Save Soil Movement: ‘ಮಣ್ಣು ಉಳಿಸಿ’ಗೆ ಹಾಲಿ, ಮಾಜಿ ಸಿಎಂಗಳ ಬೆಂಬಲ
ಈಶ ಫೌಂಡೇಷನ್ ಸಂಸ್ಥಾಪಕರಾದ ಸದ್ಗುರು ಕರೆ ಕೊಟ್ಟಿರುವ ‘ಮಣ್ಣು ಉಳಿಸಿ’ ಜಾಗತಿಕ ಅಭಿಯಾನಕ್ಕೆ ಕರ್ನಾಟಕದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಕೈ ಜೋಡಿಸಿದ್ದಾರೆ.
ಬೆಂಗಳೂರು (ಮೇ.24): ಈಶ ಫೌಂಡೇಷನ್ ಸಂಸ್ಥಾಪಕರಾದ ಸದ್ಗುರು ಕರೆ ಕೊಟ್ಟಿರುವ ‘ಮಣ್ಣು ಉಳಿಸಿ’ ಜಾಗತಿಕ ಅಭಿಯಾನಕ್ಕೆ ಕರ್ನಾಟಕದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಕೈ ಜೋಡಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಆರಂಭವಾಗಿರುವ ‘ಮಣ್ಣು ಉಳಿಸಿ’ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಸೇರಿದಂತೆ ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ವೀರಪ್ಪ ಮೊಯ್ಲಿ, ಡಿ.ವಿ.ಸದಾನಂದಗೌಡ ಬೆಂಬಲ ನೀಡಿದ್ದಾರೆ.
27 ದೇಶಗಳಿಗೆ ಬೈಕ್ ಯಾತ್ರೆ: ಅಭಿಯಾನದ ಭಾಗವಾಗಿ ಸದ್ಗುರು ಅವರು 100 ದಿನಗಳಲ್ಲಿ 30 ಸಾವಿರ ಕಿ.ಮೀ. ಬೈಕ್ ಯಾತ್ರೆ ನಡೆಸುತ್ತಿದ್ದಾರೆ. ಮಾಚ್‌ರ್ 21 ರಂದು ಲಂಡನ್‌ನಿಂದ ಆರಂಭವಾದ ಬೈಕ್ ಯಾತ್ರೆ ಯುರೋಪ್, ಮಧ್ಯ ಏಷ್ಯಾದ 27 ರಾಷ್ಟ್ರಗಳಲ್ಲಿ ಸಾಗುತ್ತಿದೆ. ಅಲ್ಲಿನ ರಾಜಕೀಯ ನಾಯಕರು, ಉದ್ಯಮಿಗಳು, ಪತ್ರಕರ್ತರು, ಸೆಲೆಬ್ರಿಟಿಗಳು, ಸಾರ್ವಜನಿಕರನ್ನು ಭೇಟಿ ಮಾಡಿ ಮಣ್ಣು ಉಳಿಸುವ ಅನಿವಾರ್ಯತೆಯನ್ನು ಸದ್ಗುರು ಮನದಟ್ಟು ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆ ದೇಶಗಳ ಸರ್ಕಾರಗಳಿಗೆ ನೀತಿಗಳನ್ನು ರೂಪಿಸುವ ಮೂಲಕ ತುರ್ತು ಕ್ರಮ ಕೈಗೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಈಗಾಗಲೇ ಹಲವು ದೇಶಗಳ ಮುಖ್ಯಸ್ಥರು, ಜಾಗತಿಕ ನಾಯಕರು, ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು ಹಾಗೂ ವಿಶ್ವಸಂಸ್ಥೆ ಅಂಗ ಸಂಸ್ಥೆಗಳು ಅಭಿಯಾನಕ್ಕೆ ಬೆಂಬಲ ಸೂಚಿಸಿವೆ.
Save Soil: ಸದ್ಗುರು ಬೈಕ್ ರ‍್ಯಾಲಿ ನೆದರ್‌ಲೆಂಡ್ ಪ್ರವೇಶ
ಅರಮನೆ ಮೈದಾನದಲ್ಲಿ ಕಾರ್ಯಕ್ರಮ: ಜೂನ್ 19ರಂದು ಸದ್ಗುರು ಕರ್ನಾಟಕ ತಲುಪಲಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ಮಾಜಿ ಮುಖ್ಯಮಂತ್ರಿಗಳು ಮತ್ತು ಹಲವಾರು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸದ್ಗುರುಗಳ ಮಣ್ಣು ಉಳಿಸಿ ಯಾತ್ರೆಯು ಜೂನ್‌ನಲ್ಲಿ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಸಾಗುವ ಮೂಲಕ ಮುಕ್ತಾಯಗೊಳ್ಳಲಿದೆ.
ಮಣ್ಣು ಉಳಿಸಿ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ: ಭೂಮಿಯ ಮತ್ತು ಮಣ್ಣಿನ ಸಂರಕ್ಷಣೆಯ ಸಲುವಾಗಿ ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಚಾಲನೆ ನೀಡಿದರು. ಸದ್ಗುರು ಜಗ್ಗಿ ವಾಸುದೇವ್ ಈಗಾಗಲೇ ಕಾವೇರಿ ಉಳಿಸಿ ಅಭಿಯಾನವನ್ನು ನಡೆಸುತ್ತಿದ್ದಾರೆ. ಕಾವೇರಿ ನದಿಯ ರಕ್ಷಣೆಗೆ ಈಗಾಗಲೇ ದೊಡ್ಡಮಟ್ಟದ ಅಭಿಯಾನ ನಡೆಯುತ್ತಿದೆ ಈ ನಡುವೆ ಸದ್ಗುರು ಮಣ್ಣು ಉಳಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಉಳಿಸಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು.
Save Soil: ಚೆಕ್ ದೇಶದಲ್ಲಿ ಸದ್ಗುರು ‘ಮಣ್ಣು ಉಳಿಸಿ’ ಜಾಗೃತಿ
ಮಣಿಪಾಲದ ಕಾಯಿನ್ ಸರ್ಕಲ್ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಣ್ಣಿನ ಶ್ರೇಷ್ಠತೆಯ ಬಗ್ಗೆ ಅದರ ರಕ್ಷಣೆಯ ಬಗ್ಗೆ ಸದ್ಗುರು ಅನುಯಾಯಿಗಳ ಜೊತೆ ಮಾತನಾಡಿದರು. ಮಣ್ಣಿನ ರಕ್ಷಣೆ ಬಹಳ ಅಗತ್ಯ. ಸಾರ್ವಜನಿಕರಲ್ಲಿ ಮಣ್ಣಿನ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಸದ್ಗುರು ನಿಸರ್ಗದ ರಕ್ಷಣೆಗೆ ದೊಡ್ಡ ಅಭಿಯಾನ ಮಾಡುತ್ತಿದ್ದಾರೆ. ಸೇವ್ ಕಾವೇರಿ, ಮಣ್ಣು ಉಳಿಸಿ ಅಭಿಯಾನವನ್ನು ಸದ್ಗುರು ಶುರು ಮಾಡಿದ್ದಾರೆ. ಮಣ್ಣಿಗೂ ಮನುಷ್ಯರಿಗೂ ನೇರವಾದ ಸಂಬಂಧವಿದೆ ಎಂದರು.