Asianet Suvarna News Asianet Suvarna News

ಆಸ್ಪತ್ರೆಗಳ ಔಷಧ, ಸಾಮಗ್ರಿಗಳ ಖರೀದಿಯಲ್ಲಿ ಗೋಲ್‌ಮಾಲ್..!

ಸ್ಥಳೀಯ ಆಸ್ಪತ್ರೆ ಹಾಗೂ ವಿವಿಧ ಸಂಸ್ಥೆಗಳ ಖರೀದಿ ಪ್ರಕ್ರಿಯೆಯಲ್ಲಿ ಟೆಂಡರ್ ಅವ್ಯವಹಾರ ನಡೆದಿರುವುದು ವಿಚಕ್ಷಣಾದಳದ ಪರಿಶೀಲನೆ ವೇಳೆ ಪತ್ತೆಯಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳು ಪತ್ತೆಯಾಗಿದ್ದು ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ನೀಡಿ ಔಷಧ, ಸಾಮಗ್ರಿ ಖರೀದಿ ಮಾಡಿ ಅವ್ಯವಹಾರ ಎಸಗಲಾಗಿದೆ.

Scam in Procurement Process of Medicines and Materials in Hospitals in Karnataka grg
Author
First Published May 22, 2024, 12:07 PM IST

ಬೆಂಗಳೂರು(ಮೇ.22):  ಆರೋಗ್ಯ ಇಲಾಖೆಯ ವಿವಿಧ ಸಂಸ್ಥೆ ಹಾಗೂ ಆಸ್ಪತ್ರೆಗಳಲ್ಲಿನ ಔಷಧ, ಸಾಮಗ್ರಿ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಖರೀದಿ ಟೆಂಡರ್‌ನಲ್ಲೂ ಕೆಟಿಟಿಪಿ ನಿಯಮ ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ. 

ಸ್ಥಳೀಯ ಆಸ್ಪತ್ರೆ ಹಾಗೂ ವಿವಿಧ ಸಂಸ್ಥೆಗಳ ಖರೀದಿ ಪ್ರಕ್ರಿಯೆಯಲ್ಲಿ ಟೆಂಡರ್ ಅವ್ಯವಹಾರ ನಡೆದಿರುವುದು ವಿಚಕ್ಷಣಾದಳದ ಪರಿಶೀಲನೆ ವೇಳೆ ಪತ್ತೆಯಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳು ಪತ್ತೆಯಾಗಿದ್ದು ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ನೀಡಿ ಔಷಧ, ಸಾಮಗ್ರಿ ಖರೀದಿ ಮಾಡಿ ಅವ್ಯವಹಾರ ಎಸಗಲಾಗಿದೆ.

ಡೆಂಗ್ಯೂ ಭೀತಿಗೆ ಆಂತಕಗೊಂಡಿರೋ ಚಿತ್ರದುರ್ಗದ ಜನರು: ಆರೋಗ್ಯ ಇಲಾಖೆಯಿಂದ ನಿಗಾ!

ಈ ಹಿನ್ನೆಲೆಯಲ್ಲಿ ರಾಜ್ಯ ಅನುದಾನ, ಎಬಿ-ಎಆರ್‌ಕೆ ಅನುದಾನ ಅಥವಾ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನ ಗಳಲ್ಲಿ ಖರೀದಿಸುವ ಪ್ರತಿಯೊಂದು ಸಾಮಗ್ರಿ, ಔಷಧ ಖರೀದಿ ಪ್ರಕ್ರಿಯೆಗೆ ಮೊದಲು ಕರ್ನಾಟಕ ಸಾರ್ವಜನಿಕ ಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅನ್ವಯ ದರಪಟ್ಟಿ ಸಿದ್ದಪಡಿಸಬೇಕು. ಈ ದರಪಟ್ಟಿ ಪ್ರಕಾರ ಔಷಧ, ಸಾಮಗ್ರಿ ಪೂರೈಕೆಗೆ ಕಡ್ಡಾಯವಾಗಿ ಪ್ರಕಟಣೆ ಹೊರ ಡಿಸಬೇಕು. ಪೂರೈಕೆದಾರರಿಗೆ ಒಂದು ವಾರ ಗಡುವು ನೀಡಿ ಕಡಿಮೆ ದರದಲ್ಲಿ ಪೂರೈಕೆಗೆ ಮುಂದೆ ಬಂದವರಿಗೆ ಮಾತ್ರವೇ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಈ ನಿಯಮವನ್ನು ಉಲ್ಲಂಘಿಸಿದರೆ ಇಲಾಖೆಗೆ ಉಂಟಾಗುವ ಆರ್ಥಿಕ ನಷ್ಟ ವನ್ನು ಅಂತಹ ಅಧಿಕಾರಿ, ಸಿಬ್ಬಂದಿಯಿಂದ ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. 

Latest Videos
Follow Us:
Download App:
  • android
  • ios