Asianet Suvarna News Asianet Suvarna News

ಡೆಂಗ್ಯೂ ಭೀತಿಗೆ ಆಂತಕಗೊಂಡಿರೋ ಚಿತ್ರದುರ್ಗದ ಜನರು: ಆರೋಗ್ಯ ಇಲಾಖೆಯಿಂದ ನಿಗಾ!

ಕೋಟೆನಾಡು ಚಿತ್ರದುರ್ಗವೊಂದು ಪ್ರವಾಸಿತಾಣ‌ವಾಗಿದ್ದು, ಆದ್ರೆ ಅಲ್ಲೀಗ ಡೆಂಗ್ಯೂ ಜ್ವರದ ಭೀತಿ ಅರಿಸಿದೆ.‌ ವರ್ಷದ ಪ್ರಾರಂಭದಲ್ಲೇ ಜಿಲ್ಲೆಯಾದ್ಯಂತ ಡೆಂಗಿ ಪ್ರಕರಣಗಳು ಊಹೆಗೂ ಮೀರಿ ಹೆಚ್ಚಳವಾಗಿದ್ದು ಕೋಟೆನಾಡಿನ ಜನರಲ್ಲಿ ಬಾರಿ ಆತಂಕ ಸೃಷ್ಟಿಸಿದೆ.

Dengue fever is a threat to the people of Chitradurga Monitoring by health department gvd
Author
First Published May 20, 2024, 6:36 PM IST

ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮೇ.20): ಕೋಟೆನಾಡು ಚಿತ್ರದುರ್ಗವೊಂದು ಪ್ರವಾಸಿತಾಣ‌ವಾಗಿದ್ದು, ಆದ್ರೆ ಅಲ್ಲೀಗ ಡೆಂಗ್ಯೂ ಜ್ವರದ ಭೀತಿ ಅರಿಸಿದೆ.‌ ವರ್ಷದ ಪ್ರಾರಂಭದಲ್ಲೇ ಜಿಲ್ಲೆಯಾದ್ಯಂತ ಡೆಂಗಿ ಪ್ರಕರಣಗಳು ಊಹೆಗೂ ಮೀರಿ ಹೆಚ್ಚಳವಾಗಿದ್ದು ಕೋಟೆನಾಡಿನ ಜನರಲ್ಲಿ ಬಾರಿ ಆತಂಕ ಸೃಷ್ಟಿಸಿದೆ. ಡೆಂಗ್ಯು ಜ್ವರದಿಂದ ಬಳಲುತ್ತಿರೋ ರೋಗಿಗಳು, ಜನರಲ್ಲಿ ನಿರ್ಮಾಣವಾದ ಪ್ರಾಣಭಯ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗದ ಜಿಲ್ಲಾಸ್ಪತ್ರೆ ‌ಹೌದು, 2024ರ ಜನವರಿಯಿಂದ ಮೇ 16ರವರೆಗೆ ಬರೋಬ್ಬರಿ 200 ಜನ ಡೆಂಗ್ಯೂ ರೋಗದಿಂದ ಬಳಲಿದ್ದಾರೆ. 

ಅದರಲ್ಲೂ ಚಿತ್ರದುರ್ಗ ತಾಲ್ಲೂಕಿನಲ್ಲೇ 133 ಜನರಲ್ಲಿ ಡೆಂಗ್ಯು ಸೊಂಕು ಪತ್ತೆಯಾಗಿದ್ದು, ಚಿತ್ರದುರ್ಗ ನಗರದಾದ್ಯಂತ ಕಾಣದ ಸ್ವಚ್ಛತೆ ಹಾಗು ಮಳೆಯಿಲ್ಲದೇ ಶುರುವಾದ ನೀರಿನ ಅಭಾವದಿಂದಾಗಿ ಮನೆಗಳಲ್ಲಿ  ಸ್ಟಾಕ್ ಮಾಡ್ತಿರುವ ನೀರಿನಿಂದಲೇ ಜಿಲ್ಲೆಯಾದ್ಯಂತ ಡೆಂಗ್ಯುರೋಗ ಉಲ್ಬಣಿಸುತ್ತಿದೆ. ಈವರೆಗೆ ಬಿಸಿಲ ತಾಪಮಾನ ಏರಿಕೆಯಿಂದ ಹೈರಾಣಾಗಿದ್ದ ಕೋಟೆನಾಡಿನ ಜನರ ಮೇಲೆ ಡೆಂಗ್ಯು ಕಾರ್ಮೋಡ ಸಹ ಆವರಿಸಿದೆ. ಜೊತೆಗೆ ಮುಂಗಾರು ಮಳೆ ಸಂದರ್ಭದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದ ಈ ರೋಗ  ಈ ಬಾರಿ ಸಕಾಲಕ್ಕೆ ಮಳೆ ಬಾರದಿದ್ದರು ಕೂಡ ರೋಗ ಹೆಚ್ಚಾಗಿದ್ದು, ಕಳೆದ ಎಂಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಅವಧಿಗೂ ಮುನ್ನ ರೋಗದ ತೀವ್ರತೆ ಹೆಚ್ಚಾಗಿದೆ. 

2017ರಲ್ಲಿ  582  ಪ್ರಕರಣ ಪತ್ತೆಯಾಗಿದ್ದೂ,ಚಿತ್ರದುರ್ಗ ಜಿಲ್ಲೆ ಒಂದೆರೆಡು ಸಂಖ್ಯೆಯಲ್ಲಿ ಮಾತ್ರ ಡೆಂಗ್ಯು ಕೇಸ್ ಗಳಿರ್ತಿದ್ದವು‌.. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೆ 1,765 ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 1,417 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, 200 ಪ್ರಕರಣ ಖಚಿತಗೊಂಡಿವೆ ಎಂದು ಜಿಲ್ಲಾ‌ ಸರ್ವೇಕ್ಷಣಾಧಿಕಾರಿಗಳು. ಇನ್ನು ಚಿತ್ರದುರ್ಗ ನಗರದ ಸ್ವಾಮಿ ವಿವೇಕಾನಂದ ನಗರ, ಜೋಗಿಮಟ್ಟಿ ರಸ್ತೆ, ಸ್ಟೇಡಿಯಂ ರಸ್ತೆ, ದರ್ಜಿ ಕಾಲೊನಿ, ಗೋಪಾಲಪುರ ರಸ್ತೆ, ಹಿಮ್ಮತನಗರ, ರಾಮ್‌ದಾಸ್‌ ಕಾಂಪೌಂಡ್‌, ನೆಹರೂ ನಗರ, ಬುರುಜನಹಟ್ಟಿ, ಕುಂಬಾರ ಬೀದಿ, ಕಾಮನಬಾವಿ ಸೇರಿದಂತೆ ಸೋಂಕು ಹೆಚ್ಚಳದ ಪ್ರದೇಶಗಳಿಗೆ ಆರೋಗ್ಯ ಇಲಾಖೆ ಹೆಚ್ಚಿನ ಗಮನ ಹರಿಸಿದೆ. 

Chitradurga: ಕೋಟೆನಾಡಿನ ಬೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕರೆಂಟ್ ಶಾಕ್!

ಆದರೆ ಈ ಪ್ರದೇಶಗಳಲ್ಲೇ ಸ್ವಚ್ಛತೆ ಅನ್ನೋದು ಮರಿಚಿಕೆಯಾದ ಪರಿಣಾಮ‌ ದಿನದಿಂದ‌ದಿನಕ್ಕೆ ಇಲ್ಲಿ ಡೆಂಗ್ಯು ಭೀತಿ ಹೆಚ್ಚಾಗ್ತಿದೆ. ಅಲ್ಲದೇ ಮಳೆಗಾಲ ತೀವ್ರಗೊಂಡರೆ ಸಮಸ್ಯೆ ಅಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಆದ್ದರಿಂದ ನಗರಸಭೆ ಹಾಗು ಜಿಲ್ಲಾಡಳಿತ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಾಗರೀಕರು ಆಗ್ರಹಿಸಿದ್ದಾರೆ. ಒಟ್ಟಾರೆ ಈಡಿಸ್ ಈಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಡೆಂಗಿ ಜ್ವರ ನಿಯಂತ್ರಿಸಲು ಇಲಾಖೆ ಮುಂದಾಗಬೇಕಿದೆ. ಜನರು ಸಹ  ನೀರಿನ ಶೇಖರಣೆಗಳಾದ ಸಿಮೆಂಟ್‌ ತೊಟ್ಟಿ, ಡ್ರಮ್ಮು, ಬ್ಯಾರೆಲ್‌, ಮಣ್ಣಿನ ಮಡಿಕೆ ಮುಂದಾದ ಕಡೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಿದೆ.

Latest Videos
Follow Us:
Download App:
  • android
  • ios