕ ದೌರ್ಜನ್ಯ ಸಂಬಂಧ ದೂರು ನೀಡಲು ಬಂದ ಸಂತ್ರಸ್ತೆಗೆ ಕಿರುಕುಳ ನೀಡಿದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ. ಸಂತ್ರಸ್ತೆ ಆರೋಪದ ಬಸವೇಶ್ವರನಗರ ಠಾಣೆ ಸಬ್ ಇನ್‌ಸ್ಪೆಕ್ಟರ್ ಕೆ.ಟಿ.ಸತೀಶ್ ಅವರನ್ನು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಬಸವೇಶ್ವರ ನಗರ ಠಾಣೆ(Basaveshwaranagar police station)ಗೆ ತನ್ನ ಮೇಲೆ ಸ್ನೇಹಿತ ನಡೆಸಿದ ಅತ್ಯಾಚಾರದ ಬಗ್ಗೆ ದೂರು ಕೊಡಲು ಯುವತಿ ತೆರಳಿದ್ದಳು. ಆ ವೇಳೆ ಆಕೆಯ ದೂರಿಗೆ ಸ್ಪಂದಿಸಿ ಸೂಕ್ತ ಕಾನೂನು ಕ್ರಮ ಜರುಗಿಸದೆ ಸತೀಶ್, ಹಣ ಪಡೆದು ಆರೋಪಿಗೆ ಸಹಕರಿಸಿದ್ದರು. ಅಲ್ಲದೆ ಸಂತ್ರಸ್ತೆಯಿಂದ ಮೊಬೈಲ್ ಜಪ್ತಿ ಮಾಡಿ ಸಾಕ್ಷ್ಯ ನಾಶ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಪೊಲೀಸರ ಕಿರುಕುಳದ ಬಗ್ಗೆ ಆಯುಕ್ತ ಬಿ.ದಯಾನಂದ್(B Dayananda IPS) ಅವರಿಗೆ ಸಂತ್ರಸ್ತೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಈ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸೂಚಿಸಿದ್ದರು.
ಬೆಂಗಳೂರು: ದೂರು ಕೊಡಲು ಬಂದವಳ ಜತೆಗೆ ಪೊಲೀಸಪ್ಪನ ಅನುಚಿತ ವರ್ತನೆ?
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು
ಕಲಬರಗಿ: ಅಫಜಲ್ಪುರ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಮೂವರು ಆರೋಪಿತರು ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಪೋಕ್ಸೊ ಕಾಯ್ದೆಯಡಿ ಬುಧವಾರ ಸಂಜೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತಂತೆ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದ ವಿಡಿಯೋ ವೀಕ್ಷಿಸಿದ ಬಾಲಕನ ತಂದೆ ಈ ಸಂಬಂಧ ಶಿವಾನಂದ ಅಂಬಿಗರ, ಅನೀಲ ಅಂಬಿಗೇರ ಹಾಗೂ ಕಾರ್ತಿಕ್ ನಾಯ್ಕೋಡಿ ಎಂಬ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.
ಆ. 13ರಂದು ಮೂವರು ಆರೋಪಿಗಳು ಅಪ್ರಾಪ್ತನನ್ನು ಗ್ರಾಮದ ಅನತಿ ದೂರದ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ನಿನಗೆ ಏನಾದರೂ ತಿನ್ನಲು ಕೊಡುತ್ತೇವೆ ಎಂದು ಸಮಜಾಯಿಷಿ ನೀಡಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Sexual assault: ದೂರು ಕೊಡಲು ಬಂದ ಮಹಿಳೆ ನಂಬರ್ ಪಡೆದು ಪದೇಪದೆ ಕರೆ ಮಾಡುತ್ತಿದ್ದ 'ಪೋಲಿ'ಸಪ್ಪ!
ಆರೋಪಿಗಳು ಈ ಕೃತ್ಯ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದನ್ನು ನೋಡಿದ ಬಾಲಕನ ಮತ್ತೋರ್ವ ಸಹೋದರ ತನ್ನ ತಂದೆಗೆ ವಿಡಿಯೋ ತೋರಿಸಿದ್ದಾನೆ. ನಂತರ ತಂದೆ ದೂರು ಸಲ್ಲಿಸಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಅಫಜಲಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.