ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಪ್ರತಿದಿನದ ಟ್ರಿಪ್‌ಗಳ (ಸುತ್ತುವಳಿ) ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗಿದೆ. ನಾಲ್ಕೂ ನಿಗಮಗಳಲ್ಲಿ ಒಟ್ಟಾರೆ ಕಳೆದ ಆರೇಳು ತಿಂಗಳಿನಿಂದೀಚೆಗೆ ನಿತ್ಯ 6,349 ಟ್ರಿಪ್‌ಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗಿದೆ.

ಬೆಂಗಳೂರು (ಡಿ.14) :  ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಪ್ರತಿದಿನದ ಟ್ರಿಪ್‌ಗಳ (ಸುತ್ತುವಳಿ) ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗಿದೆ. ನಾಲ್ಕೂ ನಿಗಮಗಳಲ್ಲಿ ಒಟ್ಟಾರೆ ಕಳೆದ ಆರೇಳು ತಿಂಗಳಿನಿಂದೀಚೆಗೆ ನಿತ್ಯ 6,349 ಟ್ರಿಪ್‌ಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗಿದೆ.

ಶಕ್ತಿ ಯೋಜನೆ ಜಾರಿಗೂ ಮುನ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಂದ ಪ್ರತಿನಿತ್ಯ 1.40 ಲಕ್ಷಕ್ಕೂ ಹೆಚ್ಚಿನ ಟ್ರಿಪ್‌ಗಳನ್ನು ಮಾಡಲಾಗುತ್ತಿತ್ತು. ಅದರಲ್ಲಿ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯಿಂದಲೇ 1 ಲಕ್ಷಕ್ಕೂ ಹೆಚ್ಚಿನ ಟ್ರಿಪ್‌ಗಳಿದ್ದವು. ಆದರೆ, ಶಕ್ತಿ ಯೋಜನೆ ಜಾರಿ ನಂತರ ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆಯಲ್ಲಿ ಬರೋಬ್ಬರಿ 20ರಿಂದ 25 ಲಕ್ಷ ಹೆಚ್ಚಳವಾಗುವಂತಾಗಿದೆ. ಈ ಹಿಂದೆ ನಿತ್ಯ 80ರಿಂದ 85 ಲಕ್ಷವಿದ್ದ ಪ್ರಯಾಣಿಕರ ಸಂಖ್ಯೆ ಸದ್ಯ 1.10 ಕೋಟಿಗೆ ತಲುಪಿದೆ. ಹೀಗಾಗಿ ಎಲ್ಲ ನಾಲ್ಕೂ ನಿಗಮಗಳ ಟ್ರಿಪ್‌ಗಳ ಸಂಖ್ಯೆಯಲ್ಲಿ ಏರಿಕೆ ಮಾಡಿಕೊಂಡಿವೆ. ಅದರಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಮಾರ್ಗಗಳಿಗೆ ಬಸ್‌ಗಳು ಹೆಚ್ಚಿನ ಬಾರಿ ಸಂಚರಿಸುವಂತೆ ಮಾಡಲಾಗಿದೆ.

‘ಶಕ್ತಿ’ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡಿಕೆಗೆ ಗ್ರಹಣ

6,349 ಟ್ರಿಪ್‌ಗಳು ಹೆಚ್ಚಳ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳ ಲೆಕ್ಕದಂತೆ ಕಳೆದ ಐದಾರು ತಿಂಗಳಿನಿಂದೀಚೆಗೆ ಒಟ್ಟು 6,349 ಟ್ರಿಪ್‌ಗಳನ್ನು ಹೆಚ್ಚಳ ಮಾಡಲಾಗಿದೆ.

ಅದರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಉಳಿದ ಮೂರು ನಿಗಮಗಳಿಗಿಂತ ಹೆಚ್ಚಿನ ಟ್ರಿಪ್‌ಗಳನ್ನು ಸೃಜಿಸಿದೆ. ಅದರಂತೆ ಕೆಕೆಆರ್‌ಟಿಸಿ 2,530 ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸಿದೆ. ಅದೇ ರೀತಿ ಕೆಎಸ್ಸಾರ್ಟಿಸಿ 1,699, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ 1,114 ಹಾಗೂ ಬಿಎಂಟಿಸಿ 1,006 ಟ್ರಿಪ್‌ಗಳನ್ನು ಹೆಚ್ಚಿಸಿದೆ.

ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ