ಸೆ.25ರಂದು ಕರ್ನಾಟಕ ಬಂದ್​ ಆಗುತ್ತಾ? ಇಲ್ವಾ? ಅಂತಿಮ ತೀರ್ಮಾನ ಪ್ರಕಟಿಸಿದ ರೈತ ಸಂಘ

ಸೆ.25ರಂದು ಕರ್ನಾಟಕ ಬಂದ್​ ಮಾಡಬೇಕಾ? ಬೇಡ್ವಾ ಎನ್ನುವ ಗೊಂದಲದಲ್ಲಿದ್ದ ರಾಜ್ಯ ರೈತ ಸಂಘಟನೆಗಳು ಕೊನೆಗೂ ತಮ್ಮ ಅಂತಿಮ ತೀರ್ಮಾನವನ್ನು ಪ್ರಕಟಿಸಿವೆ. 

September 25 Karnataka bandh cancelled By Farmers unions rbj

ಬೆಂಗಳೂರು, (ಸೆ.22):  ರೈತರ ಮಸೂಧೆಯನ್ನು ವಿರೋಧಿಸಿ ಇದೇ ಸೆಪ್ಟೆಂಬರ್ 25ರಂದು ಕರ್ನಾಟಕ ಬಂದ್‌ ತೀರ್ಮಾನವನ್ನು ಕೈಬಿಡಲಾಗಿದೆ.

ಈ ಬಗ್ಗೆ ಇಂದು (ಮಂಗಳವಾರ) ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.

ರೈತರ ಮಸೂಧೆಯನ್ನು ವಿರೋಧಿಸಿ ಇದೇ ಸೆಪ್ಟೆಂಬರ್ 25ರಂದು ಕರೆ ನೀಡಲು ಮುಂದಾಗಿದ್ದಂತ ಕರ್ನಾಟಕ ಬಂದ್ ಅನ್ನು ನಡೆಸುತ್ತಿಲ್ಲ. ಇದರ ಬದಲಾಗಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಕೇಂದ್ರ, ರಾಜ್ಯ ಸರ್ಕಾರದ ರೈತ ವಿರೋಧಿ ಮಸೂಧೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಸೆ. 25 ಕ್ಕೆ ಕರ್ನಾಟಕ ಬಂದ್? ಹೊರ ಹೋಗುವ ಮುನ್ನ ಇರಲಿ ಎಚ್ಚರ..ಎಚ್ಚರ!

:ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ ರದ್ದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ 30ಕ್ಕೂ ಹೆಚ್ಚು ಸಂಘಟನೆಗಳು ರಾಜ್ಯರಾಜಧಾನಿಯಲ್ಲಿ ಬೀದಿಗಳಿದು ಪ್ರತಿಭಟನೆ ನಡೆಸುತ್ತಿವೆ.  ಇದರ ಮುಂದುವರಿದ ಭಾಗವಾಗಿ ಸೆ.25ರಂದು ಕರ್ನಾಟಕ ಬಂದ್​ಗೆ ರೈತ ಸಂಘಟನೆಗಳು ನಿರ್ಧರಿಸಿದ್ದವು.

ಆದ್ರೆ, ಇದೀಗ ತಮ್ಮ ನಿಲುವನ್ನು ಬದಲಿಸಿದ್ದು, ಸೆ.25 ರಂದು ಕರ್ನಾಟಕ ಬಂದ್ ಬದಲಾಗಿ ಕೇವಲ ಹೆದ್ದಾರಿ ಮಾತ್ರ ಬಂದ್ ಮಾಡಲಾಗುವುದು ಮುಂದಾಗಿವೆ.

Latest Videos
Follow Us:
Download App:
  • android
  • ios