* ಮಗ​ನನ್ನು ಹುಡು​ಕಿ ಕೊಡು​ವಂತೆ ದೂರು ನೀಡಿದ ಪುಷ್ಪಾ​ರಾಣಿ * ಆಶ್ರಮದ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದ ಕ್ರಿಸ್ಟನ್‌ * ಈ ಸಂಬಂಧ ಬಿಡದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ರಾಮನಗರ(ಜು.12): ಬಿಡದಿ ಬಳಿಯ ಧ್ಯಾನ​ಪೀ​ಠದ ನಿತ್ಯಾ​ನಂದ ಸ್ವಾಮೀಜಿ ಆಶ್ರ​ಮ​ದಲ್ಲಿದ್ದ ಮಲೇಷ್ಯಾದ ಪ್ರಜೆ​ಯೊಬ್ಬ ನಾಪ​ತ್ತೆ​ಯಾ​ಗಿರುವ ಘಟನೆ ಶುಕ್ರವಾರ ನಡೆದಿದೆ. ಕ್ರಿಸ್ಟನ್‌ ಭಾಸ್ಕರನ್‌ (23) ನಾಪತ್ತೆಯಾಗಿರುವ ಯುವಕನಾಗಿದ್ದು, ಮಗ​ನನ್ನು ಹುಡು​ಕಿ ಕೊಡು​ವಂತೆ ತಾಯಿ ಪುಷ್ಪಾ​ರಾಣಿ ರಾಮಲಿಂಗಂ ಎಂಬವರು ಬಿಡದಿ ಪೊಲೀಸ್‌ ಠಾಣೆ​ಯಲ್ಲಿ ದೂರು ನೀಡಿ​ದ್ದಾ​ರೆ. 

ಮಾನಸಿಕ ಅಸ್ವಸ್ಥನಂತಾಗಿದ್ದ ತನ್ನ ಮಗನನ್ನು 8 ವರ್ಷಗಳ ಹಿಂದೆ ಚಿಕಿತ್ಸೆಗಾಗಿ ಮಲೇಷಿಯಾದಿಂದ ಕರೆತಂದು ಬಿಡದಿಯ ಧ್ಯಾನ​ಪೀ​ಠದ ಆಶ್ರಮದಲ್ಲಿ ನೆಲೆಸಿದ್ದೆವು. ಜು.9ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಶೌಚಾಲಯಕ್ಕೆ ಹೋಗಿ ಬರುವುದಾಗಿ ತೆರಳಿದ ಕ್ರಿಸ್ಟನ್‌ ಭಾಸ್ಕ​ರನ್‌ ವಾಪಸ್‌ ಕೊಠಡಿಗೆ ವಾಪಸ್‌ ಬಂದಿಲ್ಲ ಎಂದು ಪುಷ್ಪಾ​ರಾಣಿ ರಾಮ​ಲಿಂಗಂ ತಿಳಿಸಿದ್ದಾರೆ. 

ಭಾರತದಲ್ಲಿ ಕೊರೋನಾ ಓಡ್ಸೋಕೆ ನಾನೇ ಸಾಕು: ನಿತ್ಯಾನ ಹೊಸ ವಿಡಿಯೋ

ಆಶ್ರಮದ ಎಲ್ಲಾ ಕಡೆ ಹುಡುಕಿದರೂ ಕ್ರಿಸ್ಟನ್‌ ಪತ್ತೆಯಾಗಿಲ್ಲ, ಅಲ್ಲದೆ ಈತನ ಲಾಕರ್‌ ನಲ್ಲಿದ್ದ ಪಾಸ್‌ ಪೋರ್ಟ್‌ ಸಹ ಕಾಣೆಯಾಗಿದೆ. ಬಿಡದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ

ಕ್ರಿಸ್ಟನ್‌ ಮಾನಸಿಕ ಅಸ್ವಸ್ಥನಾಗಿರುವುದರಿಂದ ತಕ್ಷಣವೇ ಕೋಪಗೊಳ್ಳುವುದು ಹಾಗೂ ಎದುರಿಗಿರುವ ವ್ಯಕ್ತಿಗಳ ಮೇಲೆ ವಿನಾಕಾರಣ ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುವುದು. ಅಲ್ಲದೆ ಸಿಕ್ಕ ವಸ್ತುಗಳನ್ನು ಹೊಡೆದು ಹಾಕುವ ಚಟುವಟಕೆಗಳನ್ನು ಮಾಡುತ್ತಾನೆ ಎಂದು ಆತನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.