ಸ್ಯಾಂಡಲ್‌ವುಡ್ ನಟರು ಕಾವೇರಿ ಹೋರಾಟಕ್ಕೆ ಬನ್ನಿ: ಯಶ್, ಸುದೀಪ್, ಶಿವರಾಜ್‌ಕುಮಾರ್ ವಿರುದ್ಧ ಆಕ್ರೋಶ
ಕನ್ನಡ ನಾಡಿನ ರೈತರಿಗೆ ಅನ್ಯಾಯವಾದರೆ ರಾಜಣ್ಣ, ಅಂಬರೀಶ್, ವಿಷ್ಣುವರ್ಧನ್ ಬರುತ್ತಿದ್ದರು. ಇಂದು ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟರು ಬರಬೇಕು ಎಂದು ಕನ್ನಡಿಗರ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಬೆಂಗಳೂರು (ಸೆ.20): ಕನ್ನಡ ನಾಡಿನ ರೈತರಿಗೆ ಅನ್ಯಾಯವಾದಾಗ ಮುನ್ನುಗ್ಗಿ ಬರುವಂಥ ಶಕ್ತಿ ಕನ್ನಡ ಚಲನಚಿತ್ರ ರಂಗದಲ್ಲಿ ಡಾಕ್ಟರ್ ರಾಜಣ್ಣ, ಮಂಡ್ಯದ ಗಂಡು ಅಂಬರೀಶ್, ವಿಷ್ಣುವರ್ಧನ್ ಅವರಿಗೆ ಮಾತ್ರ ಇತ್ತು. ಆದರೆ, ಇಂದು ಕಾವೇರಿ ಹೋರಾಟದ ಬಗ್ಗೆ ತಲೆಕೆಡಿಸಿಕೊಳ್ಳದ ಮೂರ್ಖ ಕನ್ನಡ ಚಿತ್ರರಂಗದ ನಟರುಗಳಿಗೆ ಧಿಕ್ಕಾರ... ಧಿಕ್ಕಾರ ಎಂದು ಕನ್ನಡಿಗರ ರಕ್ಷಣಾ ವೇದಿಕೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು. ]
ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಿತ್ರನಟರ ಫೋಟೋಗಳನ್ನು ಹಾಕಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಕನ್ನಡಿಗರ ರಕ್ಷಣಾ ವೇದಿಕೆಯ ಕನ್ನಡ ಪ್ರಕಾಶ್ ಅವರು, ಕನ್ನಡ ಚಲನಚಿತ್ರ ನಟರೇ ಯಾಕೆ ಈ ಮೌನ? ನಿಮಗೆ ಕಾವೇರಿ ನೀರನ ಬಗ್ಗೆ ಕಾಳಜಿ ಇಲ್ಲವೇ? ನೀವು ಕಾವೇರಿ ನೀರು ಕುಡಿಯುವುದಿಲ್ಲವೇ? ನಿಮ್ಮ ಮೈಯಲ್ಲಿ ಕನ್ನಡದ ರಕ್ತ ಹರಿಯುತ್ತಿಲ್ಲವೇ? ನಿಮ್ಮ ಸ್ವಾಭಿಮಾನ ಸತ್ತು ಹೋಗಿದೆಯೇ? ನಿಮಗೆ ನಿಮ್ಮ ಪ್ಯನ್ ಇಂಡಿಯಾ ಚಿತ್ರಗಳೇ ಮುಖ್ಯವೇ? ಸಾಕು ಮಾಡಿ ನಿಮ್ಮ ಗುಲಾಮಗಿರಿತನ ನಿಮ್ಮನ್ನು ಬೆಳೆಸಿರುವುದು ಕಾವೇರಿ ನೀರು ಕುಡಿದು ಬೆಳೆದ ಕನ್ನಡಿಗರು ಎನ್ನುವುದನ್ನು ಮರೆಯಬೇಡಿ ಕಿಂಚಿತ್ತಾದರೂ ಸ್ವಾಭಿಮಾನ ತೋರಿಸಿ ಕಾವೇರಿಯ ಕುರಿತು ಧ್ವನಿ ಎತ್ತಿ ಎಂದು ಆಗ್ರಹಿಸಿದ್ದಾರೆ.
ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಹೆಚ್ಚಿದ ಕಾವೇರಿ ಕಿಚ್ಚು
ಕನ್ನಡ ನಾಡಿನ ರೈತರಿಗೆ ಅನ್ಯಾಯವಾದಾಗ ಮುನ್ನುಗ್ಗಿ ಬರುವಂಥ ಶಕ್ತಿ... ಕನ್ನಡ ಚಲನಚಿತ್ರ ರಂಗದಲ್ಲಿ ಡಾಕ್ಟರ್ ರಾಜಣ್ಣ ಮಂಡ್ಯದ ಗಂಡು ಅಂಬರೀಶ್. ವಿಷ್ಣುವರ್ಧನ್ ನವರಿಗೆ ಮಾತ್ರ ಇತ್ತು... ಇಂದು ಅವರ ಕೂಗಿಲ್ಲದೆ ಎಷ್ಟೋ ರೈತರು ಹಾಗೂ ಕನ್ನಡದ ಮಕ್ಕಳು ಪರಭಾಶಿಗರ ಒತ್ತಡಕ್ಕೆ ಸಿಲುಕಿ ನಮ್ಮ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಚಲನಚಿತ್ರ ನಟರನ್ನು ನಂಬದೇ ಇನ್ನಾದರೂ 7 ಕೋಟಿ ಕನ್ನಡಿಗರು ರೈತರ ಪರವಾಗಿ ನಿಲ್ಲಬೇಕೆಂದು ನಿಮ್ಮಲ್ಲಿ ಕೈಮುಗಿದು ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ರೈತ ಉಳಿದರೆ ನಾವೆಲ್ಲ, ರೈತನಿಲ್ಲದ ಜಗವಿಲ್ಲ. ನಮ್ಮ ನಿರಂತರ ಹೋರಾಟ ಕಾವೇರಿಗಾಗಿ ಎಂದು ಜೈ ಕಾವೇರಮ್ಮ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.