Watch: KSRTC ಬಸ್‌ನಲ್ಲಿ ಇಬ್ಬರು ಹುಡುಗಿಯರ ಮಧ್ಯೆಯೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ!

ಹುಡುಗಿಯ ಪಕ್ಕದಲ್ಲಿ ಕುಳಿತ ಆರೋಪಿ ಆರಂಭದಲ್ಲಿ ಸಭ್ಯವಾಗಿಯೇ ಮಾತನಾಡಿದ್ದಾನೆ. ಕೆಲ ಸಮಯದ ನಂತರ, ಅನುಚಿತವಾಗಿ ಸ್ಪರ್ಶಿಸಲು ಆರಂಭಿಸಿದ ಆತ ಪ್ಯಾಂಟ್‌ನ ಜಿಪ್‌ ಬಿಚ್ಚಿ ಮರ್ಮಾಂಗವನ್ನೂ ತೋರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
 

Kerala woman videographs man who masturbates on Bus arrested Nandita Sankara explains san

ಕೊಚ್ಚಿ (ಮೇ.18): ದೆಹಲಿ ಮೆಟ್ರೋದಲ್ಲಿ ಆಗುತ್ತಿರುವ ಚಿತ್ರ ವಿಚಿತ್ರ ಘಟನೆಗಳ ನಡುವೆ, ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಬಸ್‌ನಲ್ಲಿಯೇ ಇಬ್ಬರು ಮಹಿಳೆಯರು ನಡುವೆ ಕುಳಿತು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಮಹಿಳೆಯೊಂದಿಗೆ ಆತ ಅನುಚಿತವಾಗಿ ವರ್ತಿಸಿದ್ದಲ್ಲದೆ, ಆಕೆಗೆ ತನ್ನ ಮರ್ಮಾಂಗವನ್ನೂ ತೋರಿಸಿದ ಘಟನೆ ಬುಧವಾರ ನಡೆದಿದೆ. ತ್ರಿಶೂರ್‌ನಿಂದ ಮಹಿಳೆ ಕೊಚ್ಚಿಗೆ ಪ್ರಯಾಣಿಸುವ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಯನ್ನು ಕೋಯಿಕ್ಕೋಡ್‌ ಮೂಲದ ಸವಾದ್‌ ಶಾ ಎಂದು ಗುರುತಿಸಲಾಗಿದೆ. ಕಂಡಕ್ಟರ್ ಮತ್ತು ಸಹ ಪ್ರಯಾಣಿಕರು ಈತನನ್ನು ಹಿಡಿದು ನೆಡುಂಬಶ್ಶೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ. 'ನೀವು ಇದನ್ನು ಮಾಡೋದನ್ನ ನಿಲ್ಲಿಸ್ತೀರಾ? ನೀವು ಇದನ್ನು ಮಾಡೋದನ್ನ ನಿಲ್ಲಿಸ್ತೀರಾ?' ಎಂದು ನಂದಿತಾ ಪಕ್ಕದಲ್ಲಿಯೇ ಕುಳಿತಿದ್ದ ಸವಾದ್ ಶಾಗೆ ಹೇಳುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಕುಳಿತುಕೊಂಡಿದ್ದ ವ್ಯಕ್ತಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎಂದು ನಂದಿತಾ ವಿಡಿಯೋ ಸಮೇತ ಆರೋಪ ಮಾಡಿದ್ದಾರೆ. ಇದೇ ವಿಡಿಯೋವನ್ನು ಅವರು ತಮ್ಮ ಸೋಶಿಯಲ್‌ ಮೀಡಿಯಾ ಪುಟದಲ್ಲೂ ಹಂಚಿಕೊಂಡಿದ್ದಾರೆ.

ಇದು ಗೊತ್ತಾಗುತ್ತಿದ್ದಂತೆ ಮಹಿಳೆಯ ಜೊತೆ ವಾದ ಮಾಡಿದ ಸವಾದ್‌ ಶಾ, ಬಳಿಕ ಸಿಕ್ಕ ಅವಕಾಶದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ, ಸಹ ಪ್ರಯಾಣಿಕರು ಹಾಗೂ ಕಂಡಕ್ಟರ್‌ ಸಹಾಯದಿಂದ ಆತ ಸಿಕ್ಕಿಬಿದ್ದಿದ್ದು, ಪೊಲೀಸರಿಗೆ ಒಪ್ಪಿಸಲಾಗಿದೆ. ನಟಿ ಮತ್ತು ರೂಪದರ್ಶಿಯಾಗಿರುವ ನಂದಿತಾ ಶಂಕರ ಅವರು ಘಟನೆಯನ್ನು ವಿವರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದು, ಈ ವೇಳೆ ತನಗೆ ಸಹಾಯ ಮಾಡಿದವರಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ.

ತಾನು ತ್ರಿಶೂರ್‌ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದೆ ಎಂದು ನಂದಿತಾ ವಿಡಿಯೋದಲ್ಲಿ ಹೇಳಿದ್ದು, ಆರೋಪಿಯು ಅಂಗಮಾಲಿಯಲ್ಲಿ ಬಸ್‌ ಹತ್ತಿದ್ದಲ್ಲದೆ, ಮಹಿಳೆ ಮತ್ತು ಗರ್ಭಿಣಿಯರಿಗೆ ಮೀಸಲಿಟ್ಟ ಆಸನದಲ್ಲಿ ತನ್ನ ಮತ್ತು ಇನ್ನೊಬ್ಬ ಮಹಿಳೆ ನಡುವೆ ಕುಳಿತಿದ್ದ ಎಂದಿದ್ದಾರೆ. ಈ ಹಂತದಲ್ಲಿ ಕಿಟಕಿಯ ಬಳಿ ಕುಳಿತಿದ್ದ ನನ್ನೊಂದಿಗೆ ಸಂಭಾಷನೆ ಮಾಡಲು ಆರಂಭ ಮಾಡಿದ್ದ. ಎಲ್ಲಿಗೆ ಹೋಗುತ್ತಿದ್ದಾಳೆ, ಈ ದಾರಿಯಲ್ಲಿ ಟ್ರಾಫಿಕ್‌ ಹೇಗಿದೆ ಎನ್ನುವ ಪ್ರಶ್ನೆಗಳನ್ನು ಕೇಳಿದ್ದ ಎಂದಿದ್ದಾರೆ. 'ಉತ್ತರ ನೀಡಿ ಒಂದೇ ಅಥವಾ ಎರಡು ಸೆಕೆಂಡ್‌ ಆಗಿತ್ತಷ್ಟೇ. ಆತ ತನ್ನ ಕೈಗಳಿಂದ ನನ್ನ ಸೊಂಟ ಮುಟ್ಟಲು ಆರಂಭಿಸಿದ್ದ' ಎಂದು ಆಕೆ ಹೇಳಿದ್ದಾರೆ. ಇದೇ ವೇಳೆ ಆತ ತನ್ನ ಇನ್ನೊಂದು ಕೈಗಳಿಂದ ತನ್ನ ಮರ್ಮಾಂಗವನ್ನು ಉಜ್ಜಿಕೊಳ್ಳುತ್ತಿದ್ದ. ಇದು ಯಾರಿಗೂ ಗೊತ್ತಾಗಬಾರದೆಂದು ತೊಡೆಯ ಮೇಲೆ ಬ್ಯಾಗ್‌ ಇರಿಸಿದ್ದ ಎಂದು ಹೇಳಿದ್ದಾರೆ.

ನನಗೆ ಅಘಾತವಾಗಿತ್ತು. ಈ ವೇಳೆ ಕಿಟಿಕಿಯ ಗಾಜು ತೊಗೆದು ಹೊರಗಡೆ ನೋಡುವ ಪ್ರಯತ್ನ ಮಾಡಿದ್ದೆ. 2ನೇ ಬಾರಿಗೆ ನಾನು ಮತ್ತೆ ನೋಡಿದಾಗ, ಆತ ತನ್ನ ಪ್ಯಾಂಟ್‌ನ ಜಿಪ್‌ ತೆಗೆದು, ಮರ್ಮಾಂಗವನ್ನು ಹೊರತೆಗೆದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎಂದು ನಂದಿತಾ ಹೇಳಿದ್ದಾರೆ.

 

ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯ ಹಸ್ತಮೈಥುನ, ಕಿಡಿಕಿಡಿಯಾದ ಮಹಿಳಾ ಆಯೋಗ!

ಈ ವಿಡಿಯೋದಲ್ಲಿ ನಂದಿತಾ ಘಟನೆಯನ್ನು ರೆಕಾರ್ಡ್‌ ಕೂಡ ಮಾಡಿದ್ದಾರೆ. ಆರೋಪಿಗೆ ನೀನು ಮಾಡುತ್ತಿರುವ ಕೆಲಸವನ್ನು ನಿಲ್ಲಿಸು ಎಂದು ಹೇಳಿದ್ದು ಕೂಡ ದಾಖಲಾಗಿದೆ. ಆದರೆ, ಆತ ಮಾತ್ರ ತನಗೆ ಏನೂ ಗೊತ್ತಿಲ್ಲದಂತೆ ಇಲ್ಲ. ಕೊನೆಗೆ ತನ್ನ ಸೀಟ್‌ನಿಂದ ಎದ್ದೇಳುವ ಆರೋಪಿ, ಆರಂಭದಲ್ಲಿ ತಾನೇನೂ ಮಾಡಿಲ್ಲ ಎಂದು ಹೇಳಿಕೊಳ್ಳಲು ಆರಂಭಿಸುತ್ತಾನೆ. ಬಳಿಕ ಬಸ್‌ ಕಂಡಕ್ಟರ್‌ ಕೂಡ ಇದರಲ್ಲಿ ಭಾಗಿಯಾಗುತ್ತಾರೆ. ಈ ವೇಳೆ ನಂದಿತಾ ಅವರಿಗೆ ನೀವು ದೂರು ಕೊಡಬೇಕು ಅಂದುಕೊಂಡಿದ್ದೀರಾ ಎಂದು ಕಂಡಕ್ಟರ್‌ಗೆ ಪ್ರಶ್ನೆ ಮಾಡುತ್ತಾರೆ. ಹೌದು ಎಂದ ಬೆನ್ನಲ್ಲಿಯೇ, ಡ್ರೈವರ್‌ಗೆ ಬಸ್‌ಅನ್ನು ಪೊಲೀಸ್‌ ಸ್ಟೇಷನ್‌ ಕಡೆಗೆ ತಿರುಗಿಸುವಂತೆ ಕಂಡಕ್ಟರ್‌ ಹೇಳುತ್ತಾರೆ. ನಂತರ, ಆರೋಪಿಯು ಬಸ್‌ನ ಹೊರಗೆ ಕಂಡಕ್ಟರ್‌ನೊಂದಿಗೆ ಗಲಾಟೆಯಲ್ಲಿ ಮಾಡಿದ್ದಲ್ಲದೆ, ರಸ್ತೆ ದಾಟಿ ಓಡಿ ಹೋಗಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ಕೆಲ ವ್ಯಕ್ತಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

KSRTC: ಪಕ್ಕದಲ್ಲಿ ಕುಳಿತ ಯುವತಿಗೆ ಗುಪ್ತಾಂಗ ತೋರಿಸಿದ ಪ್ರಯಾಣಿಕ!

ಬಸ್‌ನ ಕಂಡಕ್ಟರ್‌, ಡ್ರೈವರ್‌ ಹಾಗೂ ದೂರು ನೀಡಲು ಸಹಾಯ ಮಾಡಿದ ಕಾನೂನು ವಿದ್ಯಾರ್ಥಿ ಹಾಗೂ ಇತರ ಪ್ರಯಾಣಿಕರಿಗೆ ನಂದಿತಾ ಧನ್ಯವಾದ ಹೇಳಿದ್ದಾರೆ. ಇವರೆಲ್ಲರೂ ನೀಡಿದ ಪ್ರತಿಕ್ರಿಯೆಯಿಂದ ಖುಷಿಯಾಗಿದೆ. ಮುಂದೆ ಆತ ಪ್ರತಿ ಬಾರಿ ಜಿಪ್‌ ಓಪನ್‌ ಮಾಡುವಾಗಲೂ ನನ್ನ ಮುಖ ನೆನಪಿಟ್ಟುಕೊಂಡ ಭಯ ಪಡಬೇಕು ಎಂದು ಹೇಳಿದ್ದಾಳೆ.

Latest Videos
Follow Us:
Download App:
  • android
  • ios