ಬೆಂಗಳೂರಿನಲ್ಲಿ HMPV ವೈರಸ್ ಪತ್ತೆ ಬೆನ್ನಲ್ಲಿಯೇ ರೋಗ ಲಕ್ಷಣ, ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ!
ಚೀನಾದಲ್ಲಿ ಆತಂಕ ಸೃಷ್ಟಿಸಿರುವ HMPV ವೈರಸ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಒಂದು ಮಗುವಿನಲ್ಲಿ ವೈರಸ್ ಪತ್ತೆಯಾಗಿದ್ದು, ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸೋಂಕಿತರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರು (ಜ.06): ಚೀನಾದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆಗೆ ಕಾರಣವಾಗಿರುವ HMPV ವೈರಸ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯಿಂದ ರೋಗ ಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳು ಮತ್ತು ಇತರೆ ಮಾರ್ಗಸೂಚಿಗಳನ್ಉ ಬಿಡುಗಡೆ ಮಾಡಿದ್ದು, ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದೆ. ಇನ್ನು ಸೋಂಕಿತರು ಆತಂಕ ಒಡುವ ಅಗತಯವಿಲ್ಲವೆಂಬ ಅಭವಯವನ್ನು ಕೂಡ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಗು ಒಂದಕ್ಕೆ HMPV ವೈರಸ್ ಪತ್ತೆಯಾಗಿರುವ ಬೆನ್ನಲ್ಲಿಯೇ ರಾಜ್ಯ ಆರೋಗ್ಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ. ಈ ವೈರಸ್‌ನಿಂದ ಚಳಿಗಾಲದಲ್ಲಿ ಶೀತ, ಶ್ವಾಸಕೋಶದ ಸಮಸ್ಯೆ ಉಂಟಾಗಲಿದೆ. ಮಕ್ಕಳು, ಯುವಜನತೆ ಹಾಗೂ ಹಿರಿಯ ನಾಗರಿಕರಲ್ಲಿ ಈ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಆದ್ದರಿಂದ ಈ ವರ್ಗದವರು ತುಸು ಹೆಚ್ಚಾಗಿ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಈ ವೈರಸ್ ಹಳೆಯ ವೈರಸ್ ಆಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮೊದಲ ಕೇಸ್, HMPV ವಿರುದ್ಧ ಸಮರಕ್ಕೆ ಸಜ್ಜಾದ ದೆಹಲಿ!
ಇನ್ನು ಚೀನಾದಲ್ಲಿ ಹೆಚ್‌ಎಂಪಿವಿ ಹರಡುವಿಕೆ ಪ್ರಮಾಣ ಹೆಚ್ಚಾಗಿದ್ದರೂ, ಈವರೆಗೆ ಭಾರತದಲ್ಲಿ ಪತ್ತೆಯಾಗಿರುವ ಪ್ರಕರಣಗಳಿಂದ HMPV ಪ್ರಕರಣ ಏರಿಕೆ ಕಂಡುಬಂದಿಲ್ಲ. ಆದ್ದರಿಂದ ಯಾವುದೇ ಆತಂಕ ಪಡುವ ವಾತಾವರಣ ಸೃಷ್ಟಿ ಆಗಿಲ್ಲ. HMPV ಸೋಂಕು ತಡೆಗೆ ಮುಂಜಾಗ್ರತೆ ಅಗತ್ಯವಾಗಿದೆ. ಸೋಂಕಿತರು ಪೌಷ್ಟಿಕ ಆಹಾರ ಹಾಗೂ ಹೆಚ್ಚು ನೀರು ಸೇವನೆ ಮಾಡಬೇಕು. ಸೋಂಕಿನ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಕೈಗಳಿಗೆ ಸ್ಯಾನಿಟೈಸರ್ ಹಾಗೂ ಸೋಂಕಿನ ಲಕ್ಷಣಗಳು ಇದ್ದವರು ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ.
ಹೆಚ್‌ಎಂಪಿವಿ ಸೋಂಕಿಗೆ ತುತ್ತಾದ 3 ತಿಂಗಳ ಮಗುವನ ಆರೋಗ್ಯ ಚೇತರಿಸಿಕೊಂಡಿದೆ. ಮಗುವಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಜೊತೆಗೆ, 8 ತಿಂಗಳ ಮಗುವಿಗೆ ಚಿಕಿತ್ಸೆ ಮುಂದುವರೆಯುತ್ತಿದ್ದು ಶೀಘ್ರದಲ್ಲಿ ಡಿಸ್ಚಾರ್ಜ್ ಆಗಲಿದೆ. ಈ ಸೋಂಕು ಗುಣಮುಖ ಆಗಲಿದೆ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: HMPV-ಕೋವಿಡ್-19 ವೈರಸ್ ನಡುವಿನ ವ್ಯತ್ಯಾಸವೇನು? ಯಾವುದು ಡೇಂಜರ್?
HMPV ಸೋಂಕಿನ ಲಕ್ಷಣಗಳು:
ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಗಳೇ ಹೆಚ್‌ಎಂಪಿವಿ ಸೋಂಕಿನ ಲಕ್ಷಣಗಳಾಗಿವೆ.
HMPV ತೀವ್ರ ಸೋಂಕಿದ್ದರೆ ಮಕ್ಕಳು, ವಯಸ್ಕರಿಗೆ ಉಸಿರಾಟದ ಸಮಸ್ಯೆ ಕಾಡಲಿದೆ.
ಸೋಂಕಿತರ ಸಂಪರ್ಕದಿಂದ ಮತ್ತೊಬ್ಬರಿಗೆ HMPV ಹರಡಲಿದೆ.