ಡಿಸಿಎಂ ಡಿ.ಕೆ. ಶಿವಕುಮಾರ್ ಬಂಗಾರಪ್ಪನವರ ಶಿಷ್ಯ, ಬೇಳೂರು ಗೋಪಾಲಕೃಷ್ಣ ಮಾನಸ ಪುತ್ರ: ಮಧು ಬಂಗಾರಪ್ಪ
ಮಾಜಿ ಮುಖ್ಯಮಂತ್ರಿ ನಮ್ಮ ತಂದೆ ಬಂಗಾರಪ್ಪನವರ ಶಿಷ್ಯ ಡಿ.ಕೆ. ಶಿವಕುಮಾರ್ ಹಾಗೂ ಅವರ ಮಾನಸ ಪುತ್ರ ಬೇಳೂರು ಗೋಪಾಲಕೃಷ್ಣ ಆಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ (ಫೆ.24): ರಾಜ್ಯದಲ್ಲಿ ಕಳೆದ 32 ವರ್ಷಗಳ ಹಿಂದೆ ನಮ್ಮ ತಂದೆ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ನೀಡಿದ ಉಚಿತ ವಿದ್ಯುತ್ ಯೋಜನೆ ಇದುವರೆಗೂ ನಿಂತಿಲ್ಲ. ಅದೇ ರೀತಿ ನಾವು ಈಗ ನೀಡಿದ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಬಂಗಾರಪ್ಪನವರ ಶಿಷ್ಯ ಡಿ.ಕೆ. ಶಿವಕುಮಾರ್ ಹಾಗೂ ಅವರ ಮಾನಸ ಪುತ್ರ ಬೇಳೂರು ಗೋಪಾಲಕೃಷ್ಣ ಆಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಶಿಷ್ಯ ಡಿ.ಕೆ.ಶಿವಕುಮಾರ್ ಹಾಗೂ ಬಂಗಾರಪ್ಪನವರ ಮಾನಸ ಪುತ್ರ ಬೇಳೂರು ಗೋಪಾಲಕೃಷ್ಣ ಆಗಿದ್ದಾರೆ. ನಾವು 2 ಸಾವಿರ ರೂ.ಗಳನ್ನು ಪುಕ್ಸಟ್ಟೆ ಕೊಡುತ್ತಿರಲಿಲ್ಲ. ನಿಮ್ಮ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೊಟ್ಟಿದ್ದೇವೆ. ವಿರೋಧ ಪಕ್ಷಗಳು ಈ ಗ್ಯಾರಂಟಿ ಯೋಜನೆಗಳಿಗೆ ವಾರಂಟಿ ಇಲ್ಲ ಎಂದು ಹೇಳಿದ್ದಾರೆ. ಆದರೆ, ಇದು ಮುಂದುವರೆಯುವ ಯೋಜನೆ ಆಗಿದೆ.
ಅಧಿಕಾರಕ್ಕಾಗಿ ಬಿಜೆಪಿಗೆ ಬಂದವರಿಂದ ಅಪಪ್ರಚಾರ; 'ಗೋಬ್ಯಾಕ್ ಶೋಭಾ' ಅಭಿಯಾನಕ್ಕೆ ಕೇಂದ್ರ ಸಚಿವೆ ಕರಂದ್ಲಾಜೆ ತಿರುಗೇಟು
32 ವರ್ಷಗಳ ಹಿಂದೆ ತಂದೆ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ನೀಡಿದ ಉಚಿತ ವಿದ್ಯುತ್ ಯೋಜನೆ ಇದುವರೆಗೂ ನಿಂತಿಲ್ಲ. ಕಳೆದ ಬಾರಿ 32 ಸಾವಿರ ಕೋಟಿ ರೂ. ಕೊಡಲಾಗಿತ್ತು. ಈ ಬಾರಿ ಬಜೆಟ್‌ನಲ್ಲಿ 44 ಸಾವಿರ ಕೋಟಿ ರೂ. ಅನುದಾನ ಸಿಕ್ಕಿದೆ. ಕಮಿಷನ್ ಯುಗ ಮುಗಿದು ಹೋಯಿತು. ಯಾವುದೇ ಫಲಾನುಭವಿಗಳು ಕಮಿಷನ್ ಕೊಡಬೇಕಿಲ್ಲ. ನಮ್ಮ ಈ ಕಾಂಗ್ರೆಸ್ ಸರ್ಕಾರವನ್ನು ಹೆತ್ತವರು ನೀವು. ಮುಂದಿನ ದಿನಗಳಲ್ಲಿ ಈ ಸರ್ಕಾರವನ್ನು ನಿವೇ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇಷ್ಟು ದೊಡ್ಡ ಯೋಜನೆಯನ್ನು ದೇಶದಲ್ಲಿ ಯಾವುದೇ ರಾಜ್ಯ ಜಾರಿಗೊಳಿಸಿಲ್ಲ. ರಾಜ್ಯದಲ್ಲಿ ಇಡೀ ಕುಟುಂಬ ಬೆಳಗುತ್ತಿದೆ ಅಂದ್ರೆ ಅದಕ್ಕೆ ನಮ್ಮ ಯೋಜನೆ ಕಾರಣವಾಗಿದೆ. ಮುಖ್ಯಮಂತ್ರಿಗಳು ಎಲ್ಲಾ ಸಮುದಾಯಕ್ಕೆ ಹೊಂದುವ ಬಜೆಟ್ ನೀಡಿದ್ದಾರೆ. ರಾಜ್ಯ ಸರಕಾರ ಜನರ ಪರವಾಗಿ ಕೆಲಸ ಮಾಡ್ತಿದೆ ಎಂದರು.
ಮದ್ಯದ ದರ ಹೆಚ್ಚಳ ಬೆನ್ನಲ್ಲಿಯೇ ಅಕ್ರಮ ಕಳ್ಳಭಟ್ಟಿ ಸಾರಾಯಿ ಮೊರೆಹೋದ ಬೆಳಗಾವಿಯ ಗುಡ್ಡಗಾಡು ಜನ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಡೀ ರಾಜ್ಯದಲ್ಲಿ ಓಡಾಡಿ, ಸಂಘಟನೆ ಮಾಡಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆರಗ ಜ್ಞಾನೇಂದ್ರ ಅವರು ಈ ಗ್ಯಾರಂಟಿ ಯೋಜನೆ 420 ಯೋಜನೆ ಎಂದಿದ್ದಾರೆ. ಜ್ಞಾನೇಂದ್ರ ಅವರೇ ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು. ಅಲ್ಪಸಂಖ್ಯಾತರು ತೆರಿಗೆ ಕಟ್ಟುತ್ತಾರೆ. ಹೀಗಾಗಿ ಅವರಿಗೂ ಅನುದಾನ ಕೊಡಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಬೆಂಗಳೂರು - ಶಿವಮೊಗ್ಗ ರಸ್ತೆ 15 ವರ್ಷ ಆದರೂ ಹೆದ್ದಾರಿ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಎಷ್ಟು ವರ್ಷದಲ್ಲಿ ಮುಗಿಯುತ್ತದೆ ಅಂತಾ ಕೇಂದ್ರ ಸಚಿವ ಗಡ್ಕರಿ ಅವರು ತಿಳಿಸಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದರು.