6 ದಿನಗಳಾದರೂ ಪತ್ತೆಯಾಗದ ಶರತ್‌; ಡ್ರೋನ್‌ ಮೂಲಕ ಶೋಧ

ಭಾನುವಾರ ಸಂಜೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿಯ ಶರತ್‌ ಕುಮಾರ್‌ ಪತ್ತೆಗೆ ಶುಕ್ರವಾರವೂ ಕಾರ್ಯಾಚರಣೆ ನಡೆಸಲಾಯಿತು.

Sharat not found for 6 days  Search by drone at dakshina kannada rav

ಕುಂದಾಪುರ (ಜು.29) :  ಭಾನುವಾರ ಸಂಜೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿಯ ಶರತ್‌ ಕುಮಾರ್‌ ಪತ್ತೆಗೆ ಶುಕ್ರವಾರವೂ ಕಾರ್ಯಾಚರಣೆ ನಡೆಸಲಾಯಿತು.

ಡ್ರೋನ್‌ ಮೂಲಕ ಹುಡುಕಾಟ: ಶುಕ್ರವಾರವೂ ಶರತ್‌ ಪತ್ತೆಗಾಗಿ ಕೊಲ್ಲೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು, ಶರತ್‌ ಸ್ನೇಹಿತರು ಸೇರಿದಂತೆ ಅನೇಕರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಡ್ರೋನ್‌ ಕ್ಯಾಮೆರಾ ಸಹಾಯದ ಮೂಲಕ ಹುಡುಕಾಟ ನಡೆಸಲಾಯಿತು. ಆದರೂ ಶರತ್‌ ಪತ್ತೆಯಾಗಿಲ್ಲ.

 

ಮಂಗಳೂರು: ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ನೈಸರ್ಗಿಕ ತಂತ್ರಜ್ಞಾನಕ್ಕೆ ಮೊರೆ

ಕೊಲ್ಲೂರು ದೇವಳಕ್ಕೆ ಬಂದಿದ್ದ ಶರತ್‌ ಸ್ನೇಹಿತನೊಂದಿಗೆ ಅರಿಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಜಲಪಾತದಲ್ಲಿ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಆಕಸ್ಮಿಕ ಕಾಲು ಜಾರಿ ನೀರುಪಾಲಾಗಿದ್ದರು. ಶರತ್‌ ಸ್ನೇಹಿತ ಜಲಪಾತದ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಶರತ್‌ ಬೀಳುವ ದೃಶ್ಯಾವಳಿಯೂ ಮೊಬೈಲ್‌ ನಲ್ಲಿ ಸೆರೆಯಾಗಿತ್ತು. ಶರತ್‌ ನೀರುಪಾಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುವೈರಲ್‌ ಆಗಿತ್ತು.

ಭಾನುವಾರ ಸಂಜೆಯಿಂದ ನಿರಂತರವಾಗಿ ಶರತ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಕೊಲ್ಲೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿ, ಎಸ್‌ಡಿಆರ್‌ಎಫ್‌, ಸ್ಥಳೀಯ ಯುವಕರು, ಈಜುಪಟು ಈಶ್ವರ್‌ ಮಲ್ಪೆ ಶರತ್‌ ಪತ್ತೆಗಾಗಿ ಸಾಕಷ್ಟುಹುಡುಕಾಟ ನಡೆಸಿದ್ದರು. ಆದರೂ ಶರತ್‌ ಪತ್ತೆಯಾಗದ ಹಿನ್ನೆಲೆ ಚಿತ್ರದುರ್ಗಾದ ಜ್ಯೋತಿ ರಾಜ್‌ ಅವರನ್ನು ಕರೆಸಲಾಗಿತ್ತು. ಮಳೆ ಆರ್ಭಟ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ತೊಡಕಾಗಿತ್ತು.

 

ಮಂಗಳೂರು-ಪುತ್ತೂರು ವಿದ್ಯುತ್‌ ಚಾಲಿತ ರೈಲು ಎಂಜಿನ್‌ ಪ್ರಾಯೋಗಿಕ ಸಂಚಾರ

Latest Videos
Follow Us:
Download App:
  • android
  • ios