ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮನೋಹರ್‌, ಅವರು ಮಾರ್ಚ್‌ 5 ರ ರಾತ್ರಿ ಕೆಲಸ‌ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲಗಿದವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಹೋದರೂ, ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. 

ಬೆಂಗಳೂರು (ಮಾರ್ಚ್‌ 6, 2023): ನ್ಯೂಸ್18 ಚಾನೆಲ್‌ನ ಪ್ರೊಡಕ್ಷನ್ ಹೆಡ್ ಆಗಿದ್ದ ಮನೋಹರ್‌ ಭಾನುವಾರ ರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇವರಿಗೆ 41 ವರ್ಷ ವಯಸ್ಸಾಗಿತ್ತು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮನೋಹರ್‌, ಅವರು ಮಾರ್ಚ್‌ 5 ರ ರಾತ್ರಿ ಕೆಲಸ‌ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲಗಿದವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಹೋದರೂ, ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. 

ಪತ್ರಕರ್ತ ಮನೋಹರ್‌ ಅವರು ಪುಟ್ಟ ಅವಳಿ ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ. ಮಾಧ್ಯಮ ರಂಗದಲ್ಲಿ ಉತ್ತಮವಾಗಿ ಕೆಲಸ ಮಾಡಿ ಹೆಸರುವಾಸಿಯಾಗಿದ್ದರು ಹಾಗೂ ಸ್ನೇಹಪರ ಜೀವಿಯಾಗಿದ್ದರು ಮನೋಹರ್. 

ಇದನ್ನು ಓದಿ: ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ, ಹೃದಯದ ಆರೋಗ್ಯಕ್ಕಿಲ್ಲ ವಯಸ್ಸಿನ ಮಿತಿ

ಇತ್ತೀಚೆಗೆ ಯುವಕರಲ್ಲಿಯೂ ಹೃದಯಾಘಾತಕ್ಕೊಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೂ ಸಹ ಹೃದಯಘಾತ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಇದೇ ರೀತಿ ಮಾಧ್ಯಮದವರು ಸಹ ಬಲಿಯಾಗಿದ್ದು, ಇವರ ಸಾವಿಗೆ ಮಾಧ್ಯಮ ಮಿತ್ರರು ಹಾಗೂ ಕುಟುಂಬಸ್ಥರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ. 

ಇದನ್ನೂ ಓದಿ: ಹೆಚ್ತಿದೆ ಸಡನ್‌ ಹಾರ್ಟ್‌ಅಟ್ಯಾಕ್ ಕೇಸ್‌, ದಿನಕ್ಕೆ 11 ನಿಮಿಷ ವಾಕ್‌ ಮಾಡಿ ಜೀವ ಉಳಿಸಿಕೊಳ್ಬೋದಾ?