ಚೀನಾ ವೈರಸ್‌ ಭೀತಿ: ಏರ್‌ಪೋರ್ಟ್‌ಗಳಲ್ಲಿ ಸದ್ಯಕ್ಕೆ ಸ್ಕ್ರೀನಿಂಗ್ ಮಾಡಲ್ಲ, ಸಿಎಂ ಸಿದ್ದರಾಮಯ್ಯ

ಚೀನಾ ದೇಶದಲ್ಲಿ ಎಚ್‌ಎಂಪಿವಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಕರ್ನಾಟಕದಲ್ಲಿ ವೈರಸ್ ದೃಢಪಟ್ಟಿರುವ ಮಾಹಿತಿ ದೊರೆತಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ವೈರಸ್ ಹರಡದಂತೆ ಎಚ್ಚರ ವಹಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

Screening is Currently not done at Airports Says CM Siddaramaiah grg

ಬೆಂಗಳೂರು(ಜ.07): ರಾಜ್ಯದಲ್ಲಿ ಎಚ್‌ಎಂಪಿವಿ ವೈರಸ್‌ನ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕು ಹರಡ ದಂತೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ದೇಶದಲ್ಲಿ ಎಚ್‌ಎಂಪಿವಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಕರ್ನಾಟಕದಲ್ಲಿ ವೈರಸ್ ದೃಢಪಟ್ಟಿರುವ ಮಾಹಿತಿ ದೊರೆತಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ವೈರಸ್ ಹರಡದಂತೆ ಎಚ್ಚರ ವಹಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ಕೆಮ್ಮು, ಸೀನಿಂದ ಹರಡುತ್ತೆ ಚೀನಿ ವೈರಸ್‌: ಸೋಂಕಿನ ಲಕ್ಷಣಗಳೇನು?

ಆರೋಗ್ಯ ಸಚಿವರು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿವೆ. ಈಬಗ್ಗೆಯಾರೂಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಸೋಂಕು ತಡೆಗೆ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪ್ರಾರಂಭಿಸಲಾಗುವುದೇ ಎಂಬ ಪ್ರಶ್ನೆಗೆ, ಸದ್ಯಕ್ಕೆ ಆ ರೀತಿ ಕ್ರಮ ಕೈಗೊಳ್ಳುತ್ತಿಲ್ಲ. ಆರೋಗ್ಯ ಸಚಿವರು ಸಭೆ ನಡೆಸಿದ್ದು, ಅವರು ಅಗತ್ಯ ಕ್ರಮಗಳ ಬಗ್ಗೆ ಅವರು ಪರಿಶೀಲನೆ ನಡೆಸುತ್ತಾರೆ ಎಂದಷ್ಟೇ ಹೇಳಿದರು.

ಭಾರತದಲ್ಲೂ ಚೀನಿ ವೈರಸ್‌ ಪತ್ತೆ ಅತಂಕ ಬೇಡ

ನವದೆಹಲಿ: ನೆರೆಯ ಚೀನಾ, ಹಾಂಕಾಂಗ್, ಜಪಾನ್ ದೇಶ ಗಳಲ್ಲಿ ಭಾರೀ ಆತಂಕ ಹುಟ್ಟಿಸಿರುವ ಎಚ್ ಎಂಪಿಎ (ಹೂಮನ್ ಮೆಟಾನ್ಯೂಮೋ ವೈರಸ್) ಇದೀಗ ಭಾರತಕ್ಕೂ ಕಾಲಿಟ್ಟಿದೆ. ಮೊದಲ 2 ಪ್ರಕರಣ ಬೆಂಗಳೂರಲ್ಲಿ ವರದಿಯಾಗಿದ್ದು, ಇವೆರಡೂ ಸೇರಿ ದೇಶದಲ್ಲಿ ಸೋಮವಾರ 6 ಪ್ರಕರಣ ದೃಢಪಟ್ಟಿದೆ. ಅದರಲ್ಲಿ ಕರ್ನಾಟಕದ 2 ಮತ್ತು ಗುಜರಾತ್‌ನ 1 ಮಗುವಿನಲ್ಲಿ ಎಚ್‌ಎಂ ವೈರಸ್ ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಕಟಿಸಿದೆ. ಇನ್ನು ಚೆನ್ನೈನಲ್ಲಿ 2 ಹಾಗೂ ಕೋಲ್ಕತಾದಲ್ಲಿ 1 ಕೇಸು ವರದಿಯಾಗಿದೆ. 

ಚೀನಾದಲ್ಲಿ ಎಚ್‌ಎಂಪಿವಿ ವೈರಸ್‌ನಿಂದ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕೇಂದ್ರ ಸರ್ಕಾರವು, ಭಾರತದಲ್ಲೂ ಇಂಥ ಪ್ರಕರಣಗಳ ಮೇಲೆ ನಿಗಾ ಇಡಲು ವಿವಿಧ ಸೋಂಕಿನ ಪ್ರಕರಣಗಳ ಮೇಲೆ ಕಣ್ಣಾವಲು ಇಟ್ಟಿತ್ತು. ಈ ವೇಳೆ ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿಶೇಷವೆಂದರೆ ಸೋಂಕು ದೃಢಪಟ್ಟ ಮಕ್ಕಳಾಗಲೀ ಅಥವಾ ಕುಟುಂಬ ಸದಸ್ಯರ ಪೈಕಿ ಯಾರೂ ವಿದೇಶಕ್ಕೆ ಹೋಗಿ ಬಂದ ಇತಿಹಾಸ ಹೊಂದಿಲ್ಲ.

ಯಾರಿಗೆ ಬರುತ್ತೆ?

ಎಚ್‌ಎಂಪಿವಿ ಅಥವಾ ಹೂಮನ್ ಮೆಟಾನ್ನೂ ಮೋವೈರಸ್, ಉಸಿರಾಟದ ಸಮಸ್ಯೆಗೆ ಕಾರಣವಾಗುವ ವೈರಸ್. ಇದು ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳಬಹುದು. ಮಕ್ಕಳು, ವಯೋ ವೃದ್ಧರು, ರೋಗನಿರೋಧಕ ಶಕ್ತಿಯ ಕೊರತೆ ಇರುವವರನ್ನು ಹೆಚ್ಚಾಗಿ ಬಾಧಿಸುವ ಸಂಭವ ಇರುತ್ತದೆ. 

ಇದು ಹೊಸದೇನಲ್ಲ 

ಎಚ್‌ಎಂಪಿವಿ ವೈರಾಣು ಹೊಸದಲ್ಲ. 2001ರಲ್ಲಿ ಮೊದಲ ಬಾರಿ ಕಾಣಿಸಿಕೊಂ ಡಿತ್ತು. ಆದರೆ ಈಗ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಯಾವುದೇ ಲಸಿಕೆ ಇಲ್ಲ. 

ಬೆಂಗಳೂರಿನಲ್ಲಿ HMPV ವೈರಸ್ ಪತ್ತೆ ಬೆನ್ನಲ್ಲಿಯೇ ರೋಗ ಲಕ್ಷಣ, ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ!

ಹೇಗೆ ಹರಡುತ್ತದೆ?

ಕೆಮ್ಮುವಾಗ ಅಥವಾ ಸೀನುವಾಗ ಹೊರಬರುವ ಕಣಗಳಿಂದ ಈ ಸೊಂಕು ಹರಡುತ್ತದೆ. ಸೋಂಕಿತರ ಸಂಪರ್ಕಕ್ಕೆ ಬರುವುದರಿಂದ ಹಾಗೂ ಕಲುಷಿತ ವಾತಾವರಣಕ್ಕೆ ತೆರೆದುಕೊಳ್ಳುವುದರಿಂ ದಲೂ ಎಚ್‌.ಎಂಪಿಎ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ.

ಲಾಕ್‌ಡೌನ್  ಇಲ್ಲ: ದಿನೇಶ್

ಬೆಂಗಳೂರು:  ಎಚ್‌ಎಂಪಿವಿ ಎಂಬುದು ಪ್ರತಿ ವರ್ಷ ಸಾಮಾನ್ಯ ವಾಗಿ ಹರಡುವ ಸಹಜ ಸೋಂಕು. ಮಾರಣಾಂತಿಕ ಅಥವಾ ಅಪಾಯಕಾರಿ ವೈರಸ್ ಅಲ್ಲ. ಹೀಗಾಗಿ ರಾಂಡಮ್ ಪರೀಕ್ಷೆ, ಮಾಸ್ಕ್, ಲಾಕ್‌ಡೌನ್, ಮಕ್ಕಗಳಿಗೆ ಮಾರ್ಗಸೂಚಿ, ವಿಮಾನ ನಿಲ್ದಾಣಗಳಲ್ಲಿ ಸ್ಟೀನಿಂಗ್ ಸೇರಿದಂತೆ ಯಾವುದೇ ವಿಶೇಷ ಕ್ರಮಗಳನ್ನೂ ನಾವು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 

Latest Videos
Follow Us:
Download App:
  • android
  • ios