ಮಂಗಳೂರು-ಪುತ್ತೂರು ವಿದ್ಯುತ್ ಚಾಲಿತ ರೈಲು ಎಂಜಿನ್ ಪ್ರಾಯೋಗಿಕ ಸಂಚಾರ
ಮಂಗಳೂರು ಹೊರವಲಯದ ಪಡೀಲ…- ಕಬಕ ಪುತ್ತೂರು ನಡುವಿನ 46 ಕಿ.ಮೀ. ತನಕದ ವಿದ್ಯುದೀಕರಣಗೊಂಡ ರೈಲು ಮಾರ್ಗದಲ್ಲಿ ಶುಕ್ರವಾರ ವಿದ್ಯುತ್ ಚಾಲಿತ ರೈಲು ಎಂಜಿನ್ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿದೆ.
ಮಂಗಳೂರು (ಜು.29) : ಮಂಗಳೂರು ಹೊರವಲಯದ ಪಡೀಲ…- ಕಬಕ ಪುತ್ತೂರು ನಡುವಿನ 46 ಕಿ.ಮೀ. ತನಕದ ವಿದ್ಯುದೀಕರಣಗೊಂಡ ರೈಲು ಮಾರ್ಗದಲ್ಲಿ ಶುಕ್ರವಾರ ವಿದ್ಯುತ್ ಚಾಲಿತ ರೈಲು ಎಂಜಿನ್ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿದೆ.
ಮಧ್ಯಾಹ್ನ ಸುಮಾರು 2.30ಕ್ಕೆ ಪಡೀಲ್‌ನಿಂದ ಹೊರಟ ರೈಲು ಸಂಜೆ 4 ಗಂಟೆಗೆ ಕಬಕ- ಪುತ್ತೂರು ತಲುಪಿತು. ನಂತರ ಹಿಮ್ಮುಖ ದಿಕ್ಕಿನಲ್ಲಿ ಚಲಿಸುವಾಗ ವೇಗದ ಪ್ರಯೋಗ ನಡೆಸಲಾಯಿತು ಎಂದು ಮೈಸೂರು ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್ (ಎಲೆಕ್ಟ್ರಿಕಲ…) ಸೌಂದರ್ ರಾಜನ್ ತಿಳಿಸಿದ್ದಾರೆ.
ಮಂಗಳೂರು: ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ನೈಸರ್ಗಿಕ ತಂತ್ರಜ್ಞಾನಕ್ಕೆ ಮೊರೆ
ನೈರುತ್ಯ ರೈಲ್ವೆ ಪ್ರಿನ್ಸಿಪಲ್ ಚೀಫ್ ಇಲೆಕ್ಟ್ರಿಕಲ್ ಇಂಜಿನಿಯರ್ ಜೈಪಾಲ್ ಸಿಂಗ್ ಅವರು ಈ ಪ್ರಾಯೋಗಿಕ ಓಡಾಟ ಮತ್ತು ಪರಿಶೀಲನೆಯ ನೇತೃತ್ವ ವಹಿಸಿದ್ದರು.
ಪ್ರಾಯೋಗಿಕ ಓಡಾಟ ನಡೆಸಿದ ವಿದ್ಯುದ್ಧೀಕರಗೊಂಡ ಮಾರ್ಗದಲ್ಲಿ ರೈಲುಗಳನ್ನು ಓಡಿಸಲು ಟ್ರ್ಯಾಕ್ ಫಿಟ್ ಪ್ರಮಾಣಪತ್ರ ಶೀಘ್ರದಲ್ಲೇ ದೊರೆಯಬಹುದು ಎಂದು ಸೌಂರ್ದ ರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು-ಹಾಸನ-ಮಂಗಳೂರು ಮಾರ್ಗ
Weather forecast: ದಕ್ಷಿಣಕನ್ನಡದಲ್ಲಿ ಮಳೆ ಇಳಿಮುಖ, ಉಡುಪಿಯಲ್ಲಿ ಮುಂದುವರಿಕೆ
ಜುಲೈ 2021 ರಲ್ಲಿ ಅರಸೀಕೆರೆ- ಹಾಸನ (47 ಕಿ.ಮೀ.) ಸಹಿತ ಮೈಸೂರು- ಹಾಸನ- ಮಂಗಳೂರು ಮಾರ್ಗವನ್ನು (300 ಕಿ.ಮೀ.) ವಿದ್ಯುದ್ದೀಕರಿಸುವ ಗುತ್ತಿಗೆಯನ್ನು ಒದಗಿಸಲಾಗಿತ್ತು. ಕೇಂದ್ರ ಬಜೆಟ್ 2018 ರಲ್ಲಿ ಈ ಯೋಜನೆಗೆ 315 ಕೋಟಿ ರು. ಮೀಸಲಿಡಲಾಗಿದೆ. ಯೋಜನೆಯನ್ನು ಪೂರ್ಣಗೊಳಿಸಲು ಅಂತಿಮ ದಿನಾಂಕವನ್ನು ಜೂನ್ 2024ಕ್ಕೆ ನಿಗದಿಪಡಿಸಲಾಗಿದೆ.