ಶಿವರಾಜ್ ಕುಮಾರ್ ಬಗ್ಗೆ ಮಾತಾಡಲು ಒಬ್ಬ ಸ್ಯಾಡಿಸ್ಟ್ ಇದ್ದಾನೆ, ಹೆಸರೆತ್ತದೇ ಕುಮಾರ ಬಂಗಾರಪ್ಪ ವಿರುದ್ಧ ಮಧು ಕಿಡಿ
ಕ್ಷೇತ್ರದಲ್ಲಿ ಗೀತಾಕ್ಕಗೆ ಮತದಾರರು ದಾಖಲೆ ಪ್ರಮಾಣದಲ್ಲಿ ಮತ ನೀಡಿದ್ದಾರೆ. ಮತ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಶಿವಮೊಗ್ಗ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ನುಡಿದರು.
ಶಿವಮೊಗ್ಗ (ಜೂ.10): ಕ್ಷೇತ್ರದಲ್ಲಿ ಗೀತಾಕ್ಕಗೆ ಮತದಾರರು ದಾಖಲೆ ಪ್ರಮಾಣದಲ್ಲಿ ಮತ ನೀಡಿದ್ದಾರೆ. ಮತ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಶಿವಮೊಗ್ಗ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ನುಡಿದರು.
ಇಂದು ಶಿವಮೊಗ್ಗದಲ್ಲಿ ನಡೆದ ಕೃತಜ್ಞತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ನಾನು ಜೆಡಿಎಸ್ ನಿಂದ ಎರಡು ಬಾರಿ ಸ್ಪರ್ಧೆ ಮಾಡಿದ್ದೆ. ಎರಡು ಬಾರಿಯೂ ಸೋಲಬೇಕಾಯಿತು. ಕಾಂಗ್ರೆಸ್ ಸೇರಿದ ಬಳಿಕ ಗೆದ್ದೆ. ಅದೇ ರೀತಿ ಈ ಬಾರಿ ಗೀತಕ್ಕ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಇತ್ತು. ಆದರೆ ಸೋತಿದ್ದಾರೆ. ಸೋತಾಗ ಮನಸಿಗೆ ನೋವಾಗುವುದು ಸಹಜ. ಗೀತಕ್ಕಗೆ ನಾನು ಮೀಡಿಯೇಟರ್ ಅಲ್ಲ. ಅವರು ಗೆದ್ದರೂ, ಸೋತರೂ ಯಾವಾಗಲೂ ನಿಮ್ಮ ಜೊತೆ ಇರುತ್ತಾರೆ ಎಂದರು.
ಗೀತಕ್ಕ ಗೆಲುವು ಗ್ಯಾರಂಟಿ: ಸಚಿವ ಮಧು ಬಂಗಾರಪ್ಪ ವಿಶ್ವಾಸ
ಚುನಾವಣೆ ಸಂದರ್ಭ ವಿಪಕ್ಷದವರು ಬಹಳ ಹಗುರವಾಗಿ ಮಾತನಾಡಿದ್ದರು. ಅವರೆಲ್ಲರಿಗೂ ಗೀತಕ್ಕ ಸಮರ್ಥವಾಗಿ ಉತ್ತರ ಕೊಟ್ಟಿದ್ದಾರೆ. ನನ್ನ ಜೀವನದಲ್ಲಿ ಇಷ್ಟೊಂದು ಚೆನ್ನಾಗಿ ಚುನಾವಣೆ ಮಾಡ್ತೇನೆ ಅಂದುಕೊಂಡಿರಲಿಲ್ಲ. ಆದರೆ ಗೀತಾ ಶಿವರಾಜ್ ಕುಮಾರ್ ಸೋತಿದ್ದಾರೆ. ಆ ನೋವನ್ನು ನುಂಗಿಕೊಳ್ಳುತ್ತೇನೆ. ಬಿಜೆಪಿಯವರು ಪ್ರಪಗಂಡ ಮಾಡುವುದರಲ್ಲಿ, ಕೆಟ್ಟ ಕೆಲಸ ಮಾಡುವುದರಲ್ಲಿ ನಿಸ್ಸೀಮರು. ಹೀಗಾಗಿ ಅಯೋಧ್ಯೆಯಲ್ಲಿ ಬಿಜೆಪಿಯವರು ಸೋತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗೀತಕ್ಕನ ಸೋಲಿನ ಹೊಣೆಯನ್ನು ನಾನೇ ತಗೊಳ್ಳುತ್ತೇನೆ. ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು ಇದೇ ವೇಳೆ ಎಕ್ಸೀಟ್ ಪೋಲ್ ನಿಖರವಾಗಿ ಕೊಡಲು ವಿಫಲವಾಗಿವೆ ಎಂದು ಮಾಧ್ಯಮವರ ವಿರುದ್ಧ ಹರಿಹಾಯ್ದರು.
ಜನರಿಗೆ ಗ್ಯಾರಂಟಿ ಯೋಜನೆ ಪ್ರಯೋಜನಗಳ ಬಗ್ಗೆ ತಿಳಿಸಿದ್ದೆವು. ಆದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಹೋಯ್ತು ಎಂದು ಜನರಿಗೆ ತಿಳಿಸುವಲ್ಲಿ ವಿಫಲವಾದೆವು. ಇಂದು ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರಬಹುದುದ. ಆದರೆ ಆಂತರಿಕವಾಗಿ ಸೋತಿದ್ದಾರೆ ಎಂದರು
ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಏಳು ವರ್ಷ ಹಿಂದಿನ ದರ ನಿಗದಿಪಡಿಸಿದ ಸರ್ಕಾರ!
ಶಿವರಾಜ್ ಕುಮಾರ್ ಬಗ್ಗೆ ಮಾತಾಡಲು ಒಬ್ಬ ಸ್ಯಾಡಿಸ್ಟ್ ಇದ್ದಾನೆ. ಅವನನ್ನು ಸರಿಮಾಡಲು ನಮ್ಮ ಅಪ್ಪ ಅಮ್ಮನಿಂದಲೂ ಸಾಧ್ಯವಾಗಲಿಲ್ಲ ಎಂದು ಕುಮಾರ ಬಂಗಾರಪ್ಪ ಹೆಸರು ಹೇಳದೇ ಸ್ಯಾಡಿಸ್ಟ್ ಜರಿದರು. ಗೀತಕ್ಕ, ಶಿವರಾಜ್ ಕುಮಾರ್ ಮುಂದಿನ ದಿನಗಳಲ್ಲಿ ಬದಲಾವಣೆ ಮಾಡ್ತಾರೆ. ಸೋತಿದ್ದೇವೆ ಅಂತಾ ಧೃತಿಗೆಡುವುದದು ಬೇಡ. ಗೀತಾಕ್ಕ ಹಾಗೂ ಶಿವಣ್ಣ ಇಬ್ಬರೂ ಧೈರ್ಯವಾಗಿದ್ದಾರೆ. ಅದೇ ರೀತಿ ಕಾರ್ಯಕರ್ತರು ಸಹ ಧೈರ್ಯವಾಗಿರಬೇಕು. ಗೀತಾ ಶಿವರಾಜ್ ಕುಮಾರ್ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ನೀವೇ ಸರಿದಾರಿಗೆ ತೆಗೆದುಕೊಂಡಬೇಕು, ಮುಂದಿನ ದಿನಗಳಲ್ಲಿ ಗೆಲುವು ತಂದುಕೊಡಬೇಕು ಎಂದು ಮತದಾರರಿಗೆ ಮನವಿ ಮಾಡಿದರು.