Asianet Suvarna News Asianet Suvarna News

ಸೋತಿದ್ದೇವೆಂದು ಟಾಟಾ ಬೈಬೈ ಹೇಳೊಲ್ಲ, ಇಲ್ಲಿಯೇ ಇರುತ್ತೇವೆ: ಗೀತಾ ಶಿವರಾಜ್ ಕುಮಾರ್

ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾರ್ಯಕರ್ತರು, ಮುಖಂಡರು, ಮತದಾರರು ಎಲ್ಲರೂ ಸಹಕಾರ ಕೊಟ್ಟಿದ್ದೀರಿ ನಿಮಗೆ ಕೃತಜ್ಞತೆಗಳನ್ನ ತಿಳಿಸುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೀತಾ ಶಿವರಾಜಕುಮಾರ ಭಾವುಕವಾಗಿ ನುಡಿದರು.

Shivamogga latest news today we will be with the voters in constituency says geeta shivaraj kumar rav
Author
First Published Jun 10, 2024, 4:59 PM IST

ಶಿವಮೊಗ್ಗ (ಜೂ.10): ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾರ್ಯಕರ್ತರು, ಮುಖಂಡರು, ಮತದಾರರು ಎಲ್ಲರೂ ಸಹಕಾರ ಕೊಟ್ಟಿದ್ದೀರಿ ನಿಮಗೆ ಕೃತಜ್ಞತೆಗಳನ್ನ ತಿಳಿಸುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೀತಾ ಶಿವರಾಜಕುಮಾರ ಭಾವುಕವಾಗಿ ನುಡಿದರು.

ಇಂದು ಶಿವಮೊಗ್ಗದಲ್ಲಿ ನಡೆದ ಕೃತಜ್ಞತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಮತದಾರರು ನಮ್ಮ ಮೇಲೆ ಭರವಸೆ ಇಟ್ಟು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ನನ್ನ ತಮ್ಮ ಮಧು‌ ಯಾವಾಗಲೂ ನನ್ನ ಜೊತೆಗಿದ್ದ ಅವನಿಗೂ ಥ್ಯಾಂಕ್ಸ್ ಹೇಳ್ತೇನೆ. ಈ ಬಾರಿ ನಾನು ಗೆಲ್ಲುತ್ತೇನೆ ಅಂದುಕೊಂಡಿದ್ದೆ. ನಾವೆಲ್ಲರೂ ಸಂಘಟಿತವಾಗಿ ಚುನಾವಣೆಯಾಗಿ ಚೆನ್ನಾಗಿ ಕೆಲಸ ಮಾಡಿದ್ದೆವು. ಆದರೆ ವಿರೋಧಿಗಳ ಕುತಂತ್ರದಿಂದ ಸೋಲುವಂತಾಯಿತು ಎಂದರು.

ಶಿವರಾಜ್ ಕುಮಾರ್ ಬಗ್ಗೆ ಮಾತಾಡಲು ಒಬ್ಬ ಸ್ಯಾಡಿಸ್ಟ್ ಇದ್ದಾನೆ, ಹೆಸರೆತ್ತದೇ ಕುಮಾರ ಬಂಗಾರಪ್ಪ ವಿರುದ್ಧ ಮಧು ಕಿಡಿ

ಚುನಾವಣಾ ಸೋಲಿನಿಂದ ಧೃತಿಗೆಡುವುದಿಲ್ಲ. ಟಾಟಾ ಬೈಬೈ ಅಂತಾ ಹೇಳಿ ಹೋಗಲ್ಲ. ನಾನು ಇಲ್ಲಿಯೇ ಇರುತ್ತೇನೆ. ನಿಮ್ಮ ಜೊತೆಗೆ ಇರುತ್ತೇನೆ ಎಂದರು.

ಚುನಾವಣೆ ವೇಳೆ ವಿರೋಧಿಗಳು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇಲ್ಲಿನವರಲ್ಲ, ಗೆದ್ದ ಬಳಿಕ ಅಥವಾ ಸೋತು ಹೋದರೆ ಮರುದಿನ ಟಾಟಾ ಬೈಬೈ ಹೇಳಿ ಬೆಂಗಳೂರಿಗೆ ಹೋಗುತ್ತಾರೆ ಆಗ ಕ್ಷೇತ್ರದ ಮತದಾರರ ಸಮಸ್ಯೆ ಕೇಳುವವರು ಯಾರೂ ಇರೊಲ್ಲ' ಎಂದು ವ್ಯಂಗ್ಯ ಮಾಡಿದ್ದರು. ಇದೀಗ ನಾನು ಇಲ್ಲಿಯೇ ಇದೇ ಕ್ಷೇತ್ರದ ಮತದಾರರೊಂದಿಗೆ ಇರುತ್ತೇನೆ ಎನ್ನುವ ಮೂಲಕ ಗೀತಾ ಶಿವರಾಜ್ ಕುಮಾರ್ ತಿರುಗೇಟು ನೀಡಿದ್ದಾರೆ. 

Latest Videos
Follow Us:
Download App:
  • android
  • ios