Asianet Suvarna News Asianet Suvarna News

Karnataka Legislative Assembly: ಯು.ಟಿ ಖಾದರ್ ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಆಯ್ಕೆ!

ಹಿರಿಯ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ.
 

Senoir Congress Leader UT Khader Selected as Opposition Deputy Leader in Karntaka Legislative Assembly mnj
Author
Bengaluru, First Published Jan 30, 2022, 12:54 PM IST | Last Updated Jan 30, 2022, 1:38 PM IST

ಬೆಂಗಳೂರು (ಜ. 30):  ಹಿರಿಯ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ (U. T. Khader) ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ. ಸಿದ್ದರಾಮಯ್ಯ (Siddaramaiah) ಆಪ್ತ ಯು.ಟಿ ಖಾದರ್‌ಗೆ ಸ್ಥಾನ ನೀಡಲಾಗಿದೆ. ವಿಧಾನ ಪರಿಷತ್‌ನಲ್ಲಿ (Legislative Council) ವಿಪಕ್ಷ ನಾಯಕ ಸ್ಥಾನ ಮುಸ್ಲಿಂ ಸಮುದಾಯದ ನಾಯಕನಿಗೆ ತಪ್ಪಿದ ಹಿನ್ನೆಲೆ ವಿಧಾನ ಸಭೆಯಲ್ಲಿ (Legislative Assembly) ವಿಪಕ್ಷ ಉಪನಾಯಕನ ಸ್ಥಾನ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ (Congress) ಹೈಕಮಾಂಡ್ ನೀಡಿದೆ. ಕಾಂಗ್ರೆಸ್‌ನ(Congress) ಅಲ್ಪಸಂಖ್ಯಾತ ನಾಯಕರು ಪರಿಷತ್ ಪ್ರತಿಪಕ್ಷ ನಾಯಕನ ಹುದ್ದೆಗೆ ತೀವ್ರ ಪೈಪೋಟಿ ನಡೆಸಿದ್ದರು.

ಯು.ಟಿ ಖಾದರ್‌ಗೆ ಸ್ಥಾನ ಕಲ್ಪಿಸುವ ಮೂಲಕ ಸಿದ್ದರಾಮಯ್ಯ, ಹಾಗೂ ಅಲ್ಪಸಂಖ್ಯಾತರನ್ನ ಎಐಸಿಸಿ (AICC) ಸಮಾಧಾನ ಪಡಿಸಿದೆ ಎಂದು ಹೇಳಲಾಗಿದೆ.‌ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌(KC Venugopal) ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಯು.ಟಿ ಖಾದರ್ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ವಸತಿ ಮತ್ತು ನಗರಾಭಿವೃದ್ದಿ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅಲ್ಲದೇ ನಾಲ್ಕು ಬಾರಿ ಶಾಸಕರಾಗಿ ಕಾರ್ಯನಿರ್ವಹಣೆ ಮಾಡಿದ ಅನುಭವ ಇದೆ. ದಕ್ಷಿಣ ಕನ್ನಡ, ಕೋಲಾರ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಆಗಿಯೂ ಖಾದರ್ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: Karnataka Politics: ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾಗಿ ಹರಿಪ್ರಸಾದ್‌

 ಪರಿಷತ್‌ ಪ್ರತಿಪಕ್ಷ ನಾಯಕರಾಗಿ ಹರಿಪ್ರಸಾದ್‌ : ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಹುದ್ದೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad), ಉಪನಾಯಕ ಸ್ಥಾನಕ್ಕೆ ಕೆ.ಗೋವಿಂದರಾಜು(K Govindraju) ಹಾಗೂ ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯ ಸಚೇತಕ ಹುದ್ದೆಗೆ ಪ್ರಕಾಶ್‌ ರಾಥೋಡ್‌ ಅವರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿತ್ತು. ಇನ್ನು ಮುಖ್ಯ ಸಚೇತಕ ಹುದ್ದೆಗೆ ನಜೀರ್‌ ಅಹ್ಮದ್‌(Nejer Ahmed) ಅವರ ಹೆಸರನ್ನು ಹೈಕಮಾಂಡ್‌ ಪರಿಗಣಿಸಿತ್ತು. ಆದರೆ, ಪ್ರತಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿಯಾಗಿದ್ದ ನಜೀರ್‌ ಅವರು ಈ ಹುದ್ದೆ ಹೊಣೆ ವಹಿಸಿಕೊಳ್ಳಲು ಹಿಂಜರಿದ ಕಾರಣ ಅಂತಿಮ ಹಂತದಲ್ಲಿ ಮತ್ತೊಬ್ಬ ನಾಯಕ ಪ್ರಕಾಶ್‌ ರಾಥೋಡ್‌ ಅವರಿಗೆ ಸಚೇತಕ ಹುದ್ದೆ ಒಲಿದಿದೆ.

 ವಿಧಾನಪರಿಷತ್‌ ಪ್ರತಿಪಕ್ಷ ನಾಯಕರಾಗಿದ್ದ ಎಸ್‌.ಆರ್‌. ಪಾಟೀಲ್‌(SR Patil) ಅವರ ಅವಧಿ ಮುಗಿದ ನಂತರ ಈ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ(Congress) ಭಾರಿ ಪೈಪೋಟಿ ನಿರ್ಮಾಣವಾಗಿತ್ತು. ಅಲ್ಪಸಂಖ್ಯಾತ(Minorities) ಸಮುದಾಯದವರಿಗೆ ಈ ಸ್ಥಾನ ನೀಡಬೇಕು ಎಂದು ತೀವ್ರ ಒತ್ತಡ ನಿರ್ಮಾಣವಾಗಿತ್ತು. ನಜೀರ್‌ ಅಹ್ಮದ್‌ ಅವರು ಪ್ರತಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿಧಾನಸಭೆ ವಿರೋಧಪಕ್ಷದ ನಾಯಕ ಸ್ಥಾನದಲ್ಲಿ ಹಿಂದುಳಿದ ವರ್ಗದ ಸಿದ್ದರಾಮಯ್ಯ(Siddaramaiah) ಇರುವುದರಿಂದ ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಬೇಕು ಎಂಬ ಒತ್ತಡವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಹೈಕಮಾಂಡ್‌ ಹರಿಪ್ರಸಾದ್‌ ಅವರನ್ನು ಪ್ರತಿಪಕ್ಷ ನಾಯಕನ ಹುದ್ದೆಗೆ ಆಯ್ಕೆ ಮಾಡಿದ್ದರಿಂದ ನಜೀರ್‌ ಅವರಿಗೆ ಮುಖ್ಯ ಸಚೇತಕ ಹುದ್ದೆ ನೀಡುವ ಇಂಗಿತ ವ್ಯಕ್ತಪಡಿಸಿತ್ತು. ಆದರೆ, ನಜೀರ್‌ ಅಹ್ಮದ್‌ ಅವರು ಈ ಹುದ್ದೆ ಒಪ್ಪದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: BK Hariprasad ಬಿ.ಕೆ ಹರಿಪ್ರಸಾದ್‌ ಇಚ್ಛಾಶಕ್ತಿ, ಗೋಕಾಕಿನಲ್ಲೊಂದು ಮಾದರಿ ಕೆಲಸ

ಅಲ್ಪಸಂಖ್ಯಾತರಿಗೆ ನಿರಾಶೆ: ಕಾಂಗ್ರೆಸ್‌ನ(Congress) ಅಲ್ಪಸಂಖ್ಯಾತ ನಾಯಕರು ಪ್ರತಿಪಕ್ಷ ನಾಯಕನ ಹುದ್ದೆಗೆ ತೀವ್ರ ಪೈಪೋಟಿ ನಡೆಸಿದ್ದರು. ನಜೀರ್‌ ಅಹ್ಮದ್‌ ಮಾತ್ರವಲ್ಲದೆ, ಸಿ.ಎಂ.ಇಬ್ರಾಹಿಂ ಅವರು ಸಹ ಈ ಹುದ್ದೆ ಮೇಲೆ ಕಣ್ಣಿಟ್ಟು ಪೈಪೋಟಿ ನಡೆಸಿದ್ದರು. ಆದರೆ, ಇಬ್ರಾಹಿಂ ಅವರು ಆಗಾಗ ಜೆಡಿಎಸ್‌(JDS) ನಾಯಕರಾದ ದೇವೇಗೌಡ(HD Devegowda) ಹಾಗೂ ಕುಮಾರಸ್ವಾಮಿ(HD Kumaraswamy) ಅವರ ಪರ ಹೇಳಿಕೆಗಳನ್ನು ನೀಡಿದ್ದು ಅವರಿಗೆ ಪ್ರತಿಕೂಲವಾಗಿ ಪರಿಣಮಿಸಿದೆ.

ಕಾಂಗ್ರೆಸ್‌ ಪಕ್ಷ ಇಬ್ರಾಹಿಂ ಅವರ ಸೇವೆ ಪರಿಗಣಿಸಿ ವಿಧಾನ ಪರಿಷತ್‌ ಸದಸ್ಯರನ್ನಾಗಿ ನೇಮಕ ಮಾಡಿದ್ದರೂ ಇಬ್ರಾಹಿಂ ಅವರು ಆಗಾಗ ಜೆಡಿಎಸ್‌ ನಾಯಕತ್ವದೊಂದಿಗೆ ಆಪ್ತತೆ ತೋರುತ್ತಿದ್ದರು. ಇದನ್ನು ಗಮನಿಸಿದ್ದ ಹೈಕಮಾಂಡ್‌ ಇಬ್ರಾಹಿಂ ಅವರನ್ನು ಈ ಹುದ್ದೆಗಳಿಗೆ ಪರಿಗಣಿಸದಿರಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.

 

 

Latest Videos
Follow Us:
Download App:
  • android
  • ios