Asianet Suvarna News Asianet Suvarna News

Haveri ಬೇಡ್ತಿ-ವರದಾ ಜೋಡಣೆಗೆ ಅನುದಾನ ನೀಡಿ

ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ಶಿವರಾಜ ಸಜ್ಜನ ಮನವಿ

ಹಾನಗಲ್ಲ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ

ರೈತರ ಬಹುದಿನಗಳ ಕನಸಿನ ಯೋಜನೆ ಇದು

shivaraj sajjanar requested to CM Basavaraj Bommai Grants for the bedti-varada river link in karnataka budget 2022 san
Author
Bengaluru, First Published Mar 4, 2022, 2:38 AM IST

ಹಾನಗಲ್ಲ (ಮಾ.4): ಬೇಡ್ತಿ-ವರದಾ ನದಿ ಜೋಡಣೆಗೆ (Bedti-Varada River Link ) ರಾಜ್ಯ ಸರ್ಕಾರ (State Governament) ಇದೇ ಬಜೆಟ್‌ನಲ್ಲಿ (Budget) ಅನುದಾನ ಬಿಡುಗಡೆ ಮಾಡಬೇಕು ಎಂದು ಮಾಜಿ ಶಾಸಕ ಶಿವರಾಜ ಸಜ್ಜನ ಮನವಿ ಮಾಡಿದ್ದಾರೆ. ಗುರುವಾರ ಹಾನಗಲ್ಲ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಈ ಕುರಿತು ಮುಖ್ಯಮಂತ್ರಿ (CM Basavaraj Bommai) ಮನವೊಲಿಸಿ, ವಾಸ್ತವ ಮನವರಿಕೆ ಮಾಡಿಕೊಡುತ್ತೇನೆ. ಶೀಘ್ರ ಈ ಯೋಜನೆ ಕೈಗೂಡಲು ಬೃಹತ್‌ ನೀರಾವರಿ ಸಚಿವರಾದಿಯಾಗಿ ಮಂತ್ರಿ ಮಂಡಲ ಸಹಕಾರ ನೀಡಬೇಕು ಎಂದರು.

ರೈತರ ಬಹು ದಿನಗಳ ಕನಸಿನ ಯೋಜನೆ ಇದು. ರಾಜ್ಯದ ಮಹಾತ್ವಾಕಾಂಕ್ಷಿ ಯೋಜನೆಯೂ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ, ಶಾಲ್ಮಲಾ, ಅಘನಾಶಿನಿ ಕಿರುನದಿಗಳಿಗೆ ಅಣೆಕಟ್ಟು ಕಟ್ಟಿಸಮುದ್ರದ ಪಾಲಾಗುವ ನೀರನ್ನು ರೈತರ ಜಮೀನಿಗೆ ಹರಿಸುವ ಪುಣ್ಯ ಕಾರ್ಯ ರಾಜ್ಯ ಸರ್ಕಾರದಿಂದ ಆಗಬೇಕಾಗಿದೆ. ಹಾವೇರಿ ಜಿಲ್ಲೆಗೆ ಮಾತ್ರವಲ್ಲ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬಹುದು. ಇದಕ್ಕಾಗಿ ಎಲ್ಲ ಹೋರಾಟಕ್ಕೆ ಬದ್ಧ ಎಂದು ಅವರು ತಿಳಿಸಿದರು.
ಹೋತನಹಳ್ಳಿಯ ಸಿದ್ಧಾರೂಢಮಠದ ಶಂಕರಾನಂದ ಮಹಾಸ್ವಾಮಿಗಳು ಮಾತನಾಡಿ, ರೈತರು ನೀರಾವರಿ ಯೋಜನೆ ಕೇಳುತ್ತಿದ್ದಾರೆ. ಸಬ್ಸಿಡಿ ಯೋಜನೆಗಳನ್ನಲ್ಲ. ರೈತನ ಭೂಮಿಗೆ ನೀರು ಕೊಟ್ಟರೆ ರೈತರೇ ಸರ್ಕಾರಕ್ಕೆ ಹಣ ಕೊಡುವ ಶಕ್ತಿ ಹೊಂದಬಲ್ಲರು. ಆದಾಯ ಸುಧಾರಿಸಿಕೊಂಡು ಸಂತೃಪ್ತವಾಗಿ ದುಡಿಯಬಲ್ಲರು. ನೀರು ಕೊಡಿ, ರೈತರ ಶಕ್ತಿ ಬಲಪಡಿಸಿ ಎಂದರು.

ಹಿರಿಯ ರೈತ ನಾಯಕ ಬಸವರಾಜ ಹಾದಿಮನಿ ಮಾತನಾಡಿ, ಸಮುದ್ರ ಪಾಲಾಗುವ ನೀರನ್ನು ರೈತರ ಜಮೀನಿಗೆ ಹರಿಸುವ ಅತ್ಯಂತ ಉತ್ಕೃಷ್ಟಫಲ ನೀಡುವ ಬೇಡ್ತಿ-ವರದಾ ನದಿ ಜೋಡಣೆ ಈಗಾಗಲೇ ಕಾರ್ಯರೂಪಕ್ಕೆ ಬರಬೇಕಾಗಿತ್ತು. ಈಗಲಾದರೂ ನಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕಾರ್ಯಕ್ಕೆ ಆಸಕ್ತಿಯಿಂದ ಹಣ ಬಿಡುಗಡೆ ಮಾಡಿ ರೈತರ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭರವಸೆ ನಮ್ಮಲ್ಲಿದೆ. ಎಲ್ಲವನ್ನೂ ಹೋರಾಟದಿಂದಲೇ ಪಡೆಯುವುದಲ್ಲ. ಸರ್ಕಾರಗಳು ಯೋಗ್ಯ, ಅಗತ್ಯ ನೀರಾವರಿ ಯೋಜನೆಗಳನ್ನು ಸ್ವಯಂ ಇಚ್ಛೆಯಿಂದ ಜಾರಿಗೆ ತರಬೇಕು. ಬೇಡ್ತಿ-ವರದಾ ನದಿ ಜೋಡಣೆ ನಮ್ಮ ಹಕ್ಕು ಎಂದರು.

ಉಕ್ರೇನ್‌ನಲ್ಲಿ ಸಾವನ್ನಪ್ಪಿದ ನವೀನ್ ಮೃತದೇಹ ಯಾವಾಗ ಬರುತ್ತೆ? ಹೆತ್ತವರ ಕಾತರ
ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಮಾತನಾಡಿ, ಇದಕ್ಕಾಗಿ ಹೋರಾಟದ ಹಾದಿ ಹಿಡಿದಿದ್ದೇವೆ. ಯೋಜನೆ ಜಾರಿ ಆಗುವ ವರೆಗೆ ವಿರಮಿಸುವುದಿಲ್ಲ. ಇದು ಕೇವಲ ಹಾನಗಲ್ಲ ತಾಲೂಕಿನ ಹೋರಾಟವಲ್ಲ, ಬಹುಪಾಲು ಉತ್ತರ ಕರ್ನಾಟಕದ ಜಿಲ್ಲೆಗಳ ಹೋರಾಟವಾಗಿದೆ. ನೀರಾವರಿ ಯೋಜನೆಗಳು ವಿಳಂಬವಿಲ್ಲದೆ ಕಾರ್ಯರೂಪಕ್ಕೆ ಬರಬೇಕು ಎಂದರು.
ಹರಿಹರದ ಶ್ರೀ ಸದ್ಗುರು ಯೋಗಾನಂದ ಮಹಾಸ್ವಾಮಿಗಳು, ಚನ್ನಗಿರಿಯ ಶ್ರೀ ಕೃಷ್ಣಾನಂದ ಮಹಾಸ್ವಾಮಿಗಳು, ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಬಸಣ್ಣ ಎಲಿ, ಮಹೇಶ ವಿರೂಪಣ್ಣನವರ, ನಾಗೇಂದ್ರ ತುಮರಿಕೊಪ್ಪ, ಹನುಮಂತಪ್ಪ ಕೋಣನಕೊಪ್ಪ, ನಾಗರಾಜ ಮಲ್ಲಮ್ಮನವರ, ಬಸವರಾಜ ಆಲದಕಟ್ಟಿ, ಮಲಕಪ್ಪ ಕೋತಂಬ್ರಿ, ಶಿವಲಿಂಗಪ್ಪ ತಲ್ಲೂರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ನಿಂಗಪ್ಪ ಗೊಬ್ಬೇರ, ರಾಜು ಗೌಳಿ, ಪ್ರಕಾಶ ಮಲಗುಂದ, ನಿಜಲಿಂಗಪ್ಪ ಮದೆಪ್ಪನವರ, ರಾಜಣ್ಣ ಪಟ್ಟಣದ, ರಾಮಣ್ಣ ಮೊದಲಾದವರು ಇದ್ದರು.

Yellapur: 5,400 ಕೋಟಿ ವೆಚ್ಚದಲ್ಲಿ ಜಮೀನಿಗೆ ನೀರು: ಸಚಿವ ಶಿವರಾಮ ಹೆಬ್ಬಾರ
ಈ ಹಿಂದೆಯೂ  ಪ್ರಸ್ತಾಪವಾಗಿದ್ದ ಬೇಡ್ತಿ-ವರದಾ ನದಿಜೋಡಣೆ ಯೋಜನೆ ತುಂಬಾ ಅಪಾಯಕಾರಿಯಾದದ್ದು ಎನ್ನುವುದು ಪರಿಸರ ತಜ್ಞರ ಅಭಿಪ್ರಾಯ ಇದನ್ನು ಕುಡಿಯುವ ನೀರಿನ ಯೋಜನೆ ಎಂದು ಕರೆದಿದ್ದು ಯಾಕೆಂದರೆ, ಹೀಗೆ ಕರೆದರೆ, ಯಾವ ನ್ಯಾಯಾಲಯ ಅಥವಾ ರಾಷ್ಟ್ರೀಯ ಹಸಿರು ನ್ಯಾಯಪೀಠ ಇದಕ್ಕೆ ಕೊಕ್ಕೆ ಹಾಕಲಾರದು ಎಂಬ ಲೆಕ್ಕಾಚಾರ ಸರ್ಕಾರದ್ದು. ಇಲ್ಲಿಂದ 22 ಟಿಎಂಸಿಯಷ್ಟು ಬೃಹತ್ ಪ್ರಮಾಣದ ನೀರನ್ನು ಉತ್ತರ ಕರ್ನಾಟಕದ ಹಾವೇರಿ, ಗದಗ, ಕೊಪ್ಪಳ, ಸಿಂಧನೂರು, ರಾಯಚೂರು ಪ್ರದೇಶಗಳಿಗೆ ಕೊಂಡೊಯ್ಯುವ ಪ್ರಸ್ತಾಪವಿದೆ. ‘ಕುಡಿಯುವ ನೀರಿನ ಯೋಜನೆ’ ಎಂಬ ಹೆಸರಿನಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರದ ಬೃಹತ್ ನೀರಾವರಿ ಇಲಾಖೆ ಮುಂದಾಗಿದೆ.

Follow Us:
Download App:
  • android
  • ios