ಉಚಿತ ಬಸ್ ಸಂಚಾರಕ್ಕೆ ಗಡಿ ಜಿಲ್ಲೆ ಬೀದರ್‌ನಲ್ಲಿ ನಿರಾಸಕ್ತಿ: ಬಸ್‌ಗಳು ಖಾಲಿ ಖಾಲಿ!
ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ಕಳೆದ 15 ದಿನಗಳಿಂದ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಿದ್ದಲ್ಲದೆ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸ ತಾಣಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಭಾರಿ ಏರಿಕೆ ಕಂಡಿದ್ದೀಗ ಧಿಡೀರನೇ ಕುಸಿತಕಂಡಿದೆ. ಜಿಲ್ಲೆಯಲ್ಲಿನ ಬಸ್ ನಿಲ್ದಾಣಗಳು ಎಂದಿನಂತೆ ಸಾಮಾನ್ಯ ಸ್ವರೂಪಕ್ಕೆ ಮರಳಿವೆ.
ಬೀದರ್ (ಜೂ.26): ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ಕಳೆದ 15 ದಿನಗಳಿಂದ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಿದ್ದಲ್ಲದೆ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸ ತಾಣಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಭಾರಿ ಏರಿಕೆ ಕಂಡಿದ್ದೀಗ ಧಿಡೀರನೇ ಕುಸಿತಕಂಡಿದೆ. ಜಿಲ್ಲೆಯಲ್ಲಿನ ಬಸ್ ನಿಲ್ದಾಣಗಳು ಎಂದಿನಂತೆ ಸಾಮಾನ್ಯ ಸ್ವರೂಪಕ್ಕೆ ಮರಳಿವೆ.
ಬೀದರ್ ಐತಿಹಾಸಿ ಪ್ರವಾಸಿ ತಾಣಗಳನ್ನು ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೆಚ್ಚಾಗಿ ಹೊಂದಿದ್ದು, ಕಳೆದ ಭಾನುವಾರ ಒಂದು ಲಕ್ಷ ಪ್ರಯಾಣಿಕರನ್ನು ಕರೆದೊಯ್ದಿದ್ದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಈ ಭಾನುವಾರ ಅದರ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡುಬಂದಿದೆ.
ಕಲಬುರಗಿ: ಪ್ರಯಾಣಿಕರನ್ನು ಬಿಟ್ಟು ಹೋದ ಸಿಕಂದರಾಬಾದ್ ಎಕ್ಸಪ್ರೆಸ್...
ಬೀದರ್ ಐತಿಹಾಸಿಕ ಕೋಟೆ, ಚೌಖಂಡಿ, ಅಷ್ಟೂರ್, ಗುರುದ್ವಾರ, ಪಾಪನಾಶ ದೇವಸ್ಥಾನ, ಮೈಲಾರ ್ಮಮಲ್ಲಣ್ಣ, ನರಸಿಂಹ ಝರಣಾ ಹೀಗೆಯೇ ಅನೇಕ ದೇವಸ್ಥಾನಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಾರೀ ಸಂಖ್ಯೆಯ ಜನಸ್ತೋಮ ಈ ಭಾನುವಾರ ಮಾತ್ರ ಈ ಹಿಂದಿನಂತೆ ಸಾಮಾನ್ಯವಾಗಿತ್ತು.
ಬೀದರ್ ಕೋಟೆಯಲ್ಲಿ ನಿತ್ಯ ಎರಡ್ಮೂರು ಸಾವಿರ ಜನ ಆಗಮಿಸಿದರೆ ಭಾನುವಾರ ಮತ್ತು ರಜಾ ದಿನಗಳಲ್ಲಿ 5ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ ಇತ್ತೀಚೆಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆದಾಗಿನಿಂದ ಇದು ಹೆಚ್ಚಾಗಿತ್ತು. ಆದರೆ ಈ ಭಾನುವಾರ ಮೂರರಿಂದ ನಾಲ್ಕು ಸಾವಿರ ಪ್ರವಾಸಿಗರ ಆಗಮನವಾಗುದ್ದು, ಶಕ್ತಿ ಯೋಜನೆಯ ಸತತ ಲಾಭ ಪಡೆಯುವಲ್ಲಿ ಮಹಿಳೆಯರು ಹಿಂದೇಟು ಹಾಕಿದ್ದಾರೆಯೇ ಎಂಬ ಅನುಮಾನ ಮೂಡಿದೆ.
ಅದರಂತೆ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಆಗಮಿಸುವವರ ಭಕ್ತಾದಿಗಳ ಸಂಖ್ಯೆಯಲ್ಲಿ ಕಡಿಮೆಯಾಗದಿದ್ದರೂ ಬಸ್ ಸಂಚಾರ ಮಾಡುವವರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದ್ದು, ಪ್ರಯಾಣಿಕರ ದಂಡನ್ನು ಕಂಡು ಬಸ್‌ಗಳು ನಿಲ್ಲಿಸದೇ ಸಾಗಿ ಹೋಗುತ್ತಿದ್ದದ್ದೀಗ ಪ್ರಯಾಣಿಕರನ್ನು ಕರೆದೊಯ್ದರೂ ಬಸ್‌ಗಳು ತುಂಬಿ ತುಳುಕುತ್ತಿರಲಿಲ್ಲ.
ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಬೀದರ್ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹೆಚ್ಚುವರಿ ದಂಡು ಕಂಡುಬರಲಿಲ್ಲ. ಇದು ಕಳೆದ ಎರಡು ವಾರಗಳಲ್ಲಿಯೇ ಕಡಿಮೆ ಪ್ರಯಾಣಿಕರನ್ನು ಕಂಡಿರುವ ದಿನ ಎಂದು ಸಂಸ್ಥೆಯ ಹೆಸರು ಹೇಳಲಿಚ್ಚಸದ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೀದರ್: ಶಾಲೆಯಲ್ಲಿ ಬಿಸಿಯೂಟ ಸೇವಿಸಿ 59 ವಿದ್ಯಾರ್ಥಿಗಳು ಅಸ್ವಸ್ಥ
ಒಟ್ಟಾರೆ ರಾಜ್ಯದ ಶಕ್ತಿ ಯೋಜನೆಯಡಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಪ್ರಯಾಣಿಸುವ ಪರಿ ಇದೀಗ ಕಡಿಮೆಯಾಗುತ್ತಿರುವುದಕ್ಕೆ ನಿಲ್ದಾಣಗಳಲ್ಲಿನ ಭಾರಿ ಜನಜಂಗುಳಿ, ಜಗಳ, ಕಿರಿ ಕಿರಿ ದೃಶ್ಯಗಳೇ ಕಾರಣ ಎಂಬುವದು ಪ್ರಯಾಣಿಕರ ಅಂಬೋಣ ಕೂಡ.