Karnataka Politics: ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಹರಿಪ್ರಸಾದ್
* ಗೋವಿಂದರಾಜು ಉಪನಾಯಕ,ರಾಥೋಡ್ ಮುಖ್ಯ ಸಚೇತಕ
* ಸಚೇತಕ ಹುದ್ದೆ ವಹಿಸಿಕೊಳ್ಳಲು ನಜೀರ್ ನಕಾರ
* ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
ಬೆಂಗಳೂರು(ಜ.27): ವಿಧಾನಪರಿಷತ್ ವಿರೋಧಪಕ್ಷದ ನಾಯಕ ಹುದ್ದೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad), ಉಪನಾಯಕ ಸ್ಥಾನಕ್ಕೆ ಕೆ.ಗೋವಿಂದರಾಜು(K Govindraju) ಹಾಗೂ ವಿಧಾನಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕ ಹುದ್ದೆಗೆ ಪ್ರಕಾಶ್ ರಾಥೋಡ್ ಅವರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ.
ಎಸ್.ಆರ್.ಪಾಟೀಲ್(SR Patil) ವಿಧಾನಪರಿಷತ್(Vidhan Parishat) ಅವಧಿ ಮುಕ್ತಾಯದಿಂದ ತೆರವಾಗಿದ್ದ ವಿಧಾನಪರಿಷತ್ ವಿರೋಧಪಕ್ಷದ ನಾಯಕ(Vidhan Parishat Leader of Opposition) ಸ್ಥಾನ ಬಿ.ಕೆ.ಹರಿಪ್ರಸಾದ್‌ಗೆ ಒಲಿಯುವ ಸಾಧ್ಯತೆ ಇದೆ, ಹೈಕಮಾಂಡ್ ಸಹ ಹರಿಪ್ರಸಾದ್‌ಗೆ ಜವಾಬ್ದಾರಿ ನೀಡುವ ಕುರಿತು ಒಪ್ಪಿಗೆ ನೀಡಿದೆ ಎಂದು ಬುಧವಾರವಷ್ಟೇ ‘ಕನ್ನಡಪ್ರಭ’(Kannada Prabha) ವರದಿ ಪ್ರಕಟಿಸಿತ್ತು. ಅದರಂತೆ ಬುಧವಾರ ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್(KC Venugopal) ನೇಮಕಾತಿ ಆದೇಶ ಹೊರಡಿಸಿದ್ದಾರೆ.
Karnataka Politics: ಹರಿಪ್ರಸಾದ್‌ಗೆ ಪರಿಷತ್ ವಿಪಕ್ಷ ನಾಯಕ ಸ್ಥಾನ?
ಇನ್ನು ಮುಖ್ಯ ಸಚೇತಕ ಹುದ್ದೆಗೆ ನಜೀರ್ ಅಹ್ಮದ್(Nejer Ahmed) ಅವರ ಹೆಸರನ್ನು ಹೈಕಮಾಂಡ್ ಪರಿಗಣಿಸಿತ್ತು. ಆದರೆ, ಪ್ರತಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿಯಾಗಿದ್ದ ನಜೀರ್ ಅವರು ಈ ಹುದ್ದೆ ಹೊಣೆ ವಹಿಸಿಕೊಳ್ಳಲು ಹಿಂಜರಿದ ಕಾರಣ ಅಂತಿಮ ಹಂತದಲ್ಲಿ ಮತ್ತೊಬ್ಬ ನಾಯಕ ಪ್ರಕಾಶ್ ರಾಥೋಡ್ ಅವರಿಗೆ ಸಚೇತಕ ಹುದ್ದೆ ಒಲಿದಿದೆ.
ನಜೀರ್ ಅಹ್ಮದ್ ಅವರು ಪ್ರತಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿಧಾನಸಭೆ ವಿರೋಧಪಕ್ಷದ ನಾಯಕ ಸ್ಥಾನದಲ್ಲಿ ಹಿಂದುಳಿದ ವರ್ಗದ ಸಿದ್ದರಾಮಯ್ಯ(Siddaramaiah) ಇರುವುದರಿಂದ ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಬೇಕು ಎಂಬ ಒತ್ತಡವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಹೈಕಮಾಂಡ್ ಹರಿಪ್ರಸಾದ್ ಅವರನ್ನು ಪ್ರತಿಪಕ್ಷ ನಾಯಕನ ಹುದ್ದೆಗೆ ಆಯ್ಕೆ ಮಾಡಿದ್ದರಿಂದ ನಜೀರ್ ಅವರಿಗೆ ಮುಖ್ಯ ಸಚೇತಕ ಹುದ್ದೆ ನೀಡುವ ಇಂಗಿತ ವ್ಯಕ್ತಪಡಿಸಿತ್ತು. ಆದರೆ, ನಜೀರ್ ಅಹ್ಮದ್ ಅವರು ಈ ಹುದ್ದೆ ಒಪ್ಪದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅಲ್ಪಸಂಖ್ಯಾತರಿಗೆ ನಿರಾಶೆ:
ಕಾಂಗ್ರೆಸ್‌ನ(Congress) ಅಲ್ಪಸಂಖ್ಯಾತ ನಾಯಕರು ಪ್ರತಿಪಕ್ಷ ನಾಯಕನ ಹುದ್ದೆಗೆ ತೀವ್ರ ಪೈಪೋಟಿ ನಡೆಸಿದ್ದರು. ನಜೀರ್ ಅಹ್ಮದ್ ಮಾತ್ರವಲ್ಲದೆ, ಸಿ.ಎಂ.ಇಬ್ರಾಹಿಂ ಅವರು ಸಹ ಈ ಹುದ್ದೆ ಮೇಲೆ ಕಣ್ಣಿಟ್ಟು ಪೈಪೋಟಿ ನಡೆಸಿದ್ದರು. ಆದರೆ, ಇಬ್ರಾಹಿಂ ಅವರು ಆಗಾಗ ಜೆಡಿಎಸ್(JDS) ನಾಯಕರಾದ ದೇವೇಗೌಡ(HD Devegowda) ಹಾಗೂ ಕುಮಾರಸ್ವಾಮಿ(HD Kumaraswamy) ಅವರ ಪರ ಹೇಳಿಕೆಗಳನ್ನು ನೀಡಿದ್ದು ಅವರಿಗೆ ಪ್ರತಿಕೂಲವಾಗಿ ಪರಿಣಮಿಸಿದೆ.
ಕಾಂಗ್ರೆಸ್ ಪಕ್ಷ ಇಬ್ರಾಹಿಂ ಅವರ ಸೇವೆ ಪರಿಗಣಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದ್ದರೂ ಇಬ್ರಾಹಿಂ ಅವರು ಆಗಾಗ ಜೆಡಿಎಸ್ ನಾಯಕತ್ವದೊಂದಿಗೆ ಆಪ್ತತೆ ತೋರುತ್ತಿದ್ದರು. ಇದನ್ನು ಗಮನಿಸಿದ್ದ ಹೈಕಮಾಂಡ್ ಇಬ್ರಾಹಿಂ ಅವರನ್ನು ಈ ಹುದ್ದೆಗಳಿಗೆ ಪರಿಗಣಿಸದಿರಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಮೇಲ್ಮನೆ ವಿಪಕ್ಷ ನಾಯಕ ಸ್ಥಾನ ಒಲಿಯಲಿದೆ ಎಂದು ಬುಧವಾರವಷ್ಟೇ ‘ಕನ್ನಡಪ್ರಭ’ ವರದಿ ಮಾಡಿತ್ತು.
Karnataka Politics: ಎಂಬಿ ಪಾಟೀಲರಿಗೆ ಪ್ರಚಾರ ಸಮಿತಿ ಹೊಣೆ, DSP ಜಂಟಿ ಯುದ್ಧ!
ನಮ್ಮ ನೆಲದ ತುಳು, ಕೊಡವ ಭಾಷೆಯ ಮೇಲೂ ನಿಮ್ಮ ಮಮತೆ ತೋರಿಸಿ!
ಬೆಂಗಳೂರು: ರಾಮನಗರ (Ramanagara) ಜಿಲ್ಲೆಯ ಮಾಗಡಿಯಲ್ಲಿ (Magadi ) ಕರ್ನಾಟಕ ಸರ್ಕಾರ (Karnataka government) ನಿರ್ಮಿಸಲು ಉದ್ದೇಶಿಸಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ (Sanskrit university ) ಕನ್ನಡ ಪರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಟ್ವಿಟರ್ ನಲ್ಲೂ ಇದರ ವಿರುದ್ಧವಾಗಿ "ಸೇ ನೋ ಟು ಸಂಸ್ಕೃತ (#SayNoToSanskrit) ಹ್ಯಾಶ್ ಟ್ಯಾಗ್ ಜನಪ್ರಿಯವಾಗಿದೆ. ಈ ಕುರಿತಂತೆ ಜ. 18 ರಂದು ಮಾತನಾಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (Congress leader BK hariprasad ), "ಬಿಜೆಪಿ ಸರ್ಕಾರ ರಾಜ್ಯದ ಕೇವಲ 24,821 ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನ ನಮ್ಮ ರಾಜ್ಯದಲ್ಲಿ ಮೂಲೆಗುಂಪಾಗಿರುವ ತುಳು (Tulu) ಮತ್ತು ಕೊಡವ (Kodava) ಭಾಷೆಗಳ ಮೇಲೆ ತೋರಿಸಲಿ" ಎಂದು ಹೇಳಿದ್ದರು.