Asianet Suvarna News Asianet Suvarna News

Bengaluru: ಮಣಿಪುರ ಹಿಂಸಾಚಾರದ ಪ್ರತಿಭಟನೆ ಮುಗಿಸಿ ತೆರಳುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ!

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಪ್ರತಿಭಟನೆ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ಯುವತಿಗೆ ರಾಪಿಡೋ ಬೈಕ್‌ನ ಡ್ರೈವರ್‌ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

Sexual Harassement to Women Who Went to Manipur Violence protest at Town Hall Bangalore Shares details san
Author
First Published Jul 22, 2023, 6:00 PM IST

ಬೆಂಗಳೂರು (ಜು.22): ಮಣಿಪುರದಲ್ಲಿ ಇಬ್ಬರು ಯುವತಿಯರನ್ನು ಬೆತ್ತಲೆ ಪರೇಡ್ ನಡೆಸಿದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಧ ರಾಜ್ಯಗಳಲ್ಲಿ ಈ ಕುರಿತಾಗಿ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿನ ಟೌನ್‌ ಹಾಲ್‌ ಎದುರೂ ಈ ಕುರಿತಾಗಿ ಪ್ರತಿಭಟನೆ ನಡೆದಿತ್ತು. ಆದರೆ, ಈ ಪ್ರತಿಭಟನೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಈ ಕುರಿತಾಗಿ ಯುವತಿ ತನ್ನ ಅನುಭವವನ್ನು ಟ್ವಿಟರ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾಳೆ. ರಾಪಿಡೋ ಬೈಕ್‌ನ ಡ್ರೈವರ್‌ ವಿರುದ್ಧ ಸಾಕ್ಷಿ ಸಮೇತ ಆರೋಪ ಮಾಡಿರುವ ಈಕೆ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈಕೆ ಮಾಡಿರುವ ಟ್ವೀಟ್‌ಅನ್ನು ಕೆಲವರು ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿದ್ದಾರೆ. ಎಸ್‌ಜೆ ಪಾರ್ಕ್‌ ಪೊಲೀಸ್‌ ಠಾಣೆಗೆ ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಅದರೊಂದಿಗೆ ಕೆಲವು ಪ್ರಯಾಣಿಕರು ಬೇರೆ ಅಪ್ಲಿಕೇಶನ್‌ಗಳಲ್ಲಿ ಇರುವ ಆಧುನಿಕ ವ್ಯವಸ್ಥೆಗಳ ಬಗ್ಗೆಯೂ ಇದರಲ್ಲಿ ಮಾತನಾಡಿದ್ದಾರೆ.

ತಾವೊಬ್ಬ ಸಮಾಜವಾದಿ ಸ್ತ್ರೀವಾದಿ ಎಂದು ತಮ್ಮ ಟ್ವಿಟರ್‌ ಬಯೋಡೇಟಾದಲ್ಲಿ ಬರೆದುಕೊಂಡಿರುವ ಅತಿರಾ ಪುರುಷೋತ್ತಮನ್ (@Aadhi_02) ಶುಕ್ರವಾರ ಆದಂಥ ಅಹಿತಕರ ಅನುಭವವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಂದು ನಾನು ಮಣಿಪುರ ಹಿಂಸಾಚಾರ ಕುರಿತಾದ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿನ ಟೌನ್‌ ಹಾಲ್‌ಗೆ ಹೋಗಿದ್ದೆ.  ಪ್ರತಿಭಟನೆ ಮುಗಿಸ ವಾಪಾಸ್‌ ಬರುವಾಗ ನಾನು ರಾಪಿಡೋ ಬೈಕ್‌ ಆಪ್ಲಿಕೇಶನ್‌ ಬಳಸಿ ಆಟೋ ಬುಕ್‌ ಮಾಡಲು ಪ್ರಯತ್ನ ಮಾಡಿದ್ದೆ. ಆದರೆ, ಪ್ರತಿ ಬಾರಿ ಆಟೋ ಬುಕ್‌ ಮಾಡಿದಾಗಲೂ ಅದು ರದ್ದಾಗುತ್ತಿತ್ತು. ಇದರಿಂದಾಗಿ ನಾನು ಅನಿವಾರ್ಯವಾಗಿ ಬೈಕ್‌ ಬುಕ್‌ ಮಾಡಬೇಕಾಯಿತು. ಅಚ್ಚರಿ ಎನ್ನುವಂತೆ ಡ್ರೈವರ್‌ ಯಾವುದೋ ಬೇರೆ ಬೈಕ್‌ನಲ್ಲಿ ನಾನಿದ್ದ ಸ್ಥಳಕ್ಕೆ ಬಂದಿದ್ದ. ಇದನ್ನು ಪ್ರಶ್ನಿಸಿದಾಗ, ರಾಪಿಡೋ ಅಪ್ಲಿಕೇಶನ್‌ನಲ್ಲಿ ರಿಜಿಸ್ಟರ್‌ ಮಾಡಿರುವ ಬೈಕ್‌ ಸರ್ವೀಸ್‌ನಲ್ಲಿದೆ. ಹಾಗಾಗಿ ಬೇರೆ ಬೈಕ್‌ ತಂದಿರುವುದಾಗಿ ತಿಳಿಸಿದ್ದ. ಆತನ ಅಪ್ಲಿಕೇಶನ್‌ ಮೂಲಕ ನಾನು ನನ್ನ ಬೈಕ್‌ ಬುಕ್ಕಿಂಗ್‌ ಅನ್ನು ಮತ್ತೊಮ್ಮೆ ಪರಿಶೀಲನೆ ಮಾಡಿಕೊಂಡು ಬೈಕ್‌ ರೈಡ್‌ಗೆ ಮುಂದಾಗಿದ್ದೆ.

ಪ್ರಯಾಣದ ಸಮಯದಲ್ಲಿ, ನಾವು ಯಾವುದೇ ವಾಹನಗಳಿಲ್ಲದ ದೂರದ ಪ್ರದೇಶವನ್ನು ತಲುಪಿದ್ದೆವು. ಈ ಹಂತದಲ್ಲಿ ಬೈಕ್‌ ರೈಡರ್‌, ಒಂದೇ ಕೈಯಿಂದ ರೈಡ್‌ ಮಾಡಲು ಪ್ರಾರಂಭ ಮಾಡಿದ್ದ ಮತ್ತೊಂದು ಇನ್ನೊಂದು ಕೈಯಲ್ಲಿ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದ. ನನ್ನ ಸುರಕ್ಷತೆಯ ಭಯದಿಂದ ನಾನು ಇಡೀ ಪ್ರಯಾಣದ ಉದ್ದಕ್ಕೂ ಮೌನವಾಗಿದ್ದೆ. ನನ್ನ ಮನೆ ಇವನಿಗೆ ಗೊತ್ತಾಗಬಾರದು ಎನ್ನುವ ಏಕೈಕ ಕಾರಣಕ್ಕೆ, ನಿಜವಾದ ಲೊಕೇಷನ್‌ನಿಂದ 200 ಮೀಟರ್‌ ಹಿಂದೆಯೇ ನನ್ನನ್ನು ಡ್ರಾಪ್‌ ಮಾಡುವಂತೆ ಆತನಿಗೆ ಹೇಳಿದ್ದೆ. ಆದರೆ, ರೈಡ್‌ ಮುಗಿದ ನಂತರವೂ ಆತ, ಬಿಟ್ಟೂಬಿಡದೆ ನನಗೆ ವಾಟ್ಸಾಪ್‌ನಲ್ಲಿ ಕರೆ ಮತ್ತು ಸಂದೇಶ ಕಳುಹಿಸಲು ಪ್ರಾರಂಭ ಮಾಡಿದ್ದ. ಈ ಕಿರುಕುಳವನ್ನು ತಡೆಯಲು ನಾನು ಅವನ ಸಂಖ್ಯೆಯನ್ನು ಬ್ಲಾಕ್‌ ಮಾಡಿದ್ದೆ.

Watch: KSRTC ಬಸ್‌ನಲ್ಲಿ ಇಬ್ಬರು ಹುಡುಗಿಯರ ಮಧ್ಯೆಯೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ!

ರೈಡರ್‌ಗಳ ಹಿನ್ನೆಲೆ ಪರಿಶೀಲನೆಗಾಗಿ ರಾಪಿಡೋ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಿರಿ? ನಿಮ್ಮ ಬಳಕೆದಾರರ ಸುರಕ್ಷತೆಯು ಮೊದಲ ಆದ್ಯತೆಯಾಗಿರಬೇಕು. ಸುರಕ್ಷಿತ ಪ್ರಯಾಣದ ಅನುಭವಕ್ಕಾಗಿ ನಿಮ್ಮ ಸೇವೆಯೊಂದಿಗೆ ನೋಂದಾಯಿಸಿದ ಜನರನ್ನು ನೀವು ನಂಬಬಹುದು ಎನ್ನುವುದನ್ನು ಮೊದಲಿಗೆ ನೀವೇ ಖಚಿತಪಡಿಸಿಕೊಳ್ಳಬೇಕು. ಈಗಲೂ ನನಗೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಬರುತ್ತಲೇ ಇರುತ್ತದೆ ಎಂದು ಆಕೆ ಬರೆದುಕೊಂಡಿದ್ದಾರೆ.

KSRTC ಬಸ್‌ನಲ್ಲಿ ನಟಿ ಮುಂದೆ ಹಸ್ತಮೈಥುನ ಮಾಡ್ಕೊಂಡ ಯುವಕನಿಗೆ ಜೈಲಿನ ಬಳಿ ಅದ್ಧೂರಿ ಸ್ವಾಗತ!

ಅವರ ಈ ಟ್ವೀಟ್‌ಗಳಿಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ರೈಡರ್ ಮತ್ತು ಪ್ರಯಾಣಿಕರು ಪರಸ್ಪರರ ಸಂಖ್ಯೆಯನ್ನು ತಿಳಿದುಕೊಳ್ಳದಿರುವ ತಂತ್ರಜ್ಞಾನವನ್ನು ಉಬರ್ ಹೊಂದಿದೆ. ದುರದೃಷ್ಟವಶಾತ್ ಇತರ ಅಪ್ಲಿಕೇಶನ್‌ಗಳು ಈ ತಂತ್ರಜ್ಞಾನವನ್ನು ಹೊಂದಿಲ್ಲ' ಎಂದು ಒಬ್ಬರು ಇದರಲ್ಲಿ ಅಭಿಪ್ರಾಯಹಂಚಿಕೊಂಡಿದ್ದಾರೆ.

Follow Us:
Download App:
  • android
  • ios