ಮುನಿಸಿಕೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ಪಟ್ಟು ಬಿಗಿಗೊಳಿಸಿದ್ದಾರೆ. ಯಾವುದೇ ಮನ ಒಲಿಕೆಗೆ ರಾಮಲಿಂಗಾ ರೆಡ್ಡಿ ಜಗ್ಗಿಲ್ಲ. ಇದೀಗ ರಾಜೀನಾಮೆ ಪತ್ರಕ್ಕೆ ಅಧಿಕೃತ ಸಹಿ ಮಾಡಿದ್ದಾರೆ. ಇದೇ ವೇಳೆ ನಾನು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
ಬೆಂಗಳೂರು (ಜೂ.05) ರಾಜ್ಯ ರಾಜಕೀಯದ ಒಂದು ಸುತ್ತಿನ ಬಿರುಗಾಳಿ ಅಂತ್ಯಗೊಂಡು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಇತ್ತ ಸಿದ್ದರಾಮಯ್ಯ ರಾಜೀನಾಮೆ ನೀಡಿ ತೆರೆ ಹಿಂದೆ ಸರಿದಿದ್ದಾರೆ. ಎಲ್ಲವೂ ಸುಖಾಂತ್ಯಗೊಂಡಿದೆ ಅನ್ನೋವಷ್ಟರಲ್ಲಿ ಡಿಕೆ ಶಿವಕುಮಾರ್ ತೆಲೆನೋವು ಹೆಚ್ಚಾಗಿದೆ. ಜಲಸಂಪನ್ಮೂಲ ಖಾತೆಯಿಂದ ತೀವ್ರ ಅಸಮಾಧಾನಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ಇದೀಗ ರಾಜೀನಾಮೆ ಪತ್ರಕ್ಕೆ ಅಧಿಕೃತವಾಗಿ ಸಹಿ ಮಾಡಿದ್ದಾರೆ. ಇದರ ನಡುವೆ ರಾಮಲಿಂಗಾ ರೆಡ್ಡಿ ಮನ ಒಲಿಕೆ ಪ್ರಯತ್ನಗಳು ವಿಫಲಗೊಂಡಿದೆ.
ಕೆಲವೇ ಕ್ಷಣಗಳಲ್ಲಿ ರಾಮಲಿಂಗಾ ರೆಡ್ಡಿ ರಾಜೀನಾಮೆ
ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾ ರೆಡ್ಡಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಮಾತನಾಡಿದ್ದ ರಾಮಲಿಂಗಾ ರೆಡ್ಡಿ ಖಾತೆ ಬದಲಾವಣೆ ಹೈಕಮಾಂಡ್ ವಿಚಾರ. ಸದ್ಯಕ್ಕೆ ಹೈಕಮಾಂಡ್ ಯಾವುದೇ ಬದಲಾವಣೆಗೆ ಒಪ್ಪುತ್ತಿಲ್ಲ ಎಂದಿದ್ದರು. ಇದರಿಂದ ಮತ್ತಷ್ಟು ಕೆರಳಿದ ರಾಮಲಿಂಗಾ ರೆಡ್ಡಿ ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ರಾಜೀನಾಮೆ ಪತ್ರಕ್ಕೆ ಅಧಿಕೃತ ಸಹಿ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಮನವೊಲಿಸಲು ಬಂದ ಮನೋಹರ್‌ಗೆ ಉತ್ತರ ನೀಡಿದ ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ ಇಂಜು ರಾಜೀನಾಮೆ ನೀಡುತ್ತಾರೆ ಅನ್ನೋ ಮಾಹಿತಿ ಖಚಿತವಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಪರವಾಗಿ ಮನೋಹರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ರಾಮಲಿಂಗಾ ರೆಡ್ಡಿ ಭೇಟಿ ಮಾಡಿದ ಮನೋಹರ್ ರಾಜೀನಾಮೆ ನೀಡಬೇಡಿ. ಕೆಪಿಸಿಸಿ ಅಧ್ಯಕ್ಷರು ಮಾತನಾಡುತ್ತಾರೆ ಎಂದು ಮನೋಹರ್ ಸೂಚಿಸಿದ್ದಾರೆ. ಏ ಅದೆಲ್ಲಾ ಬೇಡಪ್ಪ, ನಾನು ಕೊಡ್ತೇನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ನಾನ್ ಯಾರ್ ಮಾತುಕೇಳಲ್ಲ. ನನಗೆ ಕೋಪ ಬರಸಬೇಡಿ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ ವೇಳೆ ಕೆಲ ಕಾಂಗ್ರೆಸ್ ನಾಯಕರು ಆಗಮಿಸಿ ಮನವಿ ಮಾಡಿಕೊಂಡಿದ್ದಾರೆ. ರಾಜೀನಾಮೆ ಬೇಡ, ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳುವ ಮಾತನಾಡಿದ್ದಾರೆ. ಎ ಬೇಡಪ್ಪ ನಂಗೆ, ಯಾರ ಮಾತು ನಾನು ಕೇಳಲ್ಲ ಎಂದು ರೆಡ್ಡಿ ಹೇಳಿದ್ದಾರೆ.


