Nithyananda health ಬಿಡದಿ ನಿತ್ಯಾನಂದನಿಗೆ ಅನಾರೋಗ್ಯ, ಸಾವಿನ ವದಂತಿ ತಳ್ಳಿ ಹಾಕಿದ ಕೈಲಾಸ!

  • ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕೈಲಾಸ ನಿತ್ಯಾನಂದ
  • ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ತಿಲ್ಲ ನಿತ್ಯಾನಂದ
  • ನಿತ್ಯಾನಂದ ಸ್ವಾಮಿ ವಿರುದ್ದ ಮತ್ತೆ ನಾನ್ ಬೇಲೆಬಲ್ ವಾರೆಂಟ್
Self Styled Godman Nithyananda face severe health issues says report Court issue non bailable warrant ckm

ಬೆಂಗಳೂರು(ಜೂ.07): ಬಿಡದಿ ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಕೈಲಾಸ ದೇಶದಲ್ಲಿರುವ ನಿತ್ಯಾನಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.  ಇತ್ತ ನಿತ್ಯಾನಂದನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದು ಅನಾರೋಗ್ಯ ಮಾತನ್ನು ಪುಷ್ಠೀಕರಿಸುತ್ತಿದೆ. ಇತ್ತ ಆತ್ಯಾಚಾರ ಆರೋಪ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಮತ್ತೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದ್ದು, ಸಂಕಷ್ಟ ಒಂದರ ಮೇಲೊಂದರಂತೆ ಸಂಕಷ್ಟಗಳ ಎದುರಾಗುತ್ತಿದೆ.

ಇತ್ತೀಚೆಗೆ ನಿತ್ಯಾನಂದನ ಆರೋಗ್ಯ ಏರುಪೇರಾಗಿ ತೀವ್ರ ಅಸ್ವಸ್ಥರಾಗಿದ್ದಾರೆ. ಕೈಲಾಸದಲ್ಲೇ ನಿತ್ಯಾನಂದನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಿತ್ಯಾನಂದ ಇನ್ನಿಲ್ಲ ಅನ್ನೋ ಪೋಸ್ಟ್‌ಗಳು ಹರಿದಾಡಿತ್ತು. ಅನಾರೋಗ್ಯದಿಂದ ನಿತ್ಯಾನಂದ ಸಾವನ್ನಪ್ಪಿದ್ದಾರೆ ಅನ್ನೋ ವದಂತಿಗಳು ಹರಿದಾಡಿತ್ತು. ಆದರೆ ಸಾವಿನ ಸುದ್ಧಿ ಸುಳ್ಳು ಎಂದು ಸಾಮಾಜಿಕ ಜಾಲತಾದಲ್ಲಿ ಸ್ಪಷ್ಟನೆ ನೀಡಲಾಗಿದೆ. 

ಮೈ ಡಾಟರ್ ಜಾಯಿನ್ಡ್ ಎ ಕಲ್ಟ್; ರಿಲೀಸ್ ಆಯ್ತು ನಿತ್ಯಾನಂದ ಕುರಿತ ಸಾಕ್ಷ್ಯಚಿತ್ರ

ಒಂದಡೆ ನಿತ್ಯಾನಂದ ಅನಾರೋಗ್ಯದ ಮಾತುಗಳು ಕೇಳಿಬಂದರೆ, ಇತ್ತಲ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ನಾನ್ ಬೇಲೆಬಲ್ ವಾರೆಂಟ್ ಹೊರಡಿಸಲಾಗಿದೆ. ರಾಮನಗರ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ವಾರೆಂಟ್ ಹೊರಡಿಸಿದೆ. ನಿತ್ಯಾನಂದ ಬಂಧನ ಮಾಡಿ ಕೋರ್ಟ್ ಮುಂದೆ ಹಾಜರು ಪಡಿಸಲು ನ್ಯಾಯಾಧೀಶ ದೇವರಾಜ್ ಭಟ್ ಎಂ ಆದೇಶ ನೀಡಿದ್ದಾರೆ.

ಈ ಪ್ರಕರಣ ವಿಚಾರಣೆ ಆರಂಭಿಸಲಾಗಿದ್ದು, 4 ಮತ್ತು 6ನೇ ಆರೋಪಿ ಕೋರ್ಟ್‌ಗೆ ಹಾಜರಾಗಿದ್ದಾರೆ. ಆದರೆ ಪ್ರಮುಖ ಆರೋಪಿ ನಿತ್ಯಾನಂದ ಹಾಗೂ ಆಪ್ತರು ಎಸ್ಕೇಪ್ ಆಗಿದ್ದಾರೆ. ಇತ್ತ ಹೈಕೋರ್ಟ್ ನಿತ್ಯಾನಂದನ ಪ್ರಾಥಮಿಕ ಜಾಮೀನು ಕೂಡ ರದ್ದು ಮಾಡಿದೆ.  ಇತ್ತ ಪೊಲೀಸರಿಗೆ ಕೋರ್ಟ್ ಚಾಟಿ ಬೀಸಿದೆ.

ಈಗಾಗಲೇ ನಿತ್ಯಾನಂದನ ಕೋರ್ಟ್‌ಗೆ ಹಾಜರು ಪಡಿಸಲು ಸೂಚಿಸಲಾಗಿತ್ತು. ಆದರೆ ನಿತ್ಯಾನಂದ ಕೈಗೆ ಸಿಗುತ್ತಿಲ್ಲ ಅನ್ನೋ ಉತ್ತರ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸತತ ಪೋಸ್ಟ್ ಮಾಡುತ್ತಿರುವ ನಿತ್ಯಾನಂದ ನಿಮ್ಮ ಕೈಗೆ ಯಾಕೆ ಸಿಗುತ್ತಿಲ್ಲ ಎಂದು ಪೋಲಿಸರನ್ನು ಕೋರ್ಟ್ ಪ್ರಶ್ನಿಸಿದೆ. ಪದೇ ಪದೇ ಇದೆ ಕತೆಗಳನ್ನು ಹೇಳುತ್ತಿದ್ದೀರಿ. ಜೂನ್ 18 ರಂದು ನಿತ್ಯಾನಂದ ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರಿಗೆ ಅಂತಿಮ ಗಡುವು ನೀಡಲಾಗಿದೆ.

ನಿತ್ಯಾನಂದ ಕೈಲಾಸ ಅನ್ನೋ ಹೊಸ ದ್ವೀಪ ರಾಷ್ಟ್ರ ನಿರ್ಮಿಸಿದ್ದಾನೆ ಅನ್ನೋದು ಎಲ್ಲರಿಗೂ ತಿಳಿದಿರುವ  ವಿಚಾರ. ಆದರೆ ನಿತ್ಯನ ಕೈಲಾಸಕ್ಕೆ ಸಿಐಡಿ ಪೊಲೀಸರಿಗೆ ದಾರಿ ತಿಳಿಯದಾಗಿದೆ. ಇನ್ನು ನಿತ್ಯಾನಂದನ ಹುಡುಕುವ ಪ್ರಯತ್ನಕ್ಕೆ ಸಿಐಡಿ ಕೈಹಾಕಿಲ್ಲ ಅನ್ನೋ ಆರೋಪಗಳು ಕೇಳಿಬಂದಿದೆ. ಇತ್ತ ನಿತ್ಯಾನಂದ ದೇಶಬಿಡಲು ಪೊಲೀಸರು ಸಹಕರಿಸಿದ್ದಾರೆ ಅನ್ನೋ ಆರೋಪಿಗಳಿದೆ. ನಿತ್ಯಾನಂದ ನಕಲಿ ಪಾಸ್‌ಪೋರ್ಟ್ ಮೂಲಕ ದೇಶ ಬಿಡಲು ಯಾರು ಕಾರಣಾದರು ಅನ್ನೋ ಪ್ರಶ್ನೆಗಳು ಎದ್ದಿದೆ. 

ಬಿಡದಿ ನಿತ್ಯಾನಂದ ಆಶ್ರಮದಿಂದ ಮಲೇಷ್ಯಾ ಪ್ರಜೆ ನಾಪತ್ತೆ

ನಿತ್ಯಾನಂದನ ಕೈಲಾಸದ ಮಾಹಿತಿ ಸಿಗದೆ ಪೊಲೀಸರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆಯಾ ಅನ್ನೋ ಅನುಮಾನಗಳು ಕಾಡತೊಡಗಿದೆ. ಇಂಟರ್ಪೋಲ್‌ಗೂ ನಿತ್ಯಾನಂದನ ಕೈಲಾಸ ಎಲ್ಲಿದೆ ಅನ್ನೋ ಮಾಹಿತಿ ತಿಳಿದಿಲ್ಲವೇ? ಇಂಟರ್ಪೋಲ್ ಸಂಸ್ಥೆ ವಿಳಾಸ ತಿಳಿದುಕೊಳ್ಳಲು ಅಸಾಧ್ಯವಾಗಿರುವಷ್ಟು ದುರ್ಬಲವಾಗಿದೆಯಾ?ಎಂಬು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆದರೆ ನಿತ್ಯಾನಂದನ ಭೇಟಿಗೆ ಹಲವು ಭಕ್ತರು ತೆರಳುತ್ತಿದ್ದಾರೆ. ಆದರೆ ಪೊಲೀಸರಿಗೆ ಮಾತ್ರ ಯಾಕೆ ಸಿಗುತ್ತಿಲ್ಲ ಅನ್ನೋ ಪ್ರಶ್ನೆಯನ್ನು ಕೋರ್ಟ್ ಕೂಡ ಕೇಳಿದೆ

ಅತ್ಯಾಚಾರ ಆರೋಪ ಪ್ರಕರಣದ ಆರೋಪಿಗಳು
A1 ನಿತ್ಯಾನಂದ ಸ್ವಾಮಿ
A2 ಗೋಪಾಲ ಶೀಲಂರೆಡ್ಡಿ
A3 ಶಿವವಲ್ಲಭನೇನಿ
A4 ಧನಶೇಖರನ್
A5 ರಾಗಿಣಿ
A6 ಮಾ.ನಿತ್ಯಾನಂದ ಅಲಿಯಾಸ್ ಜಮುನಾ ರಾಣಿ

Latest Videos
Follow Us:
Download App:
  • android
  • ios